For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಹುಟ್ಟುಹಬ್ಬಕ್ಕೆ ಸಿನಿಗಣ್ಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

  |

  ನಟಸಾರ್ವಭೌಮ ಡಾ.ರಾಜ್ ಕುಮಾರ್ ಜನ್ಮದಿನದ ಸವಿನೆನಪು. ಅಭಿಮಾನಿಗಳಿಗೆ ಇಂದು ಹಬ್ಬದ ಸಂಭ್ರಮ. ಡಾ.ರಾಜ್ ಅವರ 91ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ ಅನೇಕರು ಶುಭ ಕೋರಿ ರಾಜ್ ಸ್ಮರಣೆ ಮಾಡಿದ್ದಾರೆ. ಪ್ರತೀವರ್ಷ ರಾಜ್ ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು.

  ಅಣ್ಣಾವ್ರ ಹುಟ್ಟುಹಬ್ಬದಂದು ಸಮಾಧಿಗೆ ಗೌರವ ಸಲ್ಲಿಸಿದ ಶಿವಣ್ಣ | RajKumar | Shivaraj kumar

  ಕೊರೊನಾ ಹಾವಳಿಯ ಪರಿಣಾಮ ಈ ಬಾರಿ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಕುಳಿತು ಸಂಭ್ರಮಿಸಬೇಕಾಗಿದೆ. ಲಾಕ್ ಡೌನ್ ನಡುವೆಯೂ ಸರಳವಾಗಿ ರಾಜ್ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕವೇ ಡಾ.ರಾಜ್ ಗೆ ಶುಭಾಶಯ ಕೋರುತ್ತಿದ್ದಾರೆ. ದರ್ಶನ್, ಸುದೀಪ್, ರಮೇಶ್ ಅರವಿಂದ್, ಜಗ್ಗೇಶ್ ಸೇರಿದಂತೆ ಅನೇಕ ಗಣ್ಯರು ವಿಶ್ ಮಾಡಿದ್ದಾರೆ. ಯಾರ್ಯಾರ ವಿಶ್ ಹೇಗಿದೆ? ಮುಂದೆ ಓದಿ...

  Quiz: ಡಾ. ರಾಜ್ ಕುಮಾರ್ ಕುರಿತ 10 ಪ್ರಶ್ನೆಗಳಿಗೆ ನಿಮ್ಮ ಉತ್ತರವೇನು?Quiz: ಡಾ. ರಾಜ್ ಕುಮಾರ್ ಕುರಿತ 10 ಪ್ರಶ್ನೆಗಳಿಗೆ ನಿಮ್ಮ ಉತ್ತರವೇನು?

  ನಟ ದರ್ಶನ್ ಶುಭಾಶಯ

  ನಟ ದರ್ಶನ್ ಶುಭಾಶಯ

  "ವರನಟ ಡಾ|| ರಾಜ್ ಕುಮಾರ್ ರವರ ಹುಟ್ಟುಹಬ್ಬದ ಸವಿನೆನಪಿನಲ್ಲಿ. ಅಣ್ಣಾವ್ರು ತಮ್ಮ ಪಾತ್ರಗಳ ಹಾಗೂ ಆದರ್ಶಮಯ ಜೀವನದ ಮೂಲಕ ಕನ್ನಡ ನಾಡಿನ ಮನೆ ಮನೆಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ನಿಮ್ಮ ದಾಸ ದರ್ಶನ್" ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಕೋರಿದ್ದಾರೆ.

  ಅಪರೂಪದ ಫೋಟೋ ಶೇರ್ ಮಾಡಿ ಸುದೀಪ್ ವಿಶ್

  ಅಪರೂಪದ ಫೋಟೋ ಶೇರ್ ಮಾಡಿ ಸುದೀಪ್ ವಿಶ್

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ವರನಟನಿಗೆ ಶುಭಾಶಯ ಕೋರಿದ್ದಾರೆ. ರಾಜ್ ಕುಮಾರ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡಿರುವ ಸುದೀಪ್ "ಮಹಾನ್ ಲೆಜೆಂಡ್ ಜೊತೆ ಅಪರೂಪದ ಕ್ಷಣ ಹಂಚಿಕೊಂಡಿರುವುದೇ ಪುಣ್ಯ. ಡಾ.ರಾಜ್ ಕುಮಾರ್ ಅಣ್ಣಾವ್ರರಿಗೆ ಜನ್ಮದಿನದ ಶುಭಾಶಯಗಳು" ಎಂದು ಹೇಳಿದ್ದಾರೆ.

  ಮುತ್ತು ಧರೆಗೆ ಉದುರಿದ ದಿನದ ನೆನಪು: ಜಗ್ಗೇಶ್

  ಮುತ್ತು ಧರೆಗೆ ಉದುರಿದ ದಿನದ ನೆನಪು: ಜಗ್ಗೇಶ್

  "1929 ಸಾಮಾನ್ಯ ಕಲಾಕುಟುಂಬಕ್ಕೆ ವರವಾಯಿತು ಅನರ್ಘ್ಯರತ್ನ. ಮುತ್ತು ಎಂದು ಇಟ್ಟ ಹೆಸರು ಮುಂದೆ ಮುಕುಟವಿಲ್ಲದ ರಾಜಕುಮಾರನಾಗಿ ಕನ್ನಡ ಎಂಬ ಹೃದಯಕ್ಕೆ ಶಾಶ್ವತ ಶಬ್ದವಾಗಿ ಉಳಿದು ನೆಪಕ್ಕೆ ಹೋಗಿದೆ. ಆ ಮುತ್ತು ಧರೆಗೆ ಉದುರಿದ ದಿನದ ನೆನಪು ಆ ಜನ್ಮ ನೋಡಿ ಕಲಿತ ಮನುಜನ ನಮಸ್ಕಾರ ಸಮರ್ಪಣೆ. ಮತ್ತೆ ಬನ್ನಿ ಕಾಯುತಿದೆ ಕೋಟಿ ಮನಗಳು" ಎಂದು ನಟ ಜಗ್ಗೇಶ್ ಬಣ್ಣಿಸಿದ್ದಾರೆ.

  ನಟ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್

  ನಟ ರಮೇಶ್ ಅರವಿಂದ್ ಅಮೆರಿಕಾ ಅಮೆರಿಕಾ ಸಿನಿಮಾದ ರಿಲೀಸ್ ಸಮಯವನ್ನು ನೆನಪಿಸಿಕೊಂಡಿದ್ದಾರೆ. ಅಮೆರಿಕಾ ಅಮೆರಿಕಾ ಸಿನಿಮಾದ ಆಡಿಯೋ ರಿಲೀಸ್ ಮಾಡಿ, ನನ್ನನ್ನು ತಬ್ಬಿಕೊಂಡರು. 20 ವರ್ಷದ ನಂತರವು ಇನ್ನೂ ವಾರ್ಮ್ ಅನುಭವಿಸುತ್ತಿದ್ದೀನಿ" ಎಂದು ಹೇಳಿದ್ದಾರೆ.

  ನಿರ್ಮಾಪಕ ವಿಜಯ್ ಕಿರಗಂದೂರು

  ನಿರ್ಮಾಪಕ ವಿಜಯ್ ಕಿರಗಂದೂರು

  "ಕರ್ನಾಟಕ ರತ್ನ, ಕನ್ನಡ ನಾಡಿನ ಮರೆಯಲಾಗದ ಮಾಣಿಕ್ಯ ನಟಸಾರ್ವಭೌಮ ಅವರ ಹುಟ್ಟುಹಬ್ಬದ ದಿನವಿಂದು. ಸಾಮಾನ್ಯ ದಿನಗಳಲ್ಲಿ ಇಂದು ಚಿತ್ರರಂಗ, ಅಭಿಮಾನಿ ಬಳಗಕ್ಕೆ ಹಬ್ಬದ ವಾತಾವರಣ. ಈ ಸಂಕಷ್ಟದ ದಿನಗಳಲ್ಲಿ ಆಚರಣೆ ಬೇಡ. ಅವರ ಮಹಾನ್ ವ್ಯಕ್ತಿತ್ವವನ್ನು ಸ್ಮರಿಸೋಣ" ಎಂದು ಹೇಳಿದ್ದಾರೆ.

  ಸಂತೋಷ್ ಆನಂದ್ ರಾಮ್

  ಸಂತೋಷ್ ಆನಂದ್ ರಾಮ್

  "ಕೀರ್ತಿಯನ್ನು ಪ್ರೀತಿಯಾಗಿ ನೋಡಿ, ಹಣಕ್ಕಿಂತ ಗುಣದ ಮೌಲ್ಯ ದೊಡ್ಡದೆಂದು ತೋರಿ, ಭಾಷೆಗೆ ತಾಯಿಸ್ಥಾನ ಕೊಟ್ಟು, ಅಭಿಮಾನಕ್ಕೆ ದೇವರ ಸ್ಥಾನ ಕೊಟ್ಟು, ಯಶಸ್ಸು ಅಂಗೈಲ್ಲಿದ್ದರು ಕಲಾದೇವಿಯ ಅಂಗೈ ಹಿಡಿದು ನೆಡೆಯುತ್ತಿದ್ದ ನಟಸಾರ್ವಭೌಮ. ರಾಜ್ಯವೇ ಅಪ್ಪಾಜಿ ಎಂದು ಕರೆದು ತಂದೆಯ ಸ್ಥಾನದಲ್ಲಿ ಕಂಡರೂ ಮಗುವಾಗಿ ಉಳಿದ, ನಗುವಾಗಿ ಉಳಿದ ರಾಜಕುಮಾರ" ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.

  ನಿರ್ದೇಶಕ ಯೋಗರಾಜ್ ಭಟ್

  ನಿರ್ದೇಶಕ ಯೋಗರಾಜ್ ಭಟ್

  "ನಾವಿಡುವ ಪ್ರತಿ ಹೆಜ್ಜೆಗೂ ನೀವೇ ಸ್ಫೂರ್ತಿ. ಹುಟ್ಟು ಹಬ್ಬದ ಶುಭಾಶಯಗಳು ರಾಜಣ್ಣ" ಎಂದು ನಿರ್ದೇಶಕ ಯೋಗರಾಜ್ ಭಟ್ ವಿಶ್ ಮಾಡಿದ್ದಾರೆ. ಇನ್ನೂ ಸಾಕಷ್ಟು ಗಣ್ಯರು ವಿಶ್ ಮಾಡಿ, ಕನ್ನಡದ ಮೇರುನಟನನ್ನು ಸ್ಮರಿಸಿದ್ದಾರೆ.

  ನಿರ್ದೇಶಕ ಜೋಗಿ ಪ್ರೇಮ್

  ನಿರ್ದೇಶಕ ಜೋಗಿ ಪ್ರೇಮ್

  "ಕನ್ನಡಕ್ಕೊಬ್ಬರೇ ರಾಜಕುಮಾರ. 91ನೇ ಜನ್ಮದಿನಾಚರಣೆಯ ಭಾವಪೂರ್ಣ ನಮನ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀವಿ ಅಪ್ಪಾಜಿ" ಎಂದು ರಾಜ್ ಕುಮಾರ್ ದಂಪತಿ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ವಿಶೇಷ ಅಂದರೆ ಪ್ರೇಮ್ ಅಭಿನಯದ ಜೋಗಿ ಸಿನಿಮಾದಲ್ಲಿ ರಾಜ್ ದಂಪತಿ ಕೊನೆಯದಾಗಿ ಕಾಣಿಸಿಕಂಡಿದ್ದಾರೆ.

  English summary
  Kannada film stars like Sudeep, Darshan, Jaggesh, Ramesh Aravind and others birthday wish to Dr.Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X