'ನಿನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು, ಮತ್ತೆ ಮಗುವಾಗು ನೀ' ಮುದ್ದು ಮಗಳಿಗೆ ಕಿಚ್ಚನ ಪ್ರೀತಿಯ ಸಂದೇಶ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಂಪತಿಗೆ ಇಂದು ವಿಶೇಷವಾದ ದಿನ. ಕಿಚ್ಚ ಮತ್ತು ಪತ್ನಿ ಪ್ರಿಯಾ ಇಬ್ಬರ ಸಂಭ್ರಮಕ್ಕೆ ಕಾರಣ ಅವರ ಪ್ರೀತಿಯ ಮಗಳು ಸಾನ್ವಿ. ಹೌದು, ಸುದೀಪ್ ಪುತ್ರಿ ಸಾನ್ವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
Recommended Video
16ನೇ ವಸಂತಕ್ಕೆ ಕಾಲಿಟ್ಟಿರುವ ಸಾನ್ವಿಗೆ ಅಪ್ಪ-ಅಮ್ಮ ಇಬ್ಬರು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಕಾರಣ ಅದ್ದೂರಿ ಸೆಲೆಬ್ರೇಷನ್ ಇಲ್ಲದಿದ್ದರೂ, ಮುದ್ದಿನ ಮಗಳಿಗೆ ಪ್ರೀತಿಯ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಪ್ರೀತಿಯ ಮಗಳಿಗೆ ಅಭಿನಯಚಕ್ರವರ್ತಿ ವಿಶೇಷವಾಗಿ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ಮುಂದೆ ಓದಿ...

16ನೇ ವಸಂತಕ್ಕೆ ಕಾಲಿಟ್ಟ ಸುದೀಪ್ ಪುತ್ರಿ
ಸುದೀಪ್ ಎಷ್ಟೇ ಬ್ಯುಸಿ ಇದ್ದರೂ ಮಗಳ ಹುಟ್ಟುಹಬ್ಬದ ಸಂಭ್ರಮವನ್ನು ಮಾತ್ರ ಯಾವತ್ತು ಮಿಸ್ ಮಾಡಿಕೊಳ್ಳುವುದಿಲ್ಲ. ಸುದೀಪ್ ಗೆ ಮಗಳೆಂದರೆ ಎಷ್ಟು ಪ್ರೀತಿ ಎನ್ನುವುದು ಎಲ್ಲರಿಗೂ ಗೊತ್ತು. ಎಲ್ಲೆ, ಯಾವುದೇ ಸಿನಿಮಾದ ಶೂಟಿಂಗ್ ನಲ್ಲಿದ್ದರೂ ಕಿಚ್ಚ ರಜೆ ಹಾಕಿ, ಹುಟ್ಟುಹಬ್ಬದ ದಿನ ಮಗಳ ಜೊತೆ ಸಮಯ ಕಳೆಯುತ್ತಾರೆ.

ಕಳೆದ ವರ್ಷ 'ದಬಾಂಗ್-3' ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದ ಕಿಚ್ಚ
ಕಳೆದ ವರ್ಷ ಇದೆ ಸಮಯದಲ್ಲಿ ಕಿಚ್ಚ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ದಬಾಂಗ್-3 ಚಿತ್ರೀಕರಣದಲ್ಲಿದ್ದರು. ಆದರೆ ಮಗಳ ಹುಟ್ಟುಹಬ್ಬದ ದಿನ ಚಿತ್ರೀಕರಣಕ್ಕೆ ರಜೆ ಹಾಕಿ ಮುಂಬೈನಿಂದ ಬೆಂಗಳೂರಿಗೆ ವಾಪಸ್ ಆಗಿದ್ದರು. ಮಗಳ ಹುಟ್ಟುಹಬ್ಬದ ದಿನ ಎಲ್ಲಾ ಕೆಲಸವನ್ನು ಬದಿಗೆ ಸರಿಸಿ ಮಗಳು, ಕುಟುಂಬದ ಜೊತೆ ಇದ್ದು ಹುಟ್ಟುಹಬ್ಬ ಸಂಭ್ರಮಿಸುತ್ತಾರೆ.

ಮಗಳಿಗೆ ಕಿಚ್ಚನ ಪ್ರೀತಿಯ ಸಂದೇಶ
ಈ ಬಾರಿ ಮಗಳಿಗೆ ಪ್ರೀತಿಯ ಸಂದೇಶವನ್ನು ರವಾನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಕಿಚ್ಚ "ನಿನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು, ನನ್ನ ಮಗಳೀಗ, ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ, ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ, ಕನಸು ನೀನು ನಿನ್ನಿಂದಲೇ ಕಲಿಯುವ, ಕೂಸು ನಾನು, ಆಸೆ ಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು" ಎಂದು ಬರೆದುಕೊಂಡಿದ್ದಾರೆ.

ಫೋಟೋ ಹಂಚಿಕೊಂಡಿರುವ ಕಿಚ್ಚ
ಜೊತೆಗೆ ಕುಟುಂಬದ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಪುಟ್ಟ ಮಗುವಾಗಿದ್ದಾಗಿನಿಂದಲೂ ಈಗ 16 ವರ್ಷತುಂಬಿರುವ ಸಾನ್ವಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ಸುದೀಪ್ ಮಗಳ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.


Click it and Unblock the Notifications











