ಸಂಕಷ್ಟದಲ್ಲಿರುವ ಶಿಕ್ಷಕರ ಸಹಾಯಕ್ಕೆ ಮುಂದಾದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಡೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲಾಗುತ್ತಿದೆ. ಕಿಚ್ಚನ ಕೈ ತುತ್ತು ಅಭಿಯಾನದಡಿ ಹಸಿದವರಿಗೆ ಊಟ, ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಧನ ಸಹಾಯ ಹೀಗೆ ಹಲವು ರೀತಿಯಲ್ಲಿ ಸುದೀಪ್ ಅಭಯಹಸ್ತ ಚಾಚಿದ್ದಾರೆ.

Recommended Video

ಕೂಡಿಟ್ಟ ಹಣವನ್ನು ಒಳ್ಳೆ ರೀತಿ ಉಪಯೋಗಿಸಲು ಮುಂದಾದ ಸುದೀಪ್ | Filmibeat Kannada

ಕನ್ನಡ ಇಂಡಸ್ಟ್ರಿಯ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ್ದರು. ಒಂದಿಷ್ಟು ಜನ ಹಿರಿಯ ಕಲಾವಿದರನ್ನು ಪಟ್ಟಿ ಮಾಡಿ, ಅವರ ಮನೆಗೆ ಖುದ್ದು ತಮ್ಮ ಆಪ್ತರನ್ನು ಕಳುಹಿಸಿ ವಿಶೇಷವಾದ ಗಿಫ್ಟ್‌ವೊಂದನ್ನು ಕೊಟ್ಟು ಆರೋಗ್ಯ ವಿಚಾರಿಸಿದ್ದರು.

ಸುದೀಪ್ ಕಾಳಜಿಗೆ ಹಿರಿಯ ಕಲಾವಿದರೆಲ್ಲರು ಭಾವುಕರಾಗಿ ಧನ್ಯವಾದ ಅರ್ಪಿಸಿದರು. ಇದೀಗ, ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯ ಮಾಡಲು ಸುದೀಪ್ ನಿರ್ಧರಿಸಿದ್ದಾರೆ.

Sudeep decided to help teachers who financial and struggling from covid

ಈ ಬಗ್ಗೆ ಸುದೀಪ್ ಚಾರಿಟೇಬಲ್ ಸೊಸೈಟಿ ಸದಸ್ಯರು ಮಾಹಿತಿ ನೀಡಿದೆ. ಮೊದಲ ಹಂತದಲ್ಲಿ ಸುಮಾರು 50 ಜನ ಶಿಕ್ಷಕರಿಗೆ ತಲಾ 2 ಸಾವಿರ ರೂಪಾಯಿ ನೀಡಲು ಸುದೀಪ್ ತೀರ್ಮಾನಿಸಿರುವ ವಿಚಾರ ಪ್ರಕಟಿಸಲಾಗಿದೆ.

ನಿಜವಾಗಲೂ ಕಷ್ಟದಲ್ಲಿರುವವರು, ನೆರವು ಬೇಕು ಎಂದುಕೊಂಡವರು ಸುದೀಪ್ ಚಾರಿಟೇಬಲ್ ಸೊಸೈಟಿಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ತಿಳಿಸಿದೆ. ಅದಕ್ಕಾಗಿ ಫೋನ್ ನಂಬರ್ ಸಹ ನೀಡಲಾಗಿದೆ.

More from Filmibeat

English summary
Kiccha Sudeep decided to help teachers who financial and struggling from covid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X