»   » ಫ್ರಾನ್ಸ್ ಚಲನಚಿತ್ರೋತ್ಸವಕ್ಕೆ ಕಿಚ್ಚ ಸುದೀಪ್ ಚಿತ್ರ

ಫ್ರಾನ್ಸ್ ಚಲನಚಿತ್ರೋತ್ಸವಕ್ಕೆ ಕಿಚ್ಚ ಸುದೀಪ್ ಚಿತ್ರ

Posted By:
Subscribe to Filmibeat Kannada

ಕನ್ನಡದ ಕಿಚ್ಚ ಸುದೀಪ್ ಮೊನ್ನೆಯಷ್ಟೇ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದರು. ಈಗ ಅವರ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಸುದೀಪ್ ಅಭಿನಯದ ತ್ರಿಭಾಷಾ ಚಿತ್ರ 'ಈಗ' ಫ್ರಾನ್ಸ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಪ್ಯಾರಿಸ್ ನಲ್ಲಿ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಸುದೀಪ್ ಅಭಿನಯದ ಈಗ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ವಿದೇಶಗಳಲ್ಲೂ ಬಿಡುಗಡೆಗೊಂಡಿದ್ದ ಈಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗಾಗಲೆ ಐವತ್ತು ದಿನಗಳನ್ನು ಪೂರೈಸಿರುವ ಈಗ ಚಿತ್ರ ಬಾಕ್ಸಾಫೀಸಲ್ಲಿ ಕಾಸಿನ ಮಳೆ ಸುರಿಸಿದೆ.

ಒಟ್ಟು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಇದುವರೆಗೂ ರು.125 ಕೋಟಿಗೂ ಅಧಿಕ ಹಣ ಗಳಿಸಿ ದಾಖಲೆ ನಿರ್ಮಿಸಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ರು. 17 ಕೋಟಿ ಗಳಿಸಿತ್ತು.

ಎಸ್ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದರು. ಈ ಚಿತ್ರದಲ್ಲಿ ಸುದೀಪ್ ಅವರದು ಖಳನಟನ ಪಾತ್ರವಾದರೂ ಹೆಚ್ಚು ಒತ್ತು ನೀಡಲಾಗಿತ್ತು. ನಾಯಕನ ಪಾತ್ರದಲ್ಲಿ ನಾನಿ ಹಾಗೂ ನಾಯಕಿಯಾಗಿ ಮೋಹಕ ತಾರೆ ಸಮಂತಾ ಅಭಿನಯಿಸಿದ್ದಾರೆ.

ಕೇವಲ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಷ್ಟೇ ಅಲ್ಲದೆ ಕರ್ನಾಟಕದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಸುರೇಶ್ ಮೂವೀಸ್ ಫಿಲಂ ಡಿಸ್ಟ್ರಿಬ್ಯೂಟರ್ಸ್ 'ಈಗ' ಚಿತ್ರದ ಕರ್ನಾಟಕ ವಿತರಣೆ ಹಕ್ಕುಗಳನ್ನು ಪಡೆದಿತ್ತು.

ಏತನ್ಮಧ್ಯೆ ಸುದೀಪ್ ಅವರ ಹೊಸ ಚಿತ್ರ 'ಚಕ್ರವ್ಯೂಹ' ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಆಲ್ ದ ಬೆಸ್ಟ್ ಕಿಚ್ಚ ಸುದೀಪ್. (ಒನ್ ಇಂಡಿಯಾ ಕನ್ನಡ ಸಿನಿ ಡೆಸ್ಕ್)

English summary
Kannada actor Sudeep starer trilingual film box-office hit Eega selected for France Film Festival. The film screened at screened at L'Etrange Film Festival in Paris.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada