»   » ಜೇಡರ ಬಲೆಯಿಂದ ಸುದೀಪ್ 'ಈಗ' ಪಾರಾಗುತ್ತಾ?

ಜೇಡರ ಬಲೆಯಿಂದ ಸುದೀಪ್ 'ಈಗ' ಪಾರಾಗುತ್ತಾ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ 'ಈಗ' (ನೊಣ) ಚಿತ್ರಕ್ಕೆ ಭಾರಿ ಪೈಪೋಟಿ ಎದುರಾಗಿದೆ. ಹಾಲಿವುಡ್‌ನ 'ಸ್ಪೈಡರ್‌ಮ್ಯಾನ್' ಚಿತ್ರ ಪ್ರತಿಸ್ಪರ್ಧಿಯಾಗಿ ಬರುತ್ತಿದೆ. ಗ್ರಾಫಿಕ್ಸ್ ಪ್ರಧಾನವಾದ ಈ ಎರಡೂ ಚಿತ್ರಗಳು ಒಂದೇ ವರ್ಗದ ಪ್ರೇಕ್ಷಕರನ್ನು ಟಾರ್ಗೆಟ್ ಮಾಡುತ್ತಾ ಏಕಕಾಲಕ್ಕೆ ತೆರೆಕಾಣುತ್ತಿವೆ.

ಜುಲೈ 6ಕ್ಕೆ ಸುದೀಪ್ 'ಈಗ' ಚಿತ್ರ ಬಿಡುಗಡೆಯಾಗುತ್ತಿದ್ದರೆ ಜುಲೈ 7ಕ್ಕೆ 'ದಿ ಅಮೇಜಿಂಗ್ ಸ್ಪೈಡರ್‌ಮ್ಯಾನ್' ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿವೆ. ಆದರೆ 'ಸ್ಪೈಡರ್‌ಮ್ಯಾನ್' ಚಿತ್ರ ಭಾರತಕ್ಕೆ ಬರುತ್ತಿರುವುದು ಜುಲೈ 29ರಂದು. ಹಾಗಾಗಿ 'ಈಗ' ಚಿತ್ರಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ.

'ಈಗ' ಚಿತ್ರ ವಿದೇಶಗಳಲ್ಲೂ ಜುಲೈ 6ರಂದು ತೆರೆಕಾಣುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ಸ್ಪೈಡರ್‌ಮ್ಯಾನ್' ಜೊತೆ ಪೈಪೋಟಿ ಎದುರಾಗಿದೆ. ಗ್ರಾಫಿಕ್ಸ್ ಪರವಾಗಿ ಎರಡೂ ಚಿತ್ರಗಳಿಗೆ ಇರುವ ಕ್ರೇಜ್ ನೋಡಿದರೆ ವಿದೇಶಗಳಲ್ಲಿ 'ಸ್ಪೈಡರ್‌ಮ್ಯಾನ್‍' ಮೇಲುಗೈ ಸಾಧಿಸುತ್ತದೆ. ಹಾಗಾಗಿ 'ಈಗ' ಚಿತ್ರದ ಅಮೆರಿಕಾ ವಿತರಕರಕರು ಕಂಗಾಲಾಗಿದ್ದಾರೆ.

ಇದಿಷ್ಟೇ ಅಲ್ಲದೆ ಅಮೆರಿಕಾದಲ್ಲಿ ಈಗಾಗಲೆ ಶೇಕಡಾ 70ರಷ್ಟು ಚಿತ್ರಮಂದಿರಗಳು 'ಸ್ಪೈಡರ್‌ಮ್ಯಾನ್' ಬಲೆಯಲ್ಲಿವೆ. ಉಳಿದ ಶೇ.30ರಷ್ಟು ಚಿತ್ರಮಂದಿರಗಳು ಮಾತ್ರ 'ಈಗ' ಪಾಲಾಗಿವೆ. ಆದರೆ 'ಈಗ' ಚಿತ್ರಕ್ಕೆ ಭಾರತದಲ್ಲಿ ಅಂತಹ ಸಮಸ್ಯೆಯೇನು ಆಗುವುದಿಲ್ಲ ಎಂದು ಚಿತ್ರೋದ್ಯಮ ಅಭಿಪ್ರಾಯಪಟ್ಟಿದೆ.

ಭಾರಿ ಬಜೆಟ್‌ನಲ್ಲಿ ನಿರ್ಮಿಸಿರುವ 'ದಿ ಅಮೇಜಿಂಗ್ ಸ್ಪೈಡರ್‌ಮ್ಯಾನ್' ಚಿತ್ರಕ್ಕೆ ಮಾರ್ಕ್ ವೆಬ್ ಆಕ್ಷನ್ ಕಟ್ ಹೇಳಿದ್ದಾರೆ. ಸೋನಿ ಸಂಸ್ಥೆ ಈ ಚಿತ್ರವನ್ನು ಭಾರತದಲ್ಲಿ ಮೂರು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ ಹಾಗೂ ತೆಲುಗು) ಬಿಡುಗಡೆ ಮಾಡುತ್ತಿದೆ. ಹೊಚ್ಚಹೊಸ ಕಥೆ, ರೋಮಾಂಚಕ ಸಾಹಸ ಸನ್ನಿವೇಶಗಳೊಂದಿಗೆ ಚಿತ್ರವನ್ನು ನಿರ್ಮಿಸಲಾಗಿದೆ. 'ಸ್ಪೈಡರ್‌ಮ್ಯಾನ್' ಪಾತ್ರವನ್ನು ಆಂಡ್ರೂ ಗಾರ್‌ಫೀಲ್ಡ್ ಪೋಷಿಸಿದ್ದಾರೆ.

ತನ್ನ ತಂದೆ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತನ್ನನ್ನು ತಾನು ತಿಳಿದುಕೊಳ್ಳುವ ವಂಡರ್ ಕಥೆಯೇ ಚಿತ್ರದ ಕಥಾವಸ್ತು ಎಂದಿದ್ದಾರೆ ನಿರ್ದೇಶಕ ಮಾರ್ಕ್ ವೆಬ್. 2D ಹಾಗೂ 3D ಆವೃತ್ತಿಗಳಲ್ಲಿ ಈ ಚಿತ್ರ ಭಾರತದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. (ಏಜೆನ್ಸೀಸ್)

English summary
According to US exhibitor, Eega might survive at Indian box-office but at USA box-office it cannot stand before The Amazing Spider-Man as both films share same weekend, it’s hard to allot theatres for Eega which is releasing in Tamil and Telugu in US on same day. Presently, 70% of the theatres are already allotted for Spiderman while 30% left for other releases and for English movies which are running successfully.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada