ಧೋನಿ ನಿವೃತ್ತಿ ಬಗ್ಗೆ ಸುದೀಪ್ ಭಾವುಕ ಟ್ವೀಟ್
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ ಪ್ರೇಮಿಗಳೆಲ್ಲರೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಕಂಡ ಯಶಸ್ವಿ ನಾಯಕನ ಮೌನ ವಿದಾಯಕ್ಕೆ ಕ್ರಿಕೆಟರ್‌ಗಳ ಜೊತೆಗೆ ಸಿನಿಮಾ ಸ್ಟಾರ್‌ಗಳು ಸಹ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಕ್ರಿಕೆಟ್ ಪ್ರೇಮಿ ಆಗಿರುವ ಸುದೀಪ್ ಸಹ ಧೋನಿ ನಿವೃತ್ತಿ ಬಗ್ಗೆ ಟ್ವೀಟ್ ಮಾಡಿದ್ದು, ಧೋನಿ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ. ಜೊತೆಗೆ, ಧೋನಿಯವರ ಕೊನೆಯ ಮ್ಯಾಚ್ ಹೇಗಿರಬೇಕಿತ್ತು ಎಂಬ ಬಗ್ಗೆ ಸಹ ಬರೆದಿದ್ದಾರೆ ಸುದೀಪ್.

ನಿಜವಾದ ನಾಯಕ ನಿವೃತ್ತನಾಗಿದ್ದಾನೆ: ಸುದೀಪ್
ಒಬ್ಬ ಅದ್ಭುತ ಕ್ರಿಕೆಟರ್ ಜೊತೆಗೆ ಒಬ್ಬ ನಿಜವಾದ ನಾಯಕ ಇಂದು ನಿವೃತ್ತನಾಗಿದ್ದಾನೆ ಎಂದು ಧೋನಿಯನ್ನು ಕೊಂಡಾಡಿದ್ದಾರೆ ಸುದೀಪ್. ನಿವೃತ್ತಿ ಇಷ್ಟು ಹಠಾತ್ತಾಗಿ ಬರುತ್ತದೆಂದು ಊಹಿಸಿರಲಿಲ್ಲ ಎಂದು ಸಹ ಸುದೀಪ್ ಹೇಳಿದ್ದಾರೆ.

ತುಸು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ ಸುದೀಪ್
ತುಸು ಬೇಸವರನ್ನೂ ವ್ಯಕ್ತಪಡಿಸಿರುವ ಸುದೀಪ್, 'ಧೋನಿ ಕೊನೆಯದಾಗಿ ಆಡಿದ ಪಂದ್ಯ ನಾವು ನೋಡಿದ್ದೇವೆ. ಆದರೆ ಅದೇ ಕೊನೆಯ ಪಂದ್ಯವೆಂದು ನಮಗೆ ಗೊತ್ತಿರಲಿಲ್ಲ. ಧೋನಿಯ ಕೊನೆಯ ಪಂದ್ಯವನ್ನು ಅಭಿಮಾನಿಗಳು ನೋಡಬೇಕಿತ್ತು ಎಂದಿದ್ದಾರೆ ಸುದೀಪ್.

ಸೆಂಡ್ ಆಫ್ ನೀಡುವ ಅವಕಾಶ ಕೊಡಬೇಕಿತ್ತು
ಒಂದು ಸೂಕ್ತ 'ಸೆಂಡ್ ಆಫ್' ಅನ್ನು ಅಭಿಮಾನಿಗಳು ನೀಡಲು ಧೋನಿ ತಮ್ಮ ಅಭಿಮಾನಿಗಳಿಗೆ ಅನುವು ಮಾಡಿಕೊಡಬೇಕಿತ್ತು. ಒಂದು ಕೊನೆಯ ಪಂದ್ಯವನ್ನು ಅವರು ಆಡಬೇಕಿತ್ತು ಎಂದು ಸುದೀಪ್ ಹೇಳಿದ್ದಾರೆ. ಹಲವರು ಇದೇ ಅಭಿಪ್ರಾಯ ಹೊರಹಾಕಿದ್ದಾರೆ.

ಲಾರ್ಡ್ಸ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ ಸುದೀಪ್
ನಟ ಸುದೀಪ್ ಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಸೆಲೆಬ್ರಿಟಿ ಲೀಗ್‌ನಲ್ಲಿ ಬಹು ಉತ್ಸಾಹದಿಂದ ಭಾಗವಹಿಸುವ ಅವರು, ಕನ್ನಡ ಸಿನಿಮಾ ತಂಡದ ನಾಯಕರೂ ಆಗಿದ್ದಾರೆ. ಖ್ಯಾತ ಕ್ರಿಕೆಟರ್‌ಗಳ ಜೊತೆಗೆ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಸಹ ಕ್ರಿಕೆಟ್ ಆಡಿದ್ದಾರೆ ಸುದೀಪ್.


Click it and Unblock the Notifications











