For Quick Alerts
  ALLOW NOTIFICATIONS  
  For Daily Alerts

  'RCB' ಪರ ಬ್ಯಾಟ್ ಬೀಸಿದ 'ಕರ್ನಾಟಕ ಬುಲ್ಡೋಜರ್ಸ್' ನಾಯಕ ಸುದೀಪ್

  By Bharath Kumar
  |

  ಐಪಿಎಲ್ 10ನೇ ಆವೃತ್ತಿಯಲ್ಲಿ ಸತತ ಸೋಲಿನಿಂದ ಹೀನಾಯ ಸ್ಥಿತಿಯಲ್ಲಿರುವ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡವನ್ನ ಕ್ರಿಕೆಟ್ ದಿಗ್ಗಜರುಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  ಟೂರ್ನಿ ಆರಂಭಕ್ಕೂ ಮುಂಚೆ ಗೆಲ್ಲುವ ಫೆವರೇಟ್ ತಂಡವಾಗಿದ್ದ ಆರ್.ಸಿ.ಬಿ ಈಗ ಪಾಯಿಂಟ್ ಟೇಬಲ್ ನಲ್ಲಿ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಮತ್ತೊಂದೆಡೆ ಆರ್.ಸಿ.ಬಿ ಅಭಿಮಾನಿಗಳು ಕೂಡ ಕೊಹ್ಲಿ ಹುಡುಗರ ಮೇಲೆ ಉರಿದು ಬೀಳುತ್ತಿದ್ದಾರೆ.['ಕ್ಯಾಪ್ಟನ್' ಆದ ಸುದೀಪ್: ಲಾರ್ಡ್ಸ್ ಮೈದಾನದಲ್ಲಿ ಕಿಚ್ಚ ಮುನ್ನಡೆಸಲಿರುವ ತಂಡ ಯಾವುದು?]

  ಈ ಮಧ್ಯೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆರ್.ಸಿ.ಬಿ ತಂಡದ ಬೆನ್ನಿಗೆ ನಿಂತಿದ್ದು, ಅಭಿಮಾನಿಗಳಿಗೆ ಕಿವಿಮಾತನ್ನ ಹೇಳಿದ್ದಾರೆ. ಮುಂದೆ ಓದಿ....

  ಆರ್.ಸಿ.ಬಿಗೆ ನೈತಿಕ ಬೆಂಬಲ ಸೂಚಿಸಿದ ಸುದೀಪ್!

  ಆರ್.ಸಿ.ಬಿಗೆ ನೈತಿಕ ಬೆಂಬಲ ಸೂಚಿಸಿದ ಸುದೀಪ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಕ್ರಿಕೆಟ್ ಜಗತ್ತು ಟೀಕಾ ಪ್ರಹಾರವನ್ನ ಮಾಡುತ್ತಿದ್ದೆ. ಹೀಗಿರುವಾಗ, ನಟ ಸುದೀಪ್ ಆರ್.ಸಿ.ಬಿ ತಂಡಕ್ಕೆ ನೈತಿಕ ಬೆಂಬಲ ನೀಡಿದ್ದಾರೆ.[ಕಿಚ್ಚ ಸುದೀಪ್ ಗೆ ಲಂಡನ್‌ನಿಂದ ಬಂದಿದೆ ಸಿಹಿ ಸುದ್ದಿ; ಏನದು?]

  'ಕರ್ನಾಟಕ ಬುಲ್ಡೋಜರ್ಸ್' ಮುಂದೆ ಆರ್.ಸಿ.ಬಿ ಡಮ್ಮಿ!

  'ಕರ್ನಾಟಕ ಬುಲ್ಡೋಜರ್ಸ್' ಮುಂದೆ ಆರ್.ಸಿ.ಬಿ ಡಮ್ಮಿ!

  ''ಸದ್ಯದ ಪರಿಸ್ಥಿತಿ ನೋಡಿದ್ರೆ, ಕಿಚ್ಚ ಸುದೀಪ್ ನಾಯಕತ್ವದ 'ಕರ್ನಾಟಕ ಬುಲ್ಡೋಜರ್ಸ್' ತಂಡದ ವಿರುದ್ಧ ಆರ್.ಸಿ.ಬಿ ಮ್ಯಾಚ್ ಆಡಿದ್ರೆ, ಸುದೀಪ್ ಅವರ ಟೀಮ್ ಗೆಲ್ಲುತ್ತೆ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು.[KPL ಕ್ರಿಕೆಟ್ ಲೀಗ್ ಗೆ ಬಾಯ್ ಬಾಯ್ ಹೇಳ್ತಾರ ಕಿಚ್ಚ ಸುದೀಪ್?]

  ಆರ್.ಸಿ.ಬಿ ಬೆಂಬಲಕ್ಕೆ ನಿಂತ ಕಿಚ್ಚ

  ಆರ್.ಸಿ.ಬಿ ಬೆಂಬಲಕ್ಕೆ ನಿಂತ ಕಿಚ್ಚ

  ''ಇಂತಹ ಸಂದರ್ಭದಲ್ಲಿ ನಾವು ನಮ್ಮ ಹೀರೋಗಳ ಬೆನ್ನ ಹಿಂದೆ ನಿಲ್ಲಬೇಕು ಫ್ರೆಂಡ್‌. ಉತ್ತಮವಾಗಿ ಆಡುವ ಸಂದರ್ಭದಲ್ಲಿ ಅವರನ್ನು ಹೊಗಳಿ, ಕೆಟ್ಟ ಸಂದರ್ಭದಲ್ಲಿ ಅವರನ್ನು ತೆಗಳುವುದು ಮಾನವೀಯತೆಯಲ್ಲ'' ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಯನ್ನ ತಣ್ಣಾಗಾಗಿಸಿದ್ದಾರೆ.

  ಆರ್‌ಸಿಬಿ ಕಳಪೆ ಪ್ರದರ್ಶನ!

  ಆರ್‌ಸಿಬಿ ಕಳಪೆ ಪ್ರದರ್ಶನ!

  ಐಪಿಎಲ್ 10ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಡಿರುವ 13 ಪಂದ್ಯಗಳಿಂದ ಕೇವಲ 2 ರಲ್ಲಿ ಮಾತ್ರ ಜಯಗಳಿಸಿದೆ. 11 ಪಂದ್ಯಗಳನ್ನು ಸೋತಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

  English summary
  Kannada Actor Sudeep has taken his twitter account to express his moral support to Royal Challengers Bangalore Team.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X