twitter
    For Quick Alerts
    ALLOW NOTIFICATIONS  
    For Daily Alerts

    ಕಣ್ಣೀರು ಹಾಕಿದ್ದ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ಸುದೀಪ್ ಸಹಾಯ

    |

    ನಟ ಸುದೀಪ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಗುಟ್ಟೇನು ಅಲ್ಲ. ಹಲವು ವರ್ಷಗಳಿಂದಲೂ ಸುದೀಪ್ ಅವರು ತಮ್ಮ ಅನುಕೂಲಾನುಸಾರ ಅವಶ್ಯಕತೆ ಇರುವವರಿಗೆ ನೆರವು ನೀಡುತ್ತಲೇ ಬರುತ್ತಿದ್ದಾರೆ.

    Recommended Video

    ಹರಿಜನ ಹೆಣ್ಣುಮಕ್ಕಳ ನೆರವಿಗೆ ನಿಂತ ಕಿಚ್ಚ ಸುದೀಪ್ | Filmibeat Kannada

    ಇದೀಗ ಸುದೀಪ್ ಅವರು ಮತ್ತೆ ತಮ್ಮ ಮಾನವೀಯ ಮುಖವನ್ನು ಮೆರೆದಿದ್ದಾರೆ. ಹರಿಜನ ಹೆಣ್ಣುಮಕ್ಕಳ ಶಾಲೆಗೆ ಅತ್ಯಂತ ಅಗತ್ಯವಿದ್ದ ಸಹಾಯವನ್ನು ಮಾಡಿ ಆ ಹೆಣ್ಣುಮಕ್ಕಳ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.

    ನನ್ನನ್ನು ತಲೆ ತಗ್ಗಿಸಲು ಬಿಟ್ಟಿಲ್ಲ ಆ ವ್ಯಕ್ತಿ: ಕೊನೆಯುಸಿರೋ ತನಕ ಆ ಸಹಾಯ ಮರೆಯಲ್ಲ- ಸುದೀಪ್ನನ್ನನ್ನು ತಲೆ ತಗ್ಗಿಸಲು ಬಿಟ್ಟಿಲ್ಲ ಆ ವ್ಯಕ್ತಿ: ಕೊನೆಯುಸಿರೋ ತನಕ ಆ ಸಹಾಯ ಮರೆಯಲ್ಲ- ಸುದೀಪ್

    ಹುಬ್ಬಳ್ಳಿಯ ಹರಿಜನ ಅನುದಾನಿತ ಹೆಣ್ಣುಮಕ್ಕಳ ಶಾಲೆಯ ಸ್ಥಳವನ್ನು ಗಾಂಧಿವಾಡ ಕೋ ಅಪರೇಟಿವ್ ಸೊಸೈಟಿಯವರು ಖರೀದಿ ಮಾಡಿ ಬಡಾವಣೆ ನಿರ್ಮಿಸಿ ಮಾರಾಟಕ್ಕೆ ಇಟ್ಟಿದ್ದರು. ಶಾಲೆಗಾಗಿ ತಾತ್ಕಾಲಿಕವಾಗಿ ಜಾಗವೊಂದನ್ನು ನೀಡಿದ್ದರು.

     Sudeep Extendes His Help To Harijana Government Aided School

    ಕೊನೆಗೆ ಸೊಸೈಟಿಯವರು ಶಾಲೆಯ ಜಾಗವನ್ನು ಖಾಲಿ ಮಾಡಿಸಲು ಮುಂದಾಗಿದ್ದಾಗ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದರು. ಈ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಅಂತೆಯೆ ಸುದೀಪ್ ಅವರ ಕಣ್ಣಿಗೂ ಈ ವಿಡಿಯೋ ಬಿದ್ದು ಸುದೀಪ್ ಮನಸ್ಸು ಕರಗಿತು.

    ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್‌ನವರು ಹುಬ್ಬಳ್ಳಿಗೆ ಬಂದು ಶಾಲೆಯ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಮಯ ಚಾರಿಟೇಬಲ್ ಸೊಸೈಟಿ ಸದಸ್ಯರು ಸುದೀಪ್‌ಗೆ ವಿಡಿಯೋ ಕಾಲ್ ಮಾಡಿ ವಿದ್ಯಾರ್ಥಿಗಳು ಸುದೀಪ್ ಅವರೊಟ್ಟಿಗೆ ಮಾತನಾಡುವಂತೆ ಮಾಡಿದರು. ಕಿಚ್ಚನ ಭರವಸೆಯಿಂದ ಖುಷಿಯಾದ ವಿದ್ಯಾರ್ಥಿನಿಯರು ಸುದೀಪ್‌ಗೆ ಧನ್ಯವಾದ ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯರಂತೂ ದೇವರ ಬದಲಿಗೆ ಸುದೀಪ್ ಅವರಿಗೆ ಕೈ ಮುಗಿಯುವುದಾಗಿ, ಸುದೀಪ್ ಅವರ ದೊಡ್ಡ ಬಾವುಟವನ್ನು ಶಾಲೆಯ ಮುಂದೆ ಹಾರಿಸುವುದಾಗಿ ಹೇಳಿದರು.

    ನಾನು ಕಪ್ಪು ಬಟ್ಟೆ ಹಾಕಲು ಕಾರಣನೇ ರವಿ ಸರ್; ಕಿಚ್ಚ ಸುದೀಪ್ನಾನು ಕಪ್ಪು ಬಟ್ಟೆ ಹಾಕಲು ಕಾರಣನೇ ರವಿ ಸರ್; ಕಿಚ್ಚ ಸುದೀಪ್

    ಸುದೀಪ್ ಸಾರಥ್ಯದ ಕಿಚ್ಚ ಚಾರಿಟೇಬಲ್ ಸೊಸೈಟಿಯು ಕೊರೊನಾ ಕಾಲದಲ್ಲಿ ಹಲವಾರು ಮಂದಿಗೆ ಸಹಾಯ ಮಾಡಿತು. ಆ ನಂತರವೂ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದೆ.

    English summary
    Sudeep extended his help to Hubli Harijana government aided school. Children thanked Sudeep.
    Thursday, March 18, 2021, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X