»   » 'ಸುದೀಪ್ ಸರ್ ಈ ತಂಗಿ ಜೀವ ಉಳಿಸಿ': ಬದುಕಿಗಾಗಿ ಚೈತ್ರಾ ಕೂಗು

'ಸುದೀಪ್ ಸರ್ ಈ ತಂಗಿ ಜೀವ ಉಳಿಸಿ': ಬದುಕಿಗಾಗಿ ಚೈತ್ರಾ ಕೂಗು

Posted By:
Subscribe to Filmibeat Kannada

ಚೈತ್ರಾ ಎಂಬ 23 ವರ್ಷದ ಯುವತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಗರ್ಭೀಣಿ ಆಗಿದ್ದಾಗ ಈಕೆಯ ಸಣ್ಣ ಕರುಳನ್ನ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈಗ ಅದು ಪ್ರಾಣಕ್ಕೆ ಅಪಾಯ ತಂದಿದೆ. ಹೀಗಾಗಿ, ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಈ ಆಪರೇಷನ್ ಗೆ ಬರೋಬ್ಬರಿ 34 ಲಕ್ಷ ಹಣ ಬೇಕಾಗಿದೆ.

ಈಗಾಗಲೇ ಕೆಲವು ಸ್ನೇಹಿತರು, ಆಪ್ತರು ಸೇರಿದಂತೆ ಹಲವರು ಅನೇಕರು ಸಹಾಯ ಮಾಡುತ್ತಿದ್ದಾರೆ. ಇವರ ಖಾತೆಗೆ ಹಣ ಜಮಾಯಿಸುತ್ತಿದ್ದಾರೆ. ಈ ವಿವರವನ್ನ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ  ಅವರು ತಮ್ಮ ಫೇಸ್ ಬುಕ್ ನಲ್ಲಿ ನೀಡುತ್ತಿದ್ದಾರೆ.

Sudeep Fan Chaitra Asking Help for her operation

ಚೈತ್ರಾ ಅವರ ಸ್ಥಿತಿ ತುಂಬ ಗಂಭೀರವಾಗಿದೆ. ಮಾತನಾಡಲು ಕಷ್ಟವಾಗುತ್ತಿದೆ. ಹೀಗಿರುವಾಗ, ತನ್ನ ಜೀವವನ್ನು ಉಳಿಸುವಂತೆ ನಟ ಸುದೀಪ್ ಅವರಿಗೆ ಸಹಾಯ ಹಸ್ತ ಬೇಡುತ್ತಿದ್ದಾರೆ. ಚೈತ್ರಾ ಅವರಿಗೆ ಕಿಚ್ಚ ಸುದೀಪ್ ಅವರಂದ್ರೆ ತುಂಬ ಇಷ್ಟವಂತೆ. ಅವರ ಸಿನಿಮಾಗಳನ್ನ ನೋಡಿ ಬೆಳದಿದ್ದಾರಂತೆ. ಹೀಗಾಗಿ, ತಂಗಿ ಎಂಬ ಮಮಕಾರದಿಂದ ನನಗೆ ಸಹಾಯ ಮಾಡಿ ಎಂದು ಚೈತ್ರಾ ಅವರು ಸುದೀಪ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ತಲುಪಿಸಬೇಕು ಎಂಬ ಆಶಯದಿಂದ ಶೇರ್ ಮಾಡುತ್ತಿದ್ದಾರೆ. ಸಾಧ್ಯವಾದ್ರೆ, ನೀವು ಸಹಾಯ ಮಾಡಿ, ಮತ್ತು ಸುದೀಪ್ ಅವರ ಗಮನಕ್ಕೆ ತನ್ನಿ.....

ಚೈತ್ರಾ ಅವರ ಮನಕುಲುಕುವ ವಿಡಿಯೋ ನೋಡಿ

English summary
'Sudeep Sir Please Help me'.....23 years women Chaitra asking help from Kannada Actor Sudeep for her operation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada