ಕುವೈತ್‌ನ ಸುದೀಪ್ ಅಭಿಮಾನಿಯ ಕನ್ನಡ: ವಿಡಿಯೋ ವೈರಲ್

ಕನ್ನಡದ ಸ್ಟಾರ್ ನಟ ಸುದೀಪ್, ಹಿಂದಿ, ತೆಲುಗು ಭಾಷೆಗಳಲ್ಲೂ ನಟಿಸಿದ್ದಾರೆ. ಅವರು ನಟಿಸಿರುವ ಸಿನಿಮಾಗಳು ಬೇರೆ ಭಾಷೆಗಳಿಗೂ ಡಬ್ ಆಗಿವೆ. ರಾಷ್ಟ್ರದಾದ್ಯಂತ ಅವರ ಅಭಿಮಾನಿಗಳಿರುವುದು ಗೊತ್ತಿರುವುದೇ. ಆದರೆ ವಿದೇಶದಲ್ಲೂ ಅದರಲ್ಲೂ ವಿದೇಶಿಗರು ಸುದೀಪ್ ನಟನೆಯ ಅಭಿಮಾನಿಗಳು.

Recommended Video

ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | FILMIBEAT KANNADA

ಸುದೀಪ್ ಅವರ ಈಗ ಸಿನಿಮಾ ಬಿಡುಗಡೆ ಆದಾಗ ಚೈನಾ, ಜಪಾನ್‌ ಸೇರಿ ಹಲವು ರಾಷ್ಟ್ರಗಳಲ್ಲಿ ಸುದೀಪ್ ಅಭಿಮಾನಿ ಬಳಗ ದೊಡ್ಡದಾಗಿತ್ತು. ವಿದೇಶದಲ್ಲಿ ಸುದೀಪ್ ಅವರ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು, ಈ ಖುಷಿಯನ್ನು ಅವರೇ ಒಮ್ಮೆ ಹಂಚಿಕೊಂಡಿದ್ದರು.

ಇದೀಗ ಲಾಕ್‌ಡೌನ್ ಸಮಯದಲ್ಲಿ ಸುದೀಪ್ ಅವರು ತಮ್ಮ ವಿದೇಶಿ ಅಭಿಮಾನಿಗಳು, ವಿಶೇಷವಾಗಿ ವಿದೇಶಿ ಕನ್ನಡಿಗರೊಂದಿಗೆ ಆನ್‌ಲೈನ್ ಸಂವಾದ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ವಿದೇಶಿ ಅಭಿಮಾನಿಯೊಬ್ಬರು ಸುದೀಪ್ ಅವರ ಜೊತೆ ಮಾತನಾಡಲು ತೋರಿರುವ ಉತ್ಸುಕತೆ ವೈರಲ್ ಆಗಿದೆ.

ಕುವೈತ್ ಅಭಿಮಾನಿಯ ಉತ್ಸುಕತೆ

ಕುವೈತ್ ಅಭಿಮಾನಿಯ ಉತ್ಸುಕತೆ

ಗಲ್ಫ್ ದೇಶಗಳ ಅಭಿಮಾನಿಗಳೊಂದಿಗೆ, ಕನ್ನಡಿಗರೊಂದಿಗೆ ಸುದೀಪ್ ಇದೇ ಶುಕ್ರವಾರ ಆನ್‌ಲೈನ್ ಸಂವಾದ ನಡೆಸಲಿದ್ದಾರೆ. ಸುದೀಪ್ ಜೊತೆ ಮಾತನಾಡಲು ಕುವೈತ್‌ನ ಹಾಡುಗಾರರೊಬ್ಬರು ಭಾರಿ ಉತ್ಸುಕರಾಗಿದ್ದು, ಈ ಬಗ್ಗೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಕನ್ನಡದಲ್ಲಿಯೇ ಮಾತನಾಡಿದ ಅಲ್-ರಶೀದ್

ಕನ್ನಡದಲ್ಲಿಯೇ ಮಾತನಾಡಿದ ಅಲ್-ರಶೀದ್

ಕುವೈತ್‌ನ ಹಾಡುಗಾರ ಮುಬಾರಕ್ ಅಲ್-ರಶೀದ್ ಅಲ್-ಆಜ್ಮಿ, ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ, ಸುದೀಪ್ ಅವರನ್ನು ಸ್ವಾಗತಿಸಿದ್ದಾರೆ. 'ನಮಸ್ಕಾರ ಸುದೀಪ್, ಕುವೈತ್‌ನಿಂದ ನಿಮ್ಮ ಅಭಿಮಾನಿ ಮುಬಾರಕ್ ಅಲ್-ರಶೀದ್ ನಿಮ್ಮ ಜೊತೆ ಮಾತನಾಡಲು ಕಾಯುತ್ತಿದ್ದೇನೆ' ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ ಅಲ್-ರಶೀದ್.

ಸುಷ್ಮಾ ಸ್ವರಾಜ್ ಎದುರು ಹಾಡಿದ್ದ ಅಲ್‌-ರಶೀದ್

ಸುಷ್ಮಾ ಸ್ವರಾಜ್ ಎದುರು ಹಾಡಿದ್ದ ಅಲ್‌-ರಶೀದ್

ಅಲ್ ರಶೀದ್ ಅವರು ಗಾಯಕರಾಗಿದ್ದು, ಹಿಂದಿ ಬಾಲಿವುಡ್‌ ಸಿನಿಮಾ ಹಾಡುಗಳನ್ನು ಹಾಡುವುದರಲ್ಲಿ ಖ್ಯಾತರು. ಮಾಜಿ ವಿದೇಶಾಂಗ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಅವರ ಕುವೈತ್ ಭೇಟಿ ಸಂದರ್ಭ ಅವರು ವೇದಿಕೆ ಮೇಲೆ 'ವೈಷ್ಣವ ಜನತೋ' ಹಾಡು ಹಾಡಿ ಸುಷ್ಮಾ ಅವರಿಂದ ಹೊಗಳಿಕೆಗೆ ಪಾತ್ರರಾಗಿದ್ದರು. ಪ್ರಧಾನಿ ಮೋದಿ ಸಹ ಇವರ ಹಾಡಿನ ವಿಡಿಯೋ ಹಂಚಿಕೊಂಡಿದ್ದರು.

ಕೆನಡಾ, ಅಮೆರಿಕ, ಸಿಂಗಪೂರ್ ಅಭಿಮಾನಿಗಳೊಂದಿಗೆ ಸಂವಾದ

ಕೆನಡಾ, ಅಮೆರಿಕ, ಸಿಂಗಪೂರ್ ಅಭಿಮಾನಿಗಳೊಂದಿಗೆ ಸಂವಾದ

ಸುದೀಪ್ ಅವರು ಈಗಾಗಲೇ ಕೆನಡಾ, ಯು.ಎಸ್‌.ಎ, ಸಿಂಗಪೂರ್ ನ ಅಭಿಮಾನಿಗಳು, ಕನ್ನಡಿಗರೊಂದಿಗೆ ಆನ್‌ಲೈನ್ ಸಂವಾದ ಮಾಡಿದ್ದಾರೆ. ಇದೀಗ ಕುವೈತ್, ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಅಭಿಮಾನಿಗಳೊಂದಿಗೆ ಇದೇ ಶುಕ್ರವಾರ ಸಂವಾದ ನಡೆಸಲಿದ್ದಾರೆ.

More from Filmibeat

English summary
Sudeep fan from Kuwait singer Mubarak Al-Rashed talking in Kannada to welcome Sudeep video went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X