twitter
    For Quick Alerts
    ALLOW NOTIFICATIONS  
    For Daily Alerts

    ಅಹೋರಾತ್ರನ ಮನೆಗೆ ನುಗ್ಗಿದ್ದೇಕೆ? ಅಲ್ಲಿ ನಡೆದಿದ್ದು ಏನು? ಕಾರಣ ಹೇಳಿದ ಸುದೀಪ್ ಅಭಿಮಾನಿ

    |

    ಆಧ್ಯಾತ್ಮಿಕ ಚಿಂತಕ, ಬರಹಗಾರ ಅಹೋರಾತ್ರ ಅವರ ಮನೆಗೆ ಸುದೀಪ್ ಅಭಿಮಾನಿಗಳು ನುಗ್ಗಿದ ವಿಷಯ ಕಳೆದೆರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ.

    Recommended Video

    ಅಹೋರಾತ್ರನ ಮನೆಗೆ ಹೋಗಿದ್ದರ ಹಿಂದಿನ‌ ಕಾರಣ ಬಿಚ್ಚಿಟ್ಟ ಕಿಚ್ಚನ ಫ್ಯಾನ್ | Filmibeat Kannada

    ಸುದೀಪ್ ಅಭಿಮಾನಿಗಳು ನನ್ನನ್ನು ಕೊಲ್ಲಲು ಬಂದಿದ್ದರು ಎಂದು ಅಹೋರಾತ್ರ ಆರೋಪಿಸಿದ್ದು, ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ದೂರು ದಾಖಲಾಗಿದೆ.

    ಸುದೀಪ್ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆಂದು ಆರೋಪಿಸಿ ಅಹೋರಾತ್ರ ಅವರು ಈಗಾಗಲೇ ಕೆಲವಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಆದರೆ ಅಂದು ರಾತ್ರಿ ನಡೆದ ಘಟನೆ ಏನು ಎಂಬುದರ ಬಗ್ಗೆ ಸುದೀಪ್ ಅಭಿಮಾನಿಗಳಿಂದ ಯಾವುದೇ ಸ್ಪಷ್ಟೀಕರಣ ಸಿಕ್ಕಿರಲಿಲ್ಲ, ಈಗ ಸುದೀಪ್ ಅಭಿಮಾನಿ ಸಂಘದ ಜಗದೀಶ್ ಎಂಬುವರು ಅಂದು ರಾತ್ರಿ ನಡೆದ ಘಟನೆಗೆ ಕಾರಣ, ಅಲ್ಲಿ ನಡೆದಿದ್ದು ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದಾರೆ.

    ಸುದೀಪ್ ಅಭಿಮಾನಿ ಸಂಘದ ಮುಖಂಡರಲ್ಲಿ ಒಬ್ಬರಾದ ಹಾಗೂ ಅಹೋರಾತ್ರ ಮನೆಗೆ ಅಭಿಮಾನಿಗಳು ನುಗ್ಗಿದಾಗ ಸ್ಥಳದಲ್ಲಿ ಜಗದೀಶ್ ಸಹ ಹಾಜರಿದ್ದರು.

    ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಜಗದೀಶ್

    ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟಿಸಿರುವ ಜಗದೀಶ್

    ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿರುವ ಜಗದೀಶ್, 'ಸುದೀಪ್ ಅವರು ರಮ್ಮಿ ಸರ್ಕಲ್ ಜಾಹಿರಾತಿನಲ್ಲಿ ಅಭಿನಯಿಸುತ್ತಿದ್ದರು ಆಗ ಅಹೋರಾತ್ರ ಅದರ ವಿರುದ್ಧ ದನಿ ಎತ್ತಿದರು. ಆಗ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರು ಅಹೋರಾತ್ರಗೆ ಕರೆ ಮಾಡಿ, 'ಇನ್ನು ಕೆಲವೇ ತಿಂಗಳಲ್ಲಿ ಜಾಹೀರಾತು ಒಪ್ಪಂದ ಮುಗಿಯುತ್ತದೆ. ಅಷ್ಟೇ ಅಲ್ಲದೆ ರಮ್ಮಿ ಸರ್ಕಲ್ ಸಂಸ್ಥೆ ವಿರುದ್ಧ ಅಲ್ಲವೇ ನೀವು ದನಿ ಎತ್ತಬೇಕಾಗಿರುವುದು' ಎಂದಾಗ ಆ ವ್ಯಕ್ತಿ ಆ ಆಡಿಯೋ ರೆಕಾರ್ಡ್ ಅನ್ನು ಸಹ ಸುಳ್ಳು ಕ್ಯಾಪ್ಷನ್ ಜೊತೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು ಎಂದರು ಜಗದೀಶ್.

    ಜಾಹೀರಾತು ನಿಂತು ಹೋಗಿದ್ದರು ಸುದೀಪ್ ಬಗ್ಗೆ ಮಾತನಾಡುತ್ತಿದ್ದ ಅಹೋರಾತ್ರ

    ಜಾಹೀರಾತು ನಿಂತು ಹೋಗಿದ್ದರು ಸುದೀಪ್ ಬಗ್ಗೆ ಮಾತನಾಡುತ್ತಿದ್ದ ಅಹೋರಾತ್ರ

    'ಈ ಅಹೋರಾತ್ರ ಬಹಳ ಚಾಲಾಕಿ. ಸುದೀಪ್ ಅವರನ್ನು ಕೆಟ್ಟ-ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸುವುದೇ ಈತನ ನಿತ್ಯ ಕಾಯಕ. ರಮ್ಮಿ ಜಾಹೀರಾತು ನಿಂತು ತಿಂಗಳಾನುಗಟ್ಟಲೆ ಆದ ನಂತರವೂ ಸುದೀಪ್ ಬಗ್ಗೆ ಮಾತನಾಡುತ್ತಲೇ ಇದ್ದ. ಸುದೀಪ್ ಅವರ ಹೆಸರನ್ನು ನೇರವಾಗಿ ಹೇಳದೆ ಅವರ ಸಿನಿಮಾಗಳ ಹೆಸರು ಬಳಸಿ, ಅವರ ಬಿರುದುಗಳನ್ನು ಬಳಸಿ ಗೇಲಿ ಮಾಡುತ್ತಿದ್ದ. ಅಭಿಮಾನಿಗಳು ಇದನ್ನೆಲ್ಲಾ ನೋಡಿ ಸುಮ್ಮನೆ ಇದ್ದರು. ಆದರೆ ಇತ್ತೀಚೆಗೆ ನೇರವಾಗಿ ಸುದೀಪ್ ಹೆಸರು ಹೇಳಿ ಅವಾಚ್ಯವಾಗಿ ನಿಂದಿಸಿದ್ದ. ಕುಟುಂಬದ ಹಿರಿಯರನ್ನು ಬೈದರೆ ಯಾರು ತಾನೇ ಸುಮ್ಮನೆ ಇದ್ದಾರು. ಸುದೀಪ್ ಸಹ ನಮಗೆ ಅಣ್ಣನಂತೆ ಅವರ ವಿರುದ್ಧ ಮಾತನಾಡಿದ ಅಹೋರಾತ್ರ ಬಳಿ ಕ್ಷಮೆ ಕೇಳಿಸಬೇಕೆಂದು ನಾವು ಅವರ ಮನೆಗೆ ನುಗ್ಗಿದೆವು' ಎಂದಿದ್ದಾರೆ ಜಗದೀಶ್.

    ಆತ ಮಹಾನ್ ಸುಳ್ಳುಗಾರ: ಜಗದೀಶ್

    ಆತ ಮಹಾನ್ ಸುಳ್ಳುಗಾರ: ಜಗದೀಶ್

    ಮುಂಬೈನಲ್ಲಿದ್ದ ಅಹೋರಾತ್ರ ಬೆಂಗಳೂರಿಗೆ ಬಂದಿದ್ದಾನೆಂದು ಗೊತ್ತಾಗಿ ಆತನಿಂದ ಕ್ಷಮೆ ಕೇಳಿಸಬೇಕೆಂದು ಆತನ ಮನೆಗೆ ಹೋದೆವು. ಆತ ಜಗಮೊಂಡ ಕ್ಷಮೆ ಕೇಳಲು ಒಪ್ಪದೆ ಆತನ ಮಗಳು ಮಾಡಿದ ಲೈವ್‌ನಲ್ಲಿ ಪುಂಖಾನುಪುಂಖವಾಗಿ ಸುಳ್ಳುಗಳನ್ನು ಹೇಳಲು ಆರಂಭಿಸಿದ. ಆತನ ಅನುಯಾಯಿಗಳು ಕೆಲವರು ಅವನೊಂದಿಗೆ ಇದ್ದರು ಅವರೂ ಸಹ ಬಹಳವೇ ಸುಳ್ಳುಗಾರರು. ರೌಡಿಗಳ ವರ್ತನೆ ಅವರದ್ದು. ಕಿಟಕಿ ಗಾಜನ್ನು ಅವರೇ ಒಡೆದುಹಾಕಿದರು, ಯಾವುದೊ ಖಾರದ ಪುಡಿ ಪೊಟ್ಟಣ ತಂದು ನಾವು ಖಾರದ ಪುಡಿ ಹಾಕಲು ಯತ್ನಿಸಿದೆವು ಎಂದು ಸುಳ್ಳು ಹೇಳಿದರು ಎಂದಿದ್ದಾರೆ ಜಗದೀಶ್.

    ಪೊಲೀಸರು ತಡವಾಗಿ ಬಂದರು: ಜಗದೀಶ್

    ಪೊಲೀಸರು ತಡವಾಗಿ ಬಂದರು: ಜಗದೀಶ್

    ಮುಂದುವರೆದು ಮಾತನಾಡಿರುವ ಜಗದೀಶ್, 'ನಾವು ಅಹೋರಾತ್ರನ ಮನೆಗೆ ಹೋಗಿ ಶಾಂತಿಯಿಂದಲೇ ಮಾತನಾಡಿದೆವು. ನಾವು ಅವರ ಮನೆಗೆ ಹೋದ 20-25 ನಿಮಿಷದ ನಂತರ ಪೊಲೀಸರು ಅಲ್ಲಿಗೆ ಬಂದರು. ನಮಗೆ ಆತನ ಮೇಲೆ ಹಲ್ಲೆ ಮಾಡುವ ಮನಸ್ಸಿದ್ದರೆ 20 ನಿಮಿಷ ಸಾಕಾಗುತ್ತಿರಲಿಲ್ಲವೇ' ಎಂದು ಪ್ರಶ್ನೆ ಮಾಡಿದ್ದಾರೆ ಜಗದೀಶ್.

    ಅಹೋರಾತ್ರ ತಂದಿಡುವ ಕಾರ್ಯ ಮಾಡುತ್ತಿದ್ದಾನೆ: ಜಗದೀಶ್

    ಅಹೋರಾತ್ರ ತಂದಿಡುವ ಕಾರ್ಯ ಮಾಡುತ್ತಿದ್ದಾನೆ: ಜಗದೀಶ್

    ಅಹೋರಾತ್ರ ಒಂದ ವಂಚಕ, ಮಹಾಸುಳ್ಳುಬುರುಕ. ಈಗ ಪೊಲೀಸರಿಗೆ ಸುದೀಪ್ ಅಭಿಮಾನಿಗಳಿಗೂ ತಂದಿಡುವ ಕಾರ್ಯ ಮಾಡುತ್ತಿದ್ದಾನೆ. ಸುದೀಪ್ ಅಭಿಮಾನಿಗಳು ಪೊಲೀಸರಿಗೆ ಬೈದರು ಎಂದು ಸುಳ್ಳು ಹೇಳುತ್ತಿದ್ದಾನೆ. ಈತನ ವಿಡಿಯೋಗಳನ್ನು ನೋಡಿದರೆ ಅರ್ಥವಾಗುತ್ತದೆ ಒಬ್ಬರ ಮೇಲೆ ಒಬ್ಬರಿಗೆ ತಂದಿಡುವ ಕಾರ್ಯವನ್ನಷ್ಟೆ ಈತ ತನ್ನ ವಿಡಿಯೋಗಳ ಮೂಲಕ ಮಾಡುತ್ತಾನೆ. ಜನರನ್ನು ಮರುಳು ಮಾಡುವ ಶಕ್ತಿ ಈತನಿಗಿದೆ. ವಂಚನೆ ಮಾಡಿಕೊಂಡಷ್ಟೆ ಜೀವನ ಮಾಡುತ್ತಿದ್ದಾನೆ ಈತ' ಎಂದು ಆರೋಪಿಸಿದ್ದಾರೆ ಜಗದೀಶ್.

    'ಅಹೋರಾತ್ರನಿಂದ ಮೋಸ ಹೋದವರು ನನ್ನನ್ನು ಸಂಪರ್ಕಿಸಿದ್ದಾರೆ'

    'ಅಹೋರಾತ್ರನಿಂದ ಮೋಸ ಹೋದವರು ನನ್ನನ್ನು ಸಂಪರ್ಕಿಸಿದ್ದಾರೆ'

    'ಸ್ವಂತ ಬುದ್ಧಿ ಕಡಿಮೆ ಇರುವ, ಪವಾಡಗಳಲ್ಲಿ ನಂಬಿಕೆ ಉಳ್ಳವರನ್ನು ತನ್ನ ಗುರಿ ಮಾಡಿಕೊಳ್ಳುವ ಅಹೋರಾತ್ರ, ಸಂಖ್ಯಾಶಾಸ್ತ್ರ ಹೇಳ್ತೀನಿ, ಭವಿಷ್ಯ ಹೇಳ್ತೀನಿ ಎಂದು ಹೇಳಿ ಮೌಡ್ಯಗಳನ್ನು ತುಂಬಿ ಅವರಿಂದ ಹಣ ಪೀಕಿಸುತ್ತಾನೆ. ಈತನಿಂದ ಮೋಸ ಹೋದವರು ನಮ್ಮನ್ನು ಸಂಪರ್ಕಿಸಿ ದಾಖಲೆಗಳನ್ನು ಕೊಟ್ಟಿದ್ದಾರೆ ಅವೆಲ್ಲವೂ ನಮ್ಮ ಬಳಿ ಇದೆ. ಶ್ರೀಚಕ್ರವನ್ನು ನಿಮ್ಮ ಮನೆಯಲ್ಲಿ ಹಾಕಿಕೊಂಡರೆ ಉದ್ಧಾರ ಆಗುತ್ತೀರಾ ಎಂದೆಲ್ಲಾ ಹೇಳಿ ಶ್ರೀಚಕ್ರ ಮಾರಿ ಲಕ್ಷಾಂತರ ಹಣವನ್ನು ಪಡೆದುಕೊಂಡಿದ್ದಾನೆ. ಈತ ಬಹಳ ದೊಡ್ಡ ಮೋಸಗಾರ ಎಂದಿದ್ದಾರೆ ಜಗದೀಶ್.

    ಪ್ರಚಾರಕ್ಕಾಗಿ ಸುದೀಪ್ ಹೆಸರು ಬಳಸಿಕೊಂಡಿದ್ದಾನೆ: ಜಗದೀಶ್

    ಪ್ರಚಾರಕ್ಕಾಗಿ ಸುದೀಪ್ ಹೆಸರು ಬಳಸಿಕೊಂಡಿದ್ದಾನೆ: ಜಗದೀಶ್

    'ಈತ ಪ್ರಚಾರ ಪಡೆದುಕೊಳ್ಳಲು ಸುದೀಪ್ ಹೆಸರು ಬಳಸಿಕೊಂಡ. ಸುದೀಪ್ ವಿರುದ್ಧ ಮಾತನಾಡಿದ ಕೂಡಲೇ ಸುದೀಪ್ ಅಭಿಮಾನಿಗಳು ಅಹೋರಾತ್ರನಿಗೆ ಸತತವಾಗಿ ಕರೆ ಮಾಡಿದರು. ಅದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ಫೇಸ್‌ಬುಕ್‌ನಲ್ಲಿ ಹಾಕಿ ಸಿಂಪತಿ ಗಿಟ್ಟಿಸಿಕೊಂಡ. ಈತನಿಗೆ ಗೊತ್ತಿತ್ತು ದೊಡ್ಡವರ ವಿರುದ್ಧ ಮಾತನಾಡಿದರೆ ಹೆಸರು ಮಾಡಬಹುದೆಂದು ಹಾಗಾಗಿಯೇ ಸುದೀಪ್ ವಿರುದ್ಧ ಮಾತನಾಡಿದ' ಎಂದಿದ್ದಾರೆ ಜಗದೀಶ್.

    ಅಹೋರಾತ್ರನ ಮನೆಗೆ ಹೋಗಿದ್ದವರ ಪಟ್ಟಿ ನೀಡಿದ ಜಗದೀಶ್

    ಅಹೋರಾತ್ರನ ಮನೆಗೆ ಹೋಗಿದ್ದವರ ಪಟ್ಟಿ ನೀಡಿದ ಜಗದೀಶ್

    ಸುದೀಪ್ ಅಭಿಮಾನಿಗಳು ರೌಡಿಗಳು ಎಂದು ಅಹೋರಾತ್ರ ಹೇಳಿದ್ದಾನೆ, ಆದರೆ ಅಂದು ಅಲ್ಲಿ ಹೋದವರು ಯಾರು ರೌಡಿಗಳಲ್ಲ. ಅಲ್ಲಿ ಹೋದವರು ಯಾರೂ ಗೂಂಡಾಗಳಲ್ಲ 16 ಹೋಟೆಲ್‌ಗಳ ಮಾಲೀಕರಾಗಿರುವ ನವೀನ್ ಗೌಡ, ನೂರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಎಂಜಿನಿಯರ್‌ಗಳಾದ ಶ್ರೀನಿವಾಸ್, ರಾಜು. ಲೆಮನ್ ಹೌಸ್ ಎಂಬ ಸೂಪರ್ ಮಾರ್ಕೆಟ್ ಮಾಲೀಕ ಹರ್ಷ. ನಾನು ಸಹ ದೊಡ್ಡ ಸಂಸ್ಥೆಯೊಂದರ ಮಾಲೀಕ. ಇವರ್ಯಾರು ರೌಡಿಗಳಲ್ಲ ಎಲ್ಲರೂ ಜವಾಬ್ದಾರಿಯುತ ಕೆಲಸದಲ್ಲಿರುವವರೇ ನಾವು. ನಾವು ಎಲ್ಲಿಯೂ ಯಾರೊಂದಿಗೂ ಜಗಳ ಮಾಡಿದವರಲ್ಲ, ಆದರೆ ಕಿಚ್ಚ ಸುದೀಪ್ ಅವರ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡಿದಾಗ ಸುಮ್ಮನೆ ಇದ್ದವರಲ್ಲ ಎಂದಿದ್ದಾರೆ ಜಗದೀಶ್.

    English summary
    Sudeep Fan Jagadish Clarification on why they went to Ahorathra House at night. Know more.
    Monday, March 22, 2021, 19:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X