ಮನೆ ಬಿಟ್ಟು ಹೋದ ಅಭಿಮಾನಿಗಾಗಿ ಸುದೀಪ್ ಮನವಿ
Recommended Video

ದಿನ ಬೆಳಗಾದರೇ ಸುದೀಪ್ ಅವರನ್ನ ನೋಡಲು ಜೆಪಿ ನಗರದ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿರುತ್ತಾರೆ. ದಿನ ದಿನ ದುಡ್ಡು ಕೂಡಿಟ್ಟು, ತಮ್ಮ ನೆಚ್ಚಿನ ನಟನನ್ನ ನೋಡಲು ಸಿಟಿ ಬಸ್ ಹತ್ತಿ ಬರ್ತಾರೆ. ಸುದೀಪ್ ಅವರನ್ನ ನೋಡಲೇಬೇಕೆಂದು ಉಪವಾಸ ಮಾಡಿರುವ ಉದಾಹರಣೆಯೂ ಇದೆ.
ಹೀಗೆ, ಸುದೀಪ್ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಗಳು ಮಾಡುವ ಇಂತಹ ಕೆಲಸಗಳು, ನಟರಿಗೆ ಹೆಮ್ಮೆ ತರುತ್ತಾದರೂ, ಅವರ ಜೀವನ ಮತ್ತು ಸಮಯ ಮತ್ತು ದುಡ್ಡನ್ನ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಕೂಡ ಹೇಳುತ್ತಿರುತ್ತಾರೆ.
ಇದೀಗ, ಮತ್ತೊಂದು ಅಭಿಮಾನದ ಸಂಕಷ್ಟಕ್ಕೆ ಕಿಚ್ಚ ಸುದೀಪ್ ಸಿಲುಕಿದ್ದಾರೆ. ಸುದೀಪ್ ಅವರ ಅಭಿಮಾನಿಯಾಗಿರುವ ಮಣಿಕಂಠ ಎಂಬ ಯುವಕ ಮನೆ ಬಿಟ್ಟು ಹೋಗಿದ್ದಾರಂತೆ. ಮನೆಯವರ ಮೇಲೆ ಮುನಿಸಿಕೊಂಡಿರುವ ಮಣಿಕಂಠ ಮನೆ ಮತ್ತು ಊರು ಬಿಟ್ಟು ಬಂದಿದ್ದಾರಂತೆ.

ಈ ವಿಷ್ಯ ತಿಳಿದು ಸ್ವತಃ ಕಿಚ್ಚ ಸುದೀಪ್ ಅವರೇ ಮಣಿಕಂಠನ ಬಳಿ ಮನವಿ ಮಾಡಿಕೊಂಡಿದ್ದಾರೆ. ''ದಯವಿಟ್ಟು ಮನೆಗೆ ವಾಪಸ್ ಬಾ, ಮನೆಯವರು ಅಂದ್ಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ...ನೀನು ಎಲ್ಲೇ ಇದ್ದರೂ ಮನೆಗೆ ಹೋಗು, ನಂತರ ನಾನೇ ನಿನ್ನ ನೋಡಲು ನಿಮ್ಮ ಮನೆಗೆ ಬರ್ತೀನಿ'' ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
'ಮಣಿಕಂಠ' ಎಂಬ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ, ಸುದೀಪ್ ಅವರ ವಿಡಿಯೋ ನೋಡಿ, ಖಂಡಿತಾ ಎಲ್ಲೇ ಇದ್ದರೂ ಮನೆಗೆ ಹೋಗ್ತಾರೆ ಎಂಬ ನಂಬಿಕೆ ಇದೆ.


Click it and Unblock the Notifications











