'ಇದು ನನ್ನ ಕೊನೆ ಪ್ರಯತ್ನ' ರಕ್ತದಲ್ಲಿ ಪತ್ರ ಬರೆದ ಅಭಿಮಾನಿ: ಸುದೀಪ್ ಬೇಸರ

ತಂದೆ-ತಾಯಿ, ಅಣ್ಣ-ತಮ್ಮ, ಕೊನೆಯದಾಗಿ ಆ ದೇವರಿಗಿಂತ ತಮ್ಮ ನೆಚ್ಚಿನ ಸಿನಿಮಾ ನಟರ ಬಗ್ಗೆ ಹೆಚ್ಚು ಪ್ರೀತಿ ಹೊಂದಿರುವ ಹಲವು ಅಭಿಮಾನಿಗಳು ಸಿಕ್ತಾರೆ. ತಮ್ಮ ಸ್ಟಾರ್ ಗಳು ಏನು ಹೇಳ್ತಾರೋ, ಸಿನಿಮಾಗಳಲ್ಲಿ ಏನು ಮಾಡ್ತಾರೋ ಅದನ್ನ ಅನುರಿಸುವಂತಹ ಸ್ವಭಾವ ಹೊಂದಿರ್ತಾರೆ.

ಆ ನಟರನ್ನ ಭೇಟಿ ಮಾಡಿರಲ್ಲ. ಅವರೊಂದಿಗೆ ಮಾತನಾಡಿರಲ್ಲ. ಅದೇ ರೀತಿ ಆ ಅಭಿಮಾನಿಗಳಿಗಾಗಿ ಸ್ಟಾರ್ ಗಳು ಏನೂ ಮಾಡಿರಲ್ಲ. ಆದ್ರೂ ಅವರಿಗಾಗಿ ಎಂತಹ ಕೆಲಸಕ್ಕೂ ಹಿಂದೆ ಸರಿಯಲ್ಲ ಇಂತಹ ಅಭಿಮಾನಿಗಳು.

ಇದೀಗ, ಸುದೀಪ್ ಅವರ ಅಭಿಮಾನಿಯೊಬ್ಬರು ರಕ್ತದಲ್ಲಿ ಪತ್ರ ಬರೆದು ತಮ್ಮನ್ನ ಭೇಟಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಪತ್ರ ಓದಿದ ಸ್ವತಃ ಸುದೀಪ್ ಬೇಜಾರು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಆ ಪತ್ರದಲ್ಲಿ ಏನಿದೆ? ಯಾರು ಆ ಅಭಿಮಾನಿ? ಮುಂದೆ ಓದಿ....

ಪ್ಲೀಸ್ ಅಣ್ಣ ಭೇಟಿ ಮಾಡಿ

ಪ್ಲೀಸ್ ಅಣ್ಣ ಭೇಟಿ ಮಾಡಿ

''ನನ್ನ ಹೆಸರು ಸೌಮ್ಯ. ನನಗೆ ತಂದೆಯಿಲ್ಲ. ನಿಮ್ಮನ್ನು ಭೇಟಿ ಮಾಡಲು ತುಂಬಾ ಪ್ರಯತ್ನ ಪಟ್ಟಿದ್ದೀನಿ. ಆದ್ರೆ, ಸಾಧ್ಯವಾಗುತ್ತಿಲ್ಲ. ಈಗ ನಾನು ರಕ್ತದಲ್ಲಿ ಬರೆದು ನಿಮ್ಮನ್ನು ಕೇಳಿಕೊಳ್ಳುತ್ತಿದ್ದೇನೆ. ನನ್ನನ್ನು ಭೇಟಿ ಮಾಡಿ ಎಂದು'' ಆ ಯುವತಿ ವಿನಂತಿಸಿಕೊಂಡಿದ್ದಾಳೆ.

ಇದು ನನ್ನ ಕೊನೆಯ ಪತ್ರ

ಇದು ನನ್ನ ಕೊನೆಯ ಪತ್ರ

ದಾವಣೆಗೆರೆ ಮೂಲದ ಸುದೀಪ್ ಅಭಿಮಾನಿಗಳನ್ನ ಸಂಪರ್ಕಿಸಿ ಭೇಟಿಯಾಗಲು ಪ್ರಯತ್ನ ಪಟ್ಟಿದ್ದರಂತೆ ಈ ಯುವತಿ. ಆದ್ರೆ, ಅವರಿಂದಲೂ ಭೇಟಿ ಮಾಡಿಸಲು ಆಗಲಿಲ್ಲ ಎಂಬ ನಿರಾಸೆಯಿಂದ ''ಇದು ನನ್ನ ಕೊನೆಯ ಪ್ರಯತ್ನ, ಎರಡು ದಿನದಲ್ಲಿ ಪ್ರತಿಕ್ರಿಯೆ ಬೇಕು'' ಎಂದು ಎಚ್ಚರಿಕೆ ಕೊಟಿದ್ದಾರೆ.

ಸುದೀಪ್ ಪ್ರತಿಕ್ರಿಯೆ

ಸುದೀಪ್ ಪ್ರತಿಕ್ರಿಯೆ

''ಇದರ ಬಗ್ಗೆ ನಾನು ಹೆಮ್ಮೆ ಪಡಬೇಕೇ? ನೀವು ನಿಮ್ಮ ರಕ್ತದಿಂದ ಪತ್ರ ಬರೆದಿರುವುದು ನನಗೆ ತೀರಾ ನೋವು ತಂದಿದೆ. ಆದ್ರೂ ನಿಮ್ಮ ನೋವು ನನಗೆ ಅರ್ಥವಾಗುತ್ತೆ. ನಾನು ನಿಮ್ಮನ್ನು ಸದ್ಯದಲ್ಲೇ ಭೇಟಿಯಾಗುತ್ತೇನೆ'' ಎಂದು ಕಿಚ್ಚ ಸುದೀಪ್ ಸಮಾಧಾನ ಪಡಿಸಿದ್ದಾರೆ.

ಇಂತಹ ಕೆಲಸ ಆಗಬಾರದು

ಇಂತಹ ಕೆಲಸ ಆಗಬಾರದು

ಸಿನಿಮಾ ನಟರನ್ನ ಇಷ್ಟಪಡುವುದು, ಅವರು ಮಾತಿಗೆ ಗೌರವ ನೀಡುವುದು, ಅವರ ಒಳ್ಳೆಯ ಕೆಲಸಗಳನ್ನ ಅನುಸರಿಸಿರುವುದು ಎಲ್ಲವೂ ಅಭಿಮಾನಿ ಎಂಬುದು ಒಪ್ಪಬೇಕು. ಆದ್ರೆ, ಭೇಟಿಯಾಗಿಲ್ಲ ಎಂಬ ಕಾರಣಕ್ಕೆ ''ರಕ್ತದಲ್ಲಿ ಪತ್ರ ಬರೆಯುವುದು, ಇದು ನನ್ನ ಕೊನೆ ಪ್ರಯತ್ನ ಎನ್ನುವುದು'' ಉತ್ತಮವಲ್ಲ ಮತ್ತು ಇದು ಸಮಂಜಸವಲ್ಲ. ಇದರಿಂದ ಸ್ವತಃ ನಟರಿಗೂ ಆತಂಕ ಮತ್ತು ಬೇಸರ ಉಂಟುಮಾಡುತ್ತೆ. ಅಭಿಮಾನಿಗಳು ಅಭಿಮಾನವನ್ನ ಹೀಗೆಲ್ಲಾ ಪ್ರದರ್ಶಿಸಬಾರದು. ಇದನ್ನ ಸ್ವತಃ ನಟರು ಕೂಡ ನಿರೀಕ್ಷೆ ಮಾಡಲ್ಲ.

More from Filmibeat

English summary
Kannada actor kiccha sudeep fan soumya wrote a letter in blood. but, sudeep has bored after read that letter.
Read more about: sudeep ಸುದೀಪ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X