ಯಶ್ ಮಾಡಿಬಿಟ್ಟರೇ ಮಹಾಪರಾಧ? ಕುದಿಯುತ್ತಿದೆ ಸುದೀಪ್ ಅಭಿಮಾನಿಗಳ ರಕ್ತ!

By Harshitha

Recommended Video

ಸುದೀಪ್ ಗೆ ಯಶ್ ಅವಮಾನ ಮಾಡಿದ್ರು ಅಂದಿದ್ದಕ್ಕೆ ಸುದೀಪ್ ಹೇಳಿದ್ದೇನು ? | Filmibeat Kannada

ಒಂದ್ಕಡೆ ಎಲೆಕ್ಷನ್ ಬಿಸಿ, ಇನ್ನೊಂದು ಕಡೆ ಐ.ಪಿ.ಎಲ್ ಹವಾ... ಇವೆರಡರ ಮಧ್ಯೆ ಇಷ್ಟು ದಿನ ಸ್ಯಾಂಡಲ್ ವುಡ್ ಸೈಲೆಂಟ್ ಆಗಿತ್ತು. ಈಗ ಎಲ್ಲವೂ ತಣ್ಣಗೆ ಆಗುತ್ತಿದ್ದ ಹಾಗೆ, ಕನ್ನಡ ಚಿತ್ರರಂಗದಲ್ಲಿ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರು ಆಗಿದೆ.

ಸುದೀಪ್ ಫ್ಯಾನ್ಸ್ ಹಾಗೂ ಯಶ್ ಅಭಿಮಾನಿಗಳ ನಡುವೆ ಫೇಸ್ ಬುಕ್ ನಲ್ಲಿ ದೊಡ್ಡ ಯುದ್ದವೇ ನಡೆಯುತ್ತಿದೆ. ಯಶ್ ಆಡಿದ ಒಂದೇ ಒಂದು ಮಾತಿಗೆ ಸುದೀಪ್ ಫ್ಯಾನ್ಸ್ ಕಣ್ಣು ಕೆಂಪಾಗಿದೆ. ಸುದೀಪ್ ಗೆ ಯಶ್ ಮರ್ಯಾದೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕಿಚ್ಚನ ಹುಡುಗರ ರಕ್ತ ಕುದಿಯುತ್ತಿದೆ.

ಅಷ್ಟಕ್ಕೂ ಏನೀ ವಿವಾದ.? ಫೇಸ್ ಬುಕ್ ನಲ್ಲಿ ಅಭಿಮಾನಿಗಳ ಕಿತ್ತಾಟ ಶುರುವಾಗಿದ್ದು ಹೇಗೆ.? ಯಶ್ ಮಾಡಿದ ಮಹಾಪರಾಧ ಏನು.? ಎಂಬುದರ ಸಂಪೂರ್ಣ ವಿವರ ಫೋಟೋ ಸ್ಲೈಡ್ ಗಳಲ್ಲಿ ಇದೆ. ಓದಿರಿ...

ಎಲ್ಲವೂ ಶುರುವಾಗಿದ್ದು ಫಿಟ್ನೆಸ್ ಚಾಲೆಂಜ್ ನಿಂದ.!

'ಹಮ್ ಫಿಟ್ ತೋ ಇಂಡಿಯಾ ಫಿಟ್' (#HumFitThoIndiaFit) ಎಂಬ ಹ್ಯಾಶ್ ಟ್ಯಾಗ್ ಅಡಿ ಫಿಟ್ನೆಸ್ ಅಭಿಯಾನವನ್ನ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಆರಂಭಿಸಿದರು. ಈ ಫಿಟ್ನೆಸ್ ಚಾಲೆಂಜ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಹೃತಿಕ್ ರೋಷನ್ ಸೇರಿದಂತೆ ಕ್ರಿಕೆಟ್ ಹಾಗೂ ಬಾಲಿವುಡ್ ಲೋಕವನ್ನ ಸುತ್ತಿಕೊಂಡು ಸ್ಯಾಂಡಲ್ ವುಡ್ ತಲುಪಿತು. ಕಿಚ್ಚ ಸುದೀಪ್ ಗೆ ಕ್ರಿಕೆಟರ್ ವಿನಯ್ ಕುಮಾರ್ ಫಿಟ್ನೆಸ್ ಚಾಲೆಂಜ್ ಹಾಕಿದರು. ವಿನಯ್ ಕುಮಾರ್ ಎಸೆದ ಸವಾಲು ಸ್ವೀಕರಿಸಿ ಸುದೀಪ್ ಯಶಸ್ವಿ ಆದರು. ಬಳಿಕ ರಾಕಿಂಗ್ ಸ್ಟಾರ್ ಯಶ್, ಪತ್ನಿ ಪ್ರಿಯಾ, ಶಿವಣ್ಣ, ರಿತೇಶ್ ದೇಶ್ಮುಖ್, ಸೊಹೈಲ್ ಖಾನ್ ರವರಿಗೆ ಸುದೀಪ್ ಸವಾಲೆಸೆದರು.

ಸವಾಲು ಸ್ವೀಕರಿಸಿದ ನಟ ಯಶ್

ಸುದೀಪ್ ಹಾಕಿದ ಸವಾಲಿಗೆ ಒಂದು ಟ್ವಿಸ್ಟ್ ಕೊಡುವ ಮೂಲಕ ಸ್ವೀಕರಿಸಿದರು ನಟ ಯಶ್. ''ಬರೀ ನಾವು ಫಿಟ್ ಆಗಿರುವುದಲ್ಲ... ನಮ್ಮ ಜೊತೆಯಲ್ಲಿ ಇರುವವರನ್ನೂ ಫಿಟ್ ಆಗಿ ಇರುವಂತೆ ನೋಡಿಕೊಳ್ಳೋಣ'' ಎನ್ನುತ್ತ ತಮ್ಮ ಆತ್ಮೀಯ ಸ್ನೇಹಿತ ಚೇತನ್ ಕೈಯಲ್ಲಿ ವ್ಯಾಯಾಮ ಮಾಡಿಸಿದರು ನಟ ಯಶ್. ಇಷ್ಟೇ ಆಗಿದ್ರೆ, ವಿವಾದ ಆಗುತ್ತಿರಲಿಲ್ಲ. ವಿಡಿಯೋದಲ್ಲಿ ನಟ ಯಶ್ ಆಡಿದ ಮಾತಿನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಅಷ್ಟಕ್ಕೂ, ಯಶ್ ಹೇಳಿದ್ದೇನು.?

ಅಷ್ಟಕ್ಕೂ, ಯಶ್ ಹೇಳಿದ್ದೇನು.?

ಸುದೀಪ್ ಹಾಕಿದ ಚಾಲೆಂಜ್ ಸ್ವೀಕರಿಸಿ ನಟ ಯಶ್ ಒಂದು ವಿಡಿಯೋ ಮಾಡಿದರು. ಆ ವಿಡಿಯೋದಲ್ಲಿ ''ಹಾಯ್ ಸುದೀಪ್, ನೀವು ನನಗೊಂದು ಚಾಲೆಂಜ್ ಕೊಟ್ಟಿದ್ದೀರಾ. ಥ್ಯಾಂಕ್ಯು. ನಾವು ನಟರು... ಹೀಗಾಗಿ ನಾವು ವರ್ಕೌಟ್ ಮಾಡುತ್ತಲೇ ಇರುತ್ತೇವೆ. ಲೈಫ್ ನಲ್ಲಿ ಫಿಟ್ಟಾಗಿ ಇರಲು ಸಾಧ್ಯವೇ ಇಲ್ಲ ಎಂಬಂತೆ ಕಾಣುವ ನನ್ನ ಸ್ನೇಹಿತ ಚೇತನ್ ಕೈಯಲ್ಲಿ ನಿಮ್ಮ ಟಾಸ್ಕ್ ಮಾಡಿಸುತ್ತೇನೆ'' ಅಂತ ಯಶ್ ಹೇಳಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್ ಗೆ ''ಸುದೀಪ್ ಸರ್'', ''ಸುದೀಪ್ ಅವರೇ'' ಎಂದು ಯಶ್ ಹೇಳಿಲ್ಲ. ಏಕಾಏಕಿ ''ಹಾಯ್ ಸುದೀಪ್'' ಅಂತ ಯಶ್ ಹೇಳಿರುವುದರಿಂದ ''ದೀಪಣ್ಣಗೆ ಯಶ್ ಗೌರವ ಕೊಟ್ಟಿಲ್ಲ'' ಅಂತ ಸುದೀಪ್ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ.

ಕೋಪಿಸಿಕೊಂಡ ಸುದೀಪ್ ಫ್ಯಾನ್ಸ್

ಕೋಪಿಸಿಕೊಂಡ ಸುದೀಪ್ ಫ್ಯಾನ್ಸ್

ಫೇಸ್ ಬುಕ್ ನಲ್ಲಿ ಯಶ್ ಪೋಸ್ಟ್ ಮಾಡಿದ ವಿಡಿಯೋ ನೋಡಿ ''ಒಬ್ಬ ಹೀರೋಗೆ ಗೌರವ ಕೊಡುವುದನ್ನು ಯಶ್ ಕಲಿಯಬೇಕು. ಯಶ್ ಗಿಂತ ಸುದೀಪ್ ಹದಿನಾಲ್ಕು ವರ್ಷ ದೊಡ್ಡವರು'' ಎಂದು ಸುದೀಪ್ ಅಭಿಮಾನಿಗಳು ತಮ್ಮ ಬೇಸರವನ್ನ ಹೊರ ಹಾಕಿದರು.

ಶುರುವಾಯ್ತು ಕಾಮೆಂಟ್ ಗಳ ಸುರಿಮಳೆ

ಶುರುವಾಯ್ತು ಕಾಮೆಂಟ್ ಗಳ ಸುರಿಮಳೆ

''ಯಾವಾಗ ಮಾತನಾಡಬೇಕಾದರೂ ಸುದೀಪ್, ''ಯಶ್ ಅವರೇ..'' ಅಂತ ಶುರು ಮಾಡ್ತಾರೆ. ಸ್ವಲ್ಪ 'ಅವರೇ' ಅನ್ನೋದು ಕಲಿತರೆ, ಇನ್ನೂ ಹೈ ಲೆವೆಲ್ ಗೆ ಯಶ್ ಹೋಗ್ತಾರೆ. ಸೀನಿಯರ್ ಗೆ ಗೌರವ ಕೊಡುವುದನ್ನ ಯಶ್ ಕಲಿಯಬೇಕು'' ಅಂತ ಕಿಚ್ಚನ ಹುಡುಗರು ಕಾಮೆಂಟ್ ಮಾಡಲು ಶುರು ಮಾಡಿದರು.

ಆರಂಭವಾಯ್ತು ಘೋರ ಕದನ

ಆರಂಭವಾಯ್ತು ಘೋರ ಕದನ

''ಸುದೀಪ್ ಗೆ ಗೌರವ ಕೊಟ್ಟಿಲ್ಲ. 'ಸರ್' ಅಂತ ಕರೆದಿಲ್ಲ'' ಅಂತ ಸುದೀಪ್ ಫ್ಯಾನ್ಸ್ ಕೋಪಿಸಿಕೊಂಡರೆ, ''ಸುದೀಪ್ ಗೆ ಯಶ್ 'ನೀವು' ಅಂತ ಮಾತನಾಡಿಸಿದ್ದಾರೆ. 'ನೀನು' ಅಂದಿಲ್ಲ. 'ಹಾಯ್ ಸುದೀಪ್' ಅಂದಾಗ ಅವರಿಬ್ಬರ ಒಡನಾಟ ತೋರಿಸುತ್ತೆ'' ಎಂಬ ವಾದ ಆರಂಭಿಸಿದ್ದಾರೆ ಯಶ್ ಅಭಿಮಾನಿಗಳು.

'ಸರ್' ಅಂತ ಕರೆಯಬಾರದು.!

'ಸರ್' ಅಂತ ಕರೆಯಬಾರದು.!

ಸುದೀಪ್ ಗೆ ಯಶ್ 'ಸರ್' ಅಂತ ಕರೆಯಲೇಬಾರದಂತೆ. ಹಾಗಂತ ಯಶ್ ಅಭಿಮಾನಿಯೊಬ್ಬರು ಒಂದು ಕಾರಣ ಕೊಟ್ಟಿದ್ದಾರೆ. ಅದನ್ನ ನೀವೇ ಈ ಕಾಮೆಂಟ್ ನಲ್ಲಿ ಓದಿರಿ.

ಗೌರವ ಬೇರೆ ಕೊಡ್ಬೇಕಾ.?

ಗೌರವ ಬೇರೆ ಕೊಡ್ಬೇಕಾ.?

ಯಶ್ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ಕಿತ್ತಾಟ ಯಾವ ಲೆವೆಲ್ ಗೆ ಹೋಗಿದೆ ಅಂತ ನೀವೇ ನೋಡಿ...

ವ್ಯಕ್ತಿತ್ವದಿಂದ ವ್ಯಕ್ತಿತ್ವಕ್ಕೆ ಇರುವ ಡಿಫರೆನ್ಸ್

ವ್ಯಕ್ತಿತ್ವದಿಂದ ವ್ಯಕ್ತಿತ್ವಕ್ಕೆ ಇರುವ ಡಿಫರೆನ್ಸ್

ಸುದೀಪ್ ಹಾಗೂ ಯಶ್ ನಡುವೆ ಇರುವ ವ್ಯತ್ಯಾಸವನ್ನ ಅಭಿಮಾನಿಗಳೇ ವಿವರಿಸಿದ್ದಾರೆ ನೋಡಿ....

ಗೌರವಕ್ಕೆ ಅರ್ಹ ವ್ಯಕ್ತಿ ಸುದೀಪ್

ಗೌರವಕ್ಕೆ ಅರ್ಹ ವ್ಯಕ್ತಿ ಸುದೀಪ್

''ಕಿಚ್ಚ ಸುದೀಪ್ ಸರ್ ಗೆ ಮರ್ಯಾದೆ ಕೊಡಿ. ಅವರು ನಿಮಗಿಂತ ಸೀನಿಯರ್. ಎಲ್ಲರಿಂದಲೂ ಅವರು ಗೌರವಕ್ಕೆ ಅರ್ಹರು'' ಅಂತ ಸುದೀಪ್ ಫ್ಯಾನ್ ಯಶ್ ಬಳಿ ಕೇಳಿಕೊಂಡಿದ್ದಾರೆ.

ಈಗ ಏನಾಯ್ತು.?

ಈಗ ಏನಾಯ್ತು.?

''ಮುಂಚೆ ಸುದೀಪ್ ಸಾರ್, ಸುದೀಪ್ ಅವರೇ ಅಂತಿದ್ರಿ.. ಇವಾಗ ಏನಾಯ್ತು.?'' ಅನ್ನೋದು ಸುದೀಪ್ ಅಭಿಮಾನಿಗಳ ಪ್ರಶ್ನೆ. ಅದು ಯಶ್ ಗೆ.!

ಬೆಂಕಿ ಹೊತ್ತಿಕೊಂಡಿದೆ.!

ಬೆಂಕಿ ಹೊತ್ತಿಕೊಂಡಿದೆ.!

ಕಾಮೆಂಟ್ ಗಳ ಸುರಿಮಳೆ ನಡುವೆ ಯಶ್ ಅಭಿಮಾನಿ ಹಾಗೂ ಸುದೀಪ್ ಅಭಿಮಾನಿ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ.

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ

ಮಾತಿಗೆ ಮಾತು ಬೆಳೆದು ಸದ್ಯ ಯಶ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಸಮರಕ್ಕೆ ನಾಂದಿ ಹಾಡಿದೆ.

ನಿಲ್ಲದ ಕಿತ್ತಾಟ

ನಿಲ್ಲದ ಕಿತ್ತಾಟ

ಸುದೀಪ್ ಹಾಗೂ ಯಶ್ ಇಬ್ಬರೂ ಕನ್ನಡ ನಟರೇ. ಆದರೂ, ಅಭಿಮಾನಿಗಳು ಮಾತ್ರ ಅಭಿಮಾನದ ಪರಾಕಾಷ್ಟೆ ಮೆರೆಯಲು ಹೋಗಿ ಫೇಸ್ ಬುಕ್ ನಲ್ಲಿ ಬಡಿದಾಡಿಕೊಳ್ತಿದ್ದಾರೆ.

ಕಾಲು ಧೂಳಿಗೂ ಸಮ ಇಲ್ಲ.!

ಕಾಲು ಧೂಳಿಗೂ ಸಮ ಇಲ್ಲ.!

ಕನ್ನಡದಲ್ಲಿ ಬಿಲ್ಡಪ್ ಸ್ಟಾರ್ ಯಾರು.? ಯಾರ ತೂಕ ಜಾಸ್ತಿ ಅಂತ ಅಭಿಮಾನಿಗಳೇ ಹೇಳ್ತಾವ್ರೆ ಕೇಳಿ...

ಜಗಳ ಬೇಡ

ಜಗಳ ಬೇಡ

ಅಭಿಮಾನಿಗಳ ಕಿತ್ತಾಟ ಕಂಡು, ''ನಾವು ಫ್ಯಾನ್ಸ್ ಚೆನ್ನಾಗಿ ಇದ್ದರೆ ಸ್ಯಾಂಡಲ್ ವುಡ್. ಇಲ್ಲ ಅಂದ್ರೆ ಯಾರೂ ಇಲ್ಲ. ನಮ್ಮಿಂದ ಅವರು ಹೀರೋಗಳು. ಹೀಗಾಗಿ ಎಲ್ಲರನ್ನೂ ಸಪೋರ್ಟ್ ಮಾಡಿ. ದಯವಿಟ್ಟು ಜಗಳ ಬೇಡ'' ಅಂತ ಹೇಳುವವರೂ ಇದ್ದಾರೆ.

More from Filmibeat

English summary
Kannada Actor Kiccha Sudeep fans are annoyed with Rocking Star Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X