»   » ಸುದೀಪ್ ಅಭಿಮಾನಿಗಳ ಈ ಕೆಲಸಕ್ಕೆ ಎಷ್ಟೇ ಹೊಗಳಿದರು ಸಾಲದು

ಸುದೀಪ್ ಅಭಿಮಾನಿಗಳ ಈ ಕೆಲಸಕ್ಕೆ ಎಷ್ಟೇ ಹೊಗಳಿದರು ಸಾಲದು

Posted By:
Subscribe to Filmibeat Kannada
ಸುದೀಪ್ ಅಭಿಮಾನಿಗಳನ್ನ ಈ ಕಾರಣಕ್ಕೆ ಹೊಗಳಬೇಕು | Filmibeat kannada

ಅಭಿಮಾನಿಗಳು ಎಂದರೆ ಸ್ಟಾರ್ ಗಳ ಸಿನಿಮಾಗಳನ್ನ ನೋಡುವುದು, ಅವರು ಹೋದ ಕಡೆ ಹಿಂಬಾಲಿಸುವುದು, ಫೋಟೋ ತೆಗೆಸಿಕೊಂಡು ವಾಟ್ಸ್ ಆಪ್ , ಫೇಸ್ ಬುಕ್ ಗಳಲ್ಲಿ ಹಾಕಿಕೊಳ್ಳುವುದು ಈ ರೀತಿಯಲ್ಲಿ ಅಭಿಮಾನ ತೋರಿಸುವುದು ಹಿಂದಿನ ಕಾಲ. ಆದರೆ ಕಾಲ ಬದಲಾದಂತೆ ಅಭಿಮಾನಿಗಳು ಬದಲಾಗಿದ್ದಾರೆ, ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಕಿಚ್ಚ ಅಭಿಮಾನಿಗಳು.

ಸಿನಿಮಾ ಎನ್ನುವುದು ಪವರ್ ಫುಲ್ ಆಗಿರುವ ಮಾಧ್ಯಮ, ತೆರೆ ಮೇಲೆ ಬಂದದ್ದು ಪ್ರೇಕ್ಷಕರ ಮನಸ್ಸಿಗೆ ನೇರವಾಗಿ ಮುಟ್ಟುತ್ತದೆ ಎನ್ನುವ ಮಾತಿದೆ. ಅದರಂತೆ ಸ್ಟಾರ್ ಗಳ ಮಾತುಗಳು ಕೂಡ ತುಂಬಾನೇ ಪವರ್ ಫುಲ್ ಆಗಿರುತ್ತದೆ. ಅವರು ಹೇಳಿದ ಮಾತನ್ನ ಅಭಿಮಾನಿಗಳು ಚಾಚು ತಪ್ಪದೆ ನಡೆಸುತ್ತಾರೆ. ಯಾಕೆಂದರೆ ಅಭಿಮಾನಿಗೆ ಸ್ಟಾರ್ಗಳನ್ನ ಪ್ರೀತಿಸುತ್ತಾರೆ.

ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ ಕೇಕ್ ಮತ್ತು ಹಾರಕ್ಕಾಗಿ ಖರ್ಚು ಮಾಡುವ ಹಣವನ್ನು ಬಡವರ ಉಪಯೋಗಕ್ಕಾಗಿ ಬಳಸಿ ಎಂದು ಕಳೆದ ವರ್ಷ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತಿಳಿಸಿದ್ದರು. ಕಿಚ್ಚ ನುಡಿದಂತೆ ನಾವು ನಡೆದುಕೊಳ್ಳಬೇಕು ಎಂದು ತಿಳಿದುಕೊಂಡ ಸುದೀಪ್ ಅಭಿಮಾನಿಗಳು ಸಮಾಜಸೇವೆಗೆ ಮುಂದಾಗಿದ್ದಾರೆ. ಒಬ್ಬರು, ಇಬ್ಬರು ಎನ್ನದೇ ಸಾಕಷ್ಟು ಮಂದಿ ತಮ್ಮದೇ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದಾರೆ ಹಾಗಾದರೆ ಕಿಚ್ಚನ ಅಭಿಮಾನಿಗಳು ಮಾಡಿದ ಕೆಲಸವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಕಿಚ್ಚನ ಅಭಿಮಾನಿಗಳ ಅಳಿಲು ಸೇವೆ

ಕಿಚ್ಚನ ಅಭಿಮಾನಿಗಳು ಇತ್ತೀಚಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೇವಲ ಯುವಕರು ಮಾತ್ರವಲ್ಲದೆ ಹುಡುಗಿಯರು ಕೂಡ ತಮ್ಮ ಕೈಲಾದ ಸಹಾಯವನ್ನ ಜನರಿಗೆ ಮಾಡಲು ಮುಂದಾಗಿದ್ದಾರೆ.

ಜನರಿಗೆ ನೀರಿನ ವ್ಯವಸ್ಥೆ

ಬಸವ ಕಲ್ಯಾಣದ ಅಭಿನಯ ಚಕ್ರವರ್ತಿ ಕಿಚ್ಚ ಸೇನಾ ಸಮಿತಿಯ ಸದಸ್ಯರು ಬೇಸಿಗೆ ಶುರುವಾಗಿರುವ ಕಾರಣದಿಂದಾಗಿ ಅಲ್ಲಿಯ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಬಸ್ ನಿಲ್ದಾಣಕ್ಕೆ ಬಂದವರು ಹಾಗೂ ದಾರಿಹೋಕರಿಗೆ ಧಣಿವಾರಿಸುವ ಕೆಲಸ ಮಾಡುತ್ತಿದ್ದಾರೆ.

ಮಕ್ಕಳಿಗೆ ಬಟ್ಟೆಯ ವ್ಯವಸ್ಥೆ

ಹೆಬ್ಬುಲಿ ಹುಡುಗಿಯರು ಎಂದು ತಂಡ ಕಟ್ಟಿಕೊಂಡಿರುವ ಕಿಚ್ಚನ ಮಹಿಳಾ ಅಭಿಮಾನಿಗಳು ಶಿಶುಮಂದಿರ ಹಾಗೂ ಅನಾಥಾಶ್ರಮಗಳಿಗೆ ಭೇಟಿಕೊಟ್ಟು ,ಮಕ್ಕಳಿಗೆ ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ನೀಡಿದ್ದಾರೆ. ಅದರ ಜೊತೆಯಲ್ಲಿ ಬೀದಿ ಬದಿಯಲ್ಲಿರುವ ಮಕ್ಕಳಿಗೆ ಆಹಾರವನ್ನ ವಿತರಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಸೇವೆ

ಸುಧೀ ಅನ್ನೋ ಸುದೀಪ್ ಅವರ ಅಭಿಮಾನಿ, ಹಾಸನದಲ್ಲಿ ಅನಾಥ ಶವಗಳನ್ನು ಮಣ್ಣು ಮಾಡುವುದು, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಕೊಡುಸುವ ಕೆಲಸಗಳನ್ನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಯುವಕನೊಬ್ಬ ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ದರು. ಆ ಹುಡುಗನನ್ನು ಕರೆತಂದು ಸೂಕ್ತ ಜಾಗಕ್ಕೆ ಸೇರಿಸಿದ್ದಾರೆ.

'ಸುದೀಪ್'ಗಾಗಿ ಕನ್ನಡ ಕಲಿಯುತ್ತಿರುವ ತಮಿಳು ಅಭಿಮಾನಿ: ಕಾರಣವೇನು.?

English summary
Kannada actor Sudeep fans are involved in social work. Fans arrenged drinking water and orphaned children's clothing system and Fans are donate cloths and food for children.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X