Sudeep Vs Prakash raj: "ದರ್ಶನ್ ಪ್ರಚಾರ ಮಾಡಿದಾಗ ಯಾಕೆ ಸುಮ್ಮನಿದ್ದೀರಿ?" ಪ್ರಕಾಶ್ ರಾಜ್ ವಿರುದ್ಧ ಕಿಚ್ಚನ ಫ್ಯಾನ್ಸ್ ಕಿಡಿ
ಕಿಚ್ಚ ಸುದೀಪ್ ವಿರುದ್ಧ ಪ್ರಕಾಶ್ ರಾಜ್ ಟ್ವೀಟ್ ವಾರ್ ಮುಂದುವರೆಸಿದ್ದಾರೆ. ಸುದೀಪ್ ಸಿಎಂ ಬಸವರಾಜ್ ಬೊಮ್ಮಯಿ ಪರ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ಪ್ರಕಾಶ್ ರಾಜ್ ಅಸಮಧಾನ ಹೊರಹಾಕುತ್ತಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿ ಕಿಚ್ಚನಿಗೆ ಟಾಂಗ್ ಕೊಡುತ್ತಿದ್ದಾರೆ.
ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಅನ್ನೋ ಹರಿದಾಡಿದಾಗಲೇ ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದ್ದರು. " ಚುನಾವಣೆ ಸೋಲುವ ಭಯದಲ್ಲಿ ಬಿಜೆಪಿ ಪಕ್ಷವು ಸುದೀಪ್ ಹೆಸರನ್ನು ಉಲ್ಲೇಖಿಸುತ್ತಿದೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ." ಕಿಚ್ಚ ಸುದ್ದಿಗೋಷ್ಠಿ ಮಾಡುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದರು. ಇಲ್ಲಿಂದ ಶುರುವಾಗಿದ ಟ್ವೀಟ್‌ಗಳ ಸರಣಿಯನ್ನು ಮುಂದುವರೆಸುತ್ತಲೇ ಇದ್ದಾರೆ.

ಪ್ರಕಾಶ್ ರಾಜ್ ಬಹಿರಂಗವಾಗಿಯೇ ಕಿಚ್ಚ ಸುದೀಪ್ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಅಭಿಮಾನಿಗಳು ಹಾಗೂ ನೆಟ್ಟಗರು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲಿ ಕಿಚ್ಚ ಅಭಿಮಾನಿಗಳು "ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬೇಡ" ಅಂತ ದರ್ಶನ್ ಪ್ರಚಾರ ಮಾಡುತ್ತಿರುವಾಗ ಯಾಕೆ ಸುಮ್ಮನಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
"ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತಿದ್ದೀರಿ"
ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಅವರು ಸೂಚಿಸಿದವರ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿಂದ ಕಿಚ್ಚನ ವಿರುದ್ಧ ಪ್ರಕಾಶ್ ರಾಜ್ ಸಮರ ಸಾರಿದ್ದಾರೆ. ನಿನ್ನೆ (ಏಪ್ರಿಲ್ 6) "ಕಿಚ್ಚನ ಹೇಳಿಕೆಯಿಂದ ನನಗೆ ಆಘಾತ ಮತ್ತು ನೋವು ಉಂಟಾಗಿದೆ" ಎಂದು ಪ್ರಕಾಶ್ ಹೇಳಿಕೆ ನೀಡಿದ್ದರು.
ಹಾಗೇ ತನ್ನ ಟ್ವಿಟರ್ ಖಾತೆಯಿಂದ ಮತ್ತೊಂದು ಟ್ವೀಟ್ ಮಾಡಿ ಎಚ್ಚರಿಕೆಯನ್ನೂ ನೀಡಿದ್ದರು. "ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದವರಿಂದ ಪ್ರೀತಿಯಿಂದ ಬೆಳೆದ ನೀವು, ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ . ಇನ್ನು ಮುಂದೆ ನಿಮ್ಮನ್ನೂ , ನಿಮ್ ಪಕ್ಷವನ್ನು ಪ್ರಶ್ನಿಸುವ ಜನರ ದನಿಗೆ ತಯಾರಾಗಿರಿ." ಎಂದು ಪ್ರಕಾಶ್ ರಾಜ್ ಟ್ವೀಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

"ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ" ಕಿಚ್ಚನಿಗೆ ಟಾಂಗ್
ಪ್ರಕಾಶ್ ರಾಜ್ ನಿನ್ನೆಯಿಂದಲೂ ಕಿಚ್ಚನಿಗೆ ಟಾಂಗ್ ಕೊಡುತ್ತಲೇ ಬಂದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಕಷ್ಟಕಾಲದಲ್ಲಿ ಸಹಾಯ ನಿಂತಿದ್ದರು. ಹೀಗಾಗಿ ಈಗ ಅವರ ಪರ ಪ್ರಚಾರ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರಕಾಶ್ ರಾಜ್ ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿದ್ದರು.
"ನೋಡ್ರಪ್ಪ... ನಿಮ್ ಮಾಮನೊ.. ನಿಮ್ ಅತ್ತೇನೊ.. ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ.. ನೀವು ದುಡಿದಿದ್ರಲ್ಲಿ 10%..20% ಇಲ್ಲ 30 % ಕೊಡಿ.. ಅದು ನಿಮ್ಮಿಷ್ಟ .. ಆದ್ರೆ, ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ .. ಅಷ್ಟೆ..ಅಷ್ಟೇ" ಎಂದು ಕಿಚ್ಚನಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.
"ದರ್ಶನ್ ಪ್ರಚಾರದ ಯಾಕೆ ಪ್ರಶ್ನೆ ಮಾಡುತ್ತಿಲ್ಲ?"
ಪ್ರಕಾಶ್ ರಾಜ್ ವಿರುದ್ಧ ಕಿಚ್ಚನ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ದರ್ಶನ್ ಇತ್ತೀಚೆಗೆ ಸತೀಶ್ ರೆಡ್ಡಿ ಪರ ಪ್ರಚಾರ ಮಾಡಿದಂತೆ ಸುದೀಪ್ ಕೂಡ ಸಿಎಂ ಪರ ಮಾಡುತ್ತಿದ್ದಾರೆ. "ಒಂದು ಕಣ್ಣಿಗೆ ಸುಣ್ಣ.. ಒಂದು ಕಣ್ಣಿಗೆ ಬೇಡ" ಎಂದು ಕಿಚ್ಚ ಫ್ಯಾನ್ಸ್ ಕಿಡಿ ಕಾರುತ್ತಿದ್ದಾರೆ. "ಪ್ರೀತಿಯ ಪ್ರಕಾಶ್ ಸರ್ ಅವರೇ.. ನಾನು ನಿಮ್ಮ ಆಲೋಚನೆಗಳು ಮತ್ತು ತೆರೆ ಹಿಂದಿನ ವರ್ತನೆಯ ದೊಡ್ಡ ಅಭಿಮಾನಿ. ಸುದೀಪ್ ಸರ್ ಅವರ ಡೈ ಹಾರ್ಡ್ ಪ್ಯಾನ್ ಆಗಿದ್ದು, ನಿಮ್ಮ ನಿರ್ಧಾರದ ಬಗ್ಗೆ ತ್ರೀವ ನಿರಾಸೆಯಾಗಿದೆ. ನಿರಂತರವಾಗಿ ನೀವು ಟ್ವೀಟ್ ಮೂಲಕ ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಸತೀಶ್ ರೆಡ್ಡಿ ಪರ ಹೇಗೆ ದರ್ಶನ್ ಪ್ರಚಾರ ಮಾಡಿದ್ರೋ ಹಾಗೇ ಇವರೂ ಮಾಡುತ್ತಿದ್ದಾರಷ್ಟೇ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಬೇಡ" ಎಂದು ಕಿಚ್ಚ ಸುದೀಪ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಕಡೆ ನೆಟ್ಟಿಗರು ಕೂಡ ಪ್ರಕಾಶ್ ವಿರುದ್ಧ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. " ನೀವು ಒಬ್ಬ ನಟರಾಗಿ ಗೌರವವಿದೆ. ನೀವು ಕಾಂಗ್ರೆಸ್ ಕಡೆ ಅಂತ ಎಲ್ಲರಿಗೂ ಗೊತ್ತು. ಅದನ್ನು ಯಾರು ಹೇಳುವುದು ಬೇಕಾಗಿಲ್ಲ . ಅವ್ರ ಚುನಾವಣೆ.. ಅವರ ಮತ ತೆಗೆದುಕೊಳ್ಳುವ ತಂತ್ರ ಅವರಿಗೆ ಬಿಟ್ಟಿದ್ದು. ನೀವ್ಯಾಕೆ ಮಧ್ಯಕ್ಕೆ ಬರ್ತೀರಾ? ನೀವು ಬೇಕಾದ್ರೆ ಸ್ಯಾಂಡಲ್‌ವುಡ್‌ನಲ್ಲಿ ಬೇಕಾದಷ್ಟು ಜನ ಇದ್ದಾರೆ ಕರ್ಕೊಂಡು ಹೋಗಿ" ಎಂದು ನೆಟ್ಟಿಗರೊಬ್ಬರು ಕಿಡಿ ಕಾಡುತ್ತಿದ್ದಾರೆ.


Click it and Unblock the Notifications











