ಅಹೋರಾತ್ರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಸುದೀಪ್ ಅಭಿಮಾನಿಗಳು
ಬರಹಗಾರ, ಸಾಮಾಜಿಕ ಚಿಂತಕ ಅಹೋರಾತ್ರ ಅವರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ಹಿನ್ನೆಲೆ ಆಕ್ರೋಶಗೊಂಡ ಸುದೀಪ್ ಅಭಿಮಾನಿಗಳು ಇಂದು ಸಂಜೆ ಅಹೋರಾತ್ರ ಮನೆಗೆ ಹೋಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Recommended Video
ಸುದೀಪ್ ಅಭಿಮಾನಿಗಳು ಮನೆಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಸ್ವತಃ ಆಹೋರಾತ್ರ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿಕೊಂಡಿದ್ದಾರೆ. 'ಸುದೀಪ್ ಅಭಿಮಾನಿಗಳನ್ನು ನನ್ನನ್ನು ಕೊಲ್ಲಲು ಬಂದಿದ್ದರು, ಸುದೀಪ್ ಅವರನ್ನು ಬಂಧಿಸಬೇಕು' ಎಂದು ದೂರಿದ್ದಾರೆ.
ಅಹೋರಾತ್ರ ಮನೆ ಬಳಿ ಗಲಾಟೆ ಆಗುತ್ತಿರುವ ವಿಚಾರ ತಿಳಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟೆ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಬಂದ ಸುದೀಪ್ ಅವರ ಅಭಿಮಾನಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ....

ಸುದೀಪ್ ಅವರನ್ನು ನಿಂದಿಸಿದ ಅಹೋರಾತ್ರ
ನಟ ಸುದೀಪ್ ಅವರು ರಮ್ಮಿ ಗೇಮ್‌ಗೆ ರಾಯಭಾರಿ ಆದ ಕ್ಷಣದಿಂದಲೂ ಅಹೋರಾತ್ರ ಖಂಡಿಸುತ್ತಾ, ಕಿಚ್ಚನ ವಿರುದ್ಧ ನಿಂದಿಸುತ್ತಲೇ ಬಂದಿದ್ದಾರೆ. ಜೂಜು ಆಟಕ್ಕೆ ಅನೇಕರು ಬಲಿಯಾಗಿದ್ದಾರೆ. ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅಂತಹ ಜೂಜಿಗೆ ಸುದೀಪ್ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಟೀಕಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಹಳ ಕೆಟ್ಟದಾಗಿ ಬೈಯ್ದು ವಿಡಿಯೋ ಪೋಸ್ಟ್ ಮಾಡಿದ್ದರು.

ತಿರುಗಿಬಿದ್ದ ಸುದೀಪ್ ಅಭಿಮಾನಿಗಳು
ಸುದೀಪ್ ಅವರನ್ನು ವೈಯಕ್ತಿಕವಾಗಿ ನಿಂದಿಸಿದ ಕಾರಣಕ್ಕೆ ಕಿಚ್ಚನ ಅಭಿಮಾನಿಗಳು ಅಹೋರಾತ್ರನ ವಿರುದ್ಧ ತಿರುಗಿ ಬಿದ್ದರು. ಅಹೋರಾತ್ರ ಅವರಿಗೆ ಫೋನ್ ಮೂಲಕ, ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದರು. 'ನಮ್ ಬಾಸ್ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ'' ಎಂದು ಕೆಟ್ಟದಾಗಿ ನಿಂದಿಸಿ ತಿರುಗೇಟು ನೀಡಿದ್ದರು.

ಒಂದು ವಾರದ ಹಿಂದೆ ವಿಡಿಯೋ ಪೋಸ್ಟ್
ಸುದೀಪ್ ಅಭಿಮಾನಿಗಳಿಂದ ತೀವ್ರ ಬೆದರಿಕೆ ಕರೆಗಳು ಬಂದ ಹಿನ್ನೆಲೆ ಕಳೆದ ವಾರ ವಿಡಿಯೋ ಮಾಡಿದ್ದ ಅಹೋರಾತ್ರ ಏಕವಚನದಲ್ಲಿ ನಟನನ್ನು ನಿಂದಿಸಿದ್ದರು. 'ಸುದೀಪ್ ಅಭಿಮಾನಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರ್ತಿದೆ, ಕಾನೂನು ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ' ಎಂದು ಖಂಡಿಸಿ ಬಾಯಿಗೆ ಬಂದ ಹಾಗೆ ಮಾತಾಡಿದ್ದರು.

ಮನೆ ನುಗ್ಗಿ ಹಲ್ಲೆ ಮಾಡಲು ಕಾರಣವಾಯಿತೇ?
ಸತತವಾಗಿ ಸುದೀಪ್ ಹಾಗೂ ಅವರ ಅಭಿಮಾನಿಗಳನ್ನು ನಿಂದಿಸುತ್ತಿದ್ದ ಹಿನ್ನೆಲೆ, ಇಂದು ಅಹೋರಾತ್ರ ಮನೆಗೆ ನುಗ್ಗಿ ದಾಳಿ ಮಾಡಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ಈ ಪ್ರಕರಣ ಚೆನ್ನಮ್ಮನ ಕೆರೆ ಅಚ್ಚುಕಟ್ಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸುದೀಪ್ ಅಭಿಮಾನಿ ಸಂಘದ ರಾಜ್ಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಇದೆ.


Click it and Unblock the Notifications











