For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಪೇಜ್ ಗಳ ವಿರುದ್ಧ ರಾಜವಂಶ ಮತ್ತು ಸುದೀಪ್ ಫ್ಯಾನ್ಸ್ ಗರಂ

  By Naveen
  |
  ಟ್ರೋಲ್ ಪೇಜ್ ಗಳ ವಿರುದ್ಧ ರಾಜವಂಶ ಮತ್ತು ಸುದೀಪ್ ಫ್ಯಾನ್ಸ್ ಗರಂ | Filmibeat Kannada

  ಸಾಮಾಜಿಕ ಜಾಲತಾಣಗಳಲ್ಲಿ ಈಗ ಟ್ರೋಲ್ ಮಾಡುವುದು ಟ್ರೆಂಡ್ ಆಗಿದೆ. ಆದರೆ ಕೆಲವು ಬಾರಿ ಹಾಸ್ಯ ಮಾಡಲು ಹೋಗಿ ಟ್ರೋಲ್ ಗಳು ಅತಿರೇಕವು ಆಗುತ್ತದೆ. ಅದರಲ್ಲಿಯೂ ಕೆಲವು ಟ್ರೋಲ್ ಪೇಜ್ ಗಳಲ್ಲಿ ಕನ್ನಡದ ನಟ ನಟಿಯರ ಮೇಲೆ ಟ್ರೋಲ್ ಮಾಡಲಾಗುತ್ತಿದೆ. ಇದರ ಬಗ್ಗೆ ಇದೀಗ ರಾಜವಂಶದ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಗರಂ ಆಗಿದ್ದಾರೆ.

  ಈ ಬಗ್ಗೆ ಈಗಾಗಲೇ 'ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಸೇನಾ ಸಮಿತಿ' ಸೈಬರ್ ಕ್ರೈಂಗೆ ದೂರು ನೀಡಿದೆ. 'ದೇಪಣ್ಣ ಅಂಗಡಿ', 'BIGG BOSS SUDEEP' ಹಾಗೂ 'ALIEN D HEBBULI' ಎಂಬ ಮೂರು ಫೇಸ್ ಬುಕ್ ಪೇಜ್ ಗಳಲ್ಲಿ ಸುದೀಪ್ ಬಗ್ಗೆ ಅವಹೇಳನಕಾರಿ ಟ್ರೋಲ್ ಗಳನ್ನು ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ''ಇದರಿಂದ ಅಭಿಮಾನಿಗಳಾದ ನಮ್ಮೆಲರ ಮನಸ್ಸಿಗೆ ತುಂಬಾ ಬೇಜಾರಾಗಿದೆ. ಅದ್ದರಿಂದ ಈ ಎಲ್ಲ ಟ್ರೋಲ್ ಪೇಜ್ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು'' ಅಭಿಮಾನಿಗಳು ಮನವಿ ಮಾಡಿದ್ದಾರೆ.

  ಇದರ ಜೊತೆಗೆ ರಾಜವಂಶದ ಬಗ್ಗೆ, ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಬಗ್ಗೆ ಫೇಸ್ ಬುಕ್ ನಲ್ಲಿ ಹೆಚ್ಚು ಟ್ರೋಲ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾಜವಂಶದ ಅಭಿಮಾನಿಗಳು ಸೇರಿ ಮಾಗಡಿ ರೋಡ್ ಪೋಲಿಸ್ ಠಾಣೆಯಲ್ಲಿ ದೂರ ನೀಡಲು ನಿರ್ಧಾರ ಮಾಡಿದ್ದಾರೆ. ಸ್ಟಾರ್ ನಟರ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಮೇಲೆ ಮಾಡಿರುವ ಟ್ರೋಲ್ ಗಳನ್ನು ನೋಡಿ ಕೆಂಡಾಮಂಡಲವಾಗಿದ್ದಾರೆ.

  English summary
  Deppana angadi, BIGG BOSS SUDEEP and ALIEN D HEBBULI Facebook pages are trolling Kichha Sudeep regularly which irked Sudeep fans. Fans filed a complaint at Cyber police against these pages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X