For Quick Alerts
  ALLOW NOTIFICATIONS  
  For Daily Alerts

  ಅಹೋರಾತ್ರ ವಿರುದ್ಧ ಪ್ರತಿದೂರು ದಾಖಲಿಸಿದ ಸುದೀಪ್ ಅಭಿಮಾನಿಗಳು

  |

  ನಟ ಸುದೀಪ್ ಅಭಿಮಾನಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ನಿನ್ನೆ ಅಹೋರಾತಿ ಆರೋಪಿಸಿದ್ದರು. ದಾಂಧಲೆ ನಡೆದುದ್ದನ್ನು ಫೇಸ್‍ಬುಕ್ ಲೈವ್ ಮೂಲಕ ಹೇಳಿದ್ದರು. ಸುದೀಪ್ ಅಭಿಮಾನಿಗಳು ಕೊಲ್ಲಲು ಬಂದಿದ್ದರು ಎಂದು ಆರೋಪಿಸಿರುವ ಅಹೋರಾತ್ರ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.

  ಮತ್ತೊಂದೆಡೆ ಸುದೀಪ್ ಅಭಿಮಾನಿಗಳು ಸಹ ಅಹೋರಾತ್ರ ವಿರುದ್ಧ ದೂರು ದಾಖಲು ಮಾಡಿದ್ದಾರೆ. "ಫಿಲ್ಮೀಬೀಟ್ ಕನ್ನಡವು, ಸುದೀಪ್ ಅವರ ಆಪ್ತ ಗೆಳೆಯ, ಮ್ಯಾನೇಜರ್ ಸಹ ಆಗಿರುವ ನಿರ್ಮಾಪಕ ಜಾಕ್ ಮಂಜು ಅವರೊಟ್ಟಿಗೆ ಮಾತನಾಡಿದ್ದು, 'ತಲೆ ಕೆಟ್ಟ ವ್ಯಕ್ತಿಯ ಮಾತಿಗೆ ನಾನು ಪ್ರತಿಕ್ರಿಯೆ ನೀಡಲು ಆಗುವುದಿಲ್ಲ' ಎಂದರು.

  ನಂತರ ಮಾತು ಮುಂದುವರೆಸಿ ಅವರು ಪೊಲೀಸ್ ಠಾಣೆಗೆ ಹೋಗಿದ್ದಾರೆ ನಾವೂ ಸಹ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದರು. ಯಾವ ವಿಷಯದ ಬಗ್ಗೆ ದೂರು ನೀಡಿದ್ದೀರೆಂಬ ಪ್ರಶ್ನೆಗೆ 'ಪ್ರಕರಣ ಈಗ ಠಾಣೆ ಮೆಟ್ಟಿಲೇರಿದೆ, ಹಾಗಾಗಿ ಈ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಇದೆಲ್ಲವೂ ಮುಗಿದ ಬಳಿಕ ಒಂದು ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಷಯದ ಬಗ್ಗೆ ಸ್ಪಷ್ಟನೆ ನೀಡುತ್ತೇವೆ' ಎಂದಿದ್ದಾರೆ ಜಾಕ್ ಮಂಜು.

  'ನಿನ್ನೆ ದಾಳಿ ಮಾಡಲು ಕಾರಣವೇನು, ದಾಳಿ ಮಾಡಿದವರಲ್ಲಿ ಇದ್ದವರ ಸಂಪರ್ಕ ಸಂಖ್ಯೆ ಕೊಡಿ' ಎಂದು ಮನವಿ ಮಾಡಿದಾಗ ಕೋಪಿಸಿಕೊಂಡು ಕರೆ ಕಟ್ ಮಾಡಿದರು ಜಾಕ್ ಮಂಜು.

  ಸುದೀಪ್ ಬಗ್ಗೆ ಅವಾಚ್ಯವಾಗಿ ಅಹೋರಾತ್ರ ಮಾತನಾಡಿದ್ದಾರೆ ಎಂದು ಆರೋಪಿಸಿ ಅಹೋರಾತ್ರ ನಿವಾಸದ ಮೇಲೆ ಸುದೀಪ್ ಅಭಿಮಾನಿಗಳು ಎನ್ನಲಾಗುತ್ತಿರುವ ಗುಂಪೊಂದು ದಾಳಿ ಮಾಡಿತ್ತು.

  ದಾಳಿ ಬಳಿಕ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿದ ಆಧ್ಯಾತ್ಮಿಕ ಚಿಂತಕ, ಲೇಖಕ ಅಹೋರಾತ್ರ, "ಸುದೀಪ್ ಅಭಿಮಾನಿಗಳು ಕೊಲ್ಲಲು ಬಂದಿದ್ದರು. ಮಾರಣಾಂತಿಕ ಹಲ್ಲೆ ಮಾಡಿದರು. ನಮಗೆ ಎರಚಲು ಖಾರದ ಪುಡಿ ಚಾಕು ಚೂರಿಗಳನ್ನು ತಂದಿದ್ದರು' ಎಂದು ಆರೋಪಿಸಿದರು.

  ಅಹೋರಾತ್ರ ವಿರುದ್ಧ ಕಿಚ್ಚನ ಫ್ಯಾನ್ಸ್ ಕೊಟ್ಟಿರೋ ಕಂಪ್ಲೇಂಟ್ ಏನು? | Filmibeat Kannada

  ರಾತ್ರಿಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಹೋರಾತ್ರ ಅವರು ದೂರು ದಾಖಲಿಸಿದ್ದಾರೆ. ಅಹೋರಾತ್ರ ಮನೆಯ ಮೇಲೆ ದಾಳಿ ಮಾಡಿದ್ದ ಕೆಲವರನ್ನು ನಿನ್ನೆ ರಾತ್ರಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

  English summary
  Sudeep fans filled counter complaint against Ahorathra. About yesterday's incident Ahorathra already filed a complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X