For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ ಆಕ್ಷನ್ ಕಟ್ ನಲ್ಲಿ ನವರಸ ನಾಯಕನ ಅಭಿನಯ ?

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ತಮ್ಮ ಸುತ್ತಾ ಮುತ್ತ ಇರುವವರನ್ನು ನಗಿಸುತ್ತಾ ಹಿರಿಯರು ಕಿರಿಯರು ಎಲ್ಲರಲ್ಲಿಯೂ ಒಂದಾಗಿ ನಗುನಗುತ್ತಾ ಜೀವನ ಸಾಗುಸುತ್ತಿರುವ ನಟ ನವರಸ ನಾಯಕ ಜಗ್ಗೇಶ್. ಕಿಚ್ಚ ಸುದೀಪ್ ಹಾಗೂ ನವರಸ ನಾಯಕ ಜಗ್ಗೇಶ್ ಸಾಕಷ್ಟು ದಿನಗಳಿಂದ ತುಂಬಾ ಆತ್ಮೀಯರಾಗಿದ್ದಾರೆ, ನವರಸ ನಾಯಕ, ಕಿಚ್ಚನ ಸಹೋದರನಂತೆ ಏಳು-ಬೀಳುಗಳಲ್ಲಿ ಮಾನಸಿಕವಾಗಿ ಧೈರ್ಯ ತುಂಬುತ್ತಾ ಬಂದಿದ್ದಾರೆ.

  ಕನ್ನಡ ಸಿನಿಮಾರಂಗದ ಆಸ್ತಿ ಅಂತಲೇ ಸುದೀಪ್ ಅವರನ್ನ ಕರೆಯುವ ಜಗ್ಗೇಶ್ ಹಾಗೂ ಕಿಚ್ಚ ಒಂದೇ ಚಿತ್ರದಲ್ಲಿ ಅಭಿನಯಿಸಿದರೆ ಹೇಗೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಂಥದೊಂದು ಆಸೆ ಹುಟ್ಟಿರುವುದು ಅಭಿಮಾನಿಗಳಲ್ಲಿ. ಅಭಿಮಾನಿಗಳ ಆಸೆಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

  ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಲಿರುವ ನಟಿಯರು ಇವರೇ

  ಹಾಗಾದರೆ ಜಗ್ಗೇಶ್ ಮತ್ತು ಕಿಚ್ಚ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಾರಾ? ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುವುದರ ಬಗ್ಗೆ ಜಗ್ಗೇಶ್ ಏನು ಹೇಳುತ್ತಾರೆ? ಅಷ್ಟಕ್ಕೂ ಇಂಥದೊಂದು ಪ್ರಶ್ನೆ ಹುಟ್ಟುವ ಸಂದರ್ಭ ಹೇಗೆ ಬಂತು. ಈ ಎಲ್ಲಾ ಪ್ರಶ್ನೆ ಉತ್ತರ ಇಲ್ಲಿದೆ ಮುಂದೆ ಓದಿ

  ಒಂದೇ ಚಿತ್ರದಲ್ಲಿ ಕಿಚ್ಚ-ನವರಸ ನಾಯಕ

  ಒಂದೇ ಚಿತ್ರದಲ್ಲಿ ಕಿಚ್ಚ-ನವರಸ ನಾಯಕ

  ಕನ್ನಡ ಸಿನಿಮಾರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳು ಈಗ ಹೆಚ್ಚಾಗುತ್ತಿವೆ. ಪ್ರೇಕ್ಷಕರು ಕೂಡ ಮಲ್ಟಿ ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಂಡ ಚಿತ್ರಗಳನ್ನ ಗೆಲ್ಲಿಸುತ್ತಿದ್ದಾರೆ. ಸದ್ಯ ಚಂದನವನದಲ್ಲಿ ಜಗ್ಗೇಶ್ ಹಾಗೂ ಸುದೀಪ್ ಒಂದೇ ಸಿನಿಮಾದಲ್ಲಿ ಅಭಿನಯಿಸಬೇಕು ಎನ್ನುವ ಒತ್ತಾಯ ಶುರು ಆಗಿದೆ.

  ಕಿಚ್ಚನ ನಿರ್ದೇಶನದಲ್ಲಿ ಚಿತ್ರ?

  ಕಿಚ್ಚನ ನಿರ್ದೇಶನದಲ್ಲಿ ಚಿತ್ರ?

  ಸುದೀಪ್ ಅವರ ದೈವ ಭಕ್ತಿ ಬಗ್ಗೆ ನಟ ಜಗ್ಗೇಶ್ ಟ್ವಿಟ್ ಮಾಡಿದ್ದರು. ಇಬ್ಬರ ಒಡನಾಟ ನೋಡಿದ ಅಭಿಮಾನಿಗಳು ಇಬ್ಬರು ಒಟ್ಟಿಗೆ ಅಭಿನಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರ ನೀಡಿರುವ ಜಗ್ಗೇಶ್ ಕಿಚ್ಚ ನಿರ್ದೇಶನ ಮಾಡಿದರೆ ಅದು ಒಳ್ಳೆಯ ಸಿನಿಮಾ ಆಗುತ್ತೆ ಎಂದು ಉತ್ತರ ಕೊಟ್ಟಿದ್ದಾರೆ.

  ಸುದೀಪ್ ತಂದೆ ಪಾತ್ರದಲ್ಲಿ ಜಗ್ಗೇಶ್ ಅಭಿನಯ ?

  ಸುದೀಪ್ ತಂದೆ ಪಾತ್ರದಲ್ಲಿ ಜಗ್ಗೇಶ್ ಅಭಿನಯ ?

  ಅಭಿಮಾನಿಗಳು ಜಗ್ಗೇಶ್ ಮತ್ತು ಕಿಚ್ಚ ಸುದೀಪ್ ಒಂದೇ ಚಿತ್ರದಲ್ಲಿ ಅಭಿನಯಿಸಬೇಕು ಎನ್ನುವ ಆಸೆಯನ್ನ ವ್ಯಕ್ತ ಪಡಿಸುವುದರ ಜೊತೆಯಲ್ಲಿ ಯಾವ ಪಾತ್ರದಲ್ಲಿ ಅಭಿನಯಿಸಿದರೆ ಚೆನ್ನಾಗಿರುತ್ತೆ ಎನ್ನುವುದನ್ನು ತಿಳಿಸಿದ್ದಾರೆ. ನವರಸ ನಾಯಕ ತಂದೆ ಆಗಿ ಅಭಿನಯಿಸಿದರೆ ಸುದೀಪ್ ಮಗನಾಗಿ ಆಕ್ಟ್ ಮಾಡಬೇಕು ಎನ್ನುವುದು ಅಭಿಮಾನಿಗಳ ಬಯಕೆ.

  ಹೇಗಿರಲಿದೆ ಸಿನಿಮಾ?

  ಹೇಗಿರಲಿದೆ ಸಿನಿಮಾ?

  ಸುದೀಪ್ ಹಾಗೂ ಜಗ್ಗೇಶ್ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದರೆ ನಿಜಕ್ಕೂ ಚೆನ್ನಾಗಿ ಮೂಡಿಬರಲಿದೆ. ಅಭಿಮಾನಿಗಳ ಆಸೆಯಂತೆ ಮುಂದಿನ ದಿನಗಳಲ್ಲಿ ಉತ್ತಮವಾದ ಕಥೆ ಇವರಿಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡುವಂತ ಅವಕಾಶ ಮಾಡಿಕೊಡುತ್ತಾ ಅನ್ನುವುದನ್ನ ಕಾದು ನೋಡಬೇಕಾಗಿದೆ.

  ನನ್ನ ಮೊದಲ ಸಿನಿಮಾ : ಸುಮ್ಮನೆ ಮಲಗಿದ್ದ ನಂದ ಕಿಶೋರ್ ಬಳಿಗೆ ಬಂದಿತ್ತು 'ವಿಕ್ಟರಿ' ಆಫರ್

  English summary
  Sudeep Fans have expressed that Kannada artist Jaggesh and Sudeep should act in the same film, The fans have appealed to Jaggesh through Twitter to act as a Sudeep father character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X