twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚನ ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳ ಅಭಿಪ್ರಾಯ

    By Pavithra
    |

    ಚುನಾವಣೆ ಸಮೀಪಿಸುತ್ತಿದೆ ಚಿತ್ರರಂಗದಿಂದ ರಾಜಕೀಯ ಅಖಾಡಕ್ಕೆ ಯಾರೆಲ್ಲಾ ಸ್ಟಾರ್ ಗಳು ಇಳಿಯಲಿದ್ದಾರೆ ಎನ್ನುವ ಕೌತುಕ ಹೆಚ್ಚಾಗಿದೆ. ಈಗಾಗಲೇ ದರ್ಶನ್, ಸುದೀಪ್, ಅಮೂಲ್ಯ, ರಂಗಾಯಣ ರಘು, ಶಶಿಕುಮಾರ್ ಇನ್ನೂ ಅನೇಕರು ಈ ಬಾರಿ ಚುನಾವಣೆಗೆ ನಿಲ್ಲಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

    ಸುದೀಪ್ ಸಿ ಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿರುವುದು. ಕುಮಾರಸ್ವಾಮಿ ಅವರು ಕಿಚ್ಚನ ಮನೆಗೆ ಭೇಟಿ ನೀಡಿದ್ದು, ಇತ್ತಿಚಿಗಷ್ಟೇ ಕನಕೋತ್ಸವದಲ್ಲಿ ಸುದೀಪ್ ಭಾಗಿ ಆಗಿದ್ದು ಎಲ್ಲವೂ ರಾಜಕೀಯಕ್ಕೆ ಕಿಚ್ಚ ಬರುತ್ತಾರಂತೆ ಎನ್ನುವ ಸುದ್ದಿಗೆ ಪುಷ್ಟಿ ಸಿಕ್ಕತಂದಾಗಿದೆ.

    ಸುದೀಪ್ ನಿರೂಪಣೆ ಬಗ್ಗೆ ಬೇಸರಗೊಂಡ ವೀಕ್ಷಕ: ಖಡಕ್ ಉತ್ತರ ಕೊಟ್ಟ ಕಿಚ್ಚಸುದೀಪ್ ನಿರೂಪಣೆ ಬಗ್ಗೆ ಬೇಸರಗೊಂಡ ವೀಕ್ಷಕ: ಖಡಕ್ ಉತ್ತರ ಕೊಟ್ಟ ಕಿಚ್ಚ

    ಒಂದು ವೇಳೆ ಸುದೀಪ್ ಏನಾದರೂ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದರೆ ಎನ್ನುವ ಆಲೋಚನೆಯಲ್ಲಿ ಈಗಾಗಲೇ ಅಖಾಡದಲ್ಲಿ ಸುದೀಪ್ ಅವರಿಗೆ ಶತ್ರುಗಳು ಹುಟ್ಟುಕೊಂಡಿದ್ದಾರೆ. ಸುದೀಪ್ ಪೊಲಿಟಿಕಲ್ ಎಂಟ್ರಿ ಮಾಡಹುದು ಎನ್ನುವ ಊಹೆಯಲ್ಲಿ ಅವರ ಅಭಿಮಾನಿಗಳು ಕಿಚ್ಚನ ಬಳಿ ಒಂದು ಮನವಿ ಮಾಡಿದ್ದಾರೆ. ಏನದು ಮನವಿ? ಕಿಚ್ಚನ ರಾಜಕೀಯ ವಿರೋಧಿಗಳು ಯಾರು? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

    ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳ ವಿರೋಧ

    ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳ ವಿರೋಧ

    ಕಿಚ್ಚ ಸುದೀಪ್ ಪೊಲಿಟಿಕ್ಸ್ ಗೆ ಬರುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವಾಗಲೇ ಅಭಿಮಾನಿಗಳು ಕಿಚ್ಚನಿಗೆ ರಾಜಕೀಯಕ್ಕೆ ಬರದಂತೆ ಮನವಿ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಟ್ವಿಟ್ಟರ್ ಮೂಲಕ ಕಿಚ್ಚನ ಬಳಿ ಈ ಬೇಡಿಕೆಯನ್ನು ಇಟ್ಟಿದ್ದಾರೆ.

    ಕಿಚ್ಚನಿಗೆ ಬೇಡವಂತೆ ರಾಜಕೀಯ ಗರಿ

    ಕಿಚ್ಚನಿಗೆ ಬೇಡವಂತೆ ರಾಜಕೀಯ ಗರಿ

    "ಅಣ್ಣ ನಿಮ್ಮ ಕಿರೀಟ ಈಗಾಗಲೇ ಸುಮಾರು ಗರಿಗಳನ್ನೊಳಗೊಂಡಿದೆ ಈಗ ಅದಕ್ಕೆ ರಾಜಕೀಯ ಎಂಬ ಗರಿ ಮಾತ್ರ ಏರಿಸದಿರಿ. ಅಣ್ಣ ಇದು ನಿಮ್ಮೆಲ್ಲಾ ಅಭಿಮಾನಿಗಳ ಕಳಕಳಿಯ ಮನವಿ: ಎಂದು ಅಣ್ಣ ನೀವು ಯಾವುದೋ ಪಕ್ಷಕ್ಕೆ ,ಪಂಗಡಕ್ಕೆ ಸೇರದವರಲ್ಲ ನೀವು ಕನ್ನಡಿಗರ ಆಸ್ತಿ..ದಯವಿಟ್ಟು ರಾಜಕೀಯಕ್ಕೆ ಹೋಗಬೇಡಿ ಟ್ವಿಟ್ ಮಾಡಿದ್ದಾರೆ ಕಿಚ್ಚನ ಅಭಿಮಾನಿಗಳು

    ರಾಜಕೀಯ ಪ್ರವೇಶ ಮಾಡದಿರಲು ಒತ್ತಾಯ

    ರಾಜಕೀಯ ಪ್ರವೇಶ ಮಾಡದಿರಲು ಒತ್ತಾಯ

    ಎರಡು ದಿನಗಳಿಂದ ಅಭಿಮಾನಿಗಳು "ಕಿಚ್ಚ ಡೋಂಟ್ ಎಂಟರ್ ಪಾಲಿಟಿಕ್ಸ್" ಎನ್ನುವ ಟ್ವಿಟ್ಟರ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಅಭಿಮಾನಿಗಳು ಹ್ಯಾಷ್ ಟ್ಯಾಗ್ ಬಳಸಿ ಸುದೀಪ್ ರಾಜಕೀಯಕ್ಕೆ ಬರುವುದನ್ನ ವಿರೋಧಿಸಿದ್ದಾರೆ.

    ಕಿಚ್ಚನ ಪ್ರತಿಕ್ರಿಯೆಗಾಗಿ ಕಾದಿರುವ ಅಭಿಮಾನಿಗಳು

    ಕಿಚ್ಚನ ಪ್ರತಿಕ್ರಿಯೆಗಾಗಿ ಕಾದಿರುವ ಅಭಿಮಾನಿಗಳು

    ಸದ್ಯ ಅಭಿಮಾನಿಗಳು ಮಾಡುತ್ತಿರುವ ಟ್ವಿಟ್ ಗೆ ಕಿಚ್ಚನ ಕಡೆಯಿಂದ ಯಾವುದೇ ರೀತಿಯ ಉತ್ತರ ಸಿಕ್ಕಿಲ್ಲ. ರಾಜಕೀಯಕ್ಕೆ ಬರುತ್ತೇನೆ ಬರುವುದಿಲ್ಲ ಎಂದು ಎಲ್ಲಿಯೂ ಸ್ಪಷ್ಟ ಪಡಿಸದ ಕಿಚ್ಚನ ಉತ್ತರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

    ರಾಜಕೀಯ ಮಾಡಲು ಸಮಯವಿಲ್ಲ

    ರಾಜಕೀಯ ಮಾಡಲು ಸಮಯವಿಲ್ಲ

    ಕಿಚ್ಚ ಸುದೀಪ್ ಹೇಳಿರುವಂತೆ ಈ ವರ್ಷ ಮೂರು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ. ದಿ ವಿಲನ್ ನಂತರ ಕೋಟಿಗೊಬ್ಬ3, ಪೈಲ್ವಾನ್ ಹಾಗೂ ಹಾಲಿವುಡ್ ಚಿತ್ರಗಳು ಇದೇ ವರ್ಷ ಚಿತ್ರೀಕರಣ ಆಗಲಿದೆ. ಹಾಗಾಗಿ ರಾಜಕೀಯ ಮಾಡಲು ಕಿಚ್ಚನ ಬಳಿ ಸಮಯವಿಲ್ಲ.

    English summary
    Kannada actor Kiccha Sudeep fans have insisted that Sudeep should not enter into politics. Fans has begun the twitter campaign by tweeting that #KicchaDontEnterPolitics.
    Wednesday, January 17, 2018, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X