ಸುದೀಪ್ ಅನ್ನು ನಿಂದಿಸಿದ ಅಹೋರಾತ್ರನ ಪ್ರತಿಕೃತಿ ಸುಟ್ಟ ಗ್ರಾಮಸ್ಥರು

By ಚಿತ್ರದುರ್ಗ ಪ್ರತಿನಿಧಿ

ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಹೋರಾತ್ರ ವಿರುದ್ಧ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಬಗ್ಗನಾಡು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬಗ್ಗನಾಡು ಗ್ರಾಮದಲ್ಲಿ ಕಿಚ್ಚ ಸುದೀಪ್ ಸೇನೆಯ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅಹೋರಾತ್ರ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಬಡಿದು, ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿದರು.

ರಮ್ಮಿ ಜಾಹೀರಾತಿನಲ್ಲಿ ಸುದೀಪ್ ನಟಿಸುವುದನ್ನು ಬಿಟ್ಟಿದ್ದರೂ ಸಹ ಕಿಚ್ಚನ ಮೇಲೆ ಅಹೋರಾತ್ರ ವೈಯಕ್ತಿಕ ನಿಂದನೆ ಮಾಡಿದ್ದರು. ಇದು ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸುದೀಪ್ ಅಭಿಮಾನಿಗಳು ಅಹೋರಾತ್ರ ಮನೆಗೆ ನುಗ್ಗಿ ವಾಗ್ವಾದ ಮಾಡಿದ್ದರು.

ಬಗ್ಗೆನಾಡು ಗ್ರಾಮದಲ್ಲಿ ಸರ್ಕಾರಿ ಶಾಲೆ ದತ್ತು ಪಡೆದಿರುವ ಸುದೀಪ್

ಬಗ್ಗೆನಾಡು ಗ್ರಾಮದಲ್ಲಿ ಸರ್ಕಾರಿ ಶಾಲೆ ದತ್ತು ಪಡೆದಿರುವ ಸುದೀಪ್

ಚಿತ್ರದುರ್ಗದ ಬಗ್ಗನಾಡು ಗ್ರಾಮದಲ್ಲಿ ಸುದೀಪ್ ಅವರು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ಗ್ರಾಮಕ್ಕೆ ಇತರೆ ಸಹಾಯಗಳನ್ನು ಸಹ ಮಾಡಿದ್ದಾರೆ. ಹಾಗಾಗಿ ಬಗ್ಗನಾಡು ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಹೆಚ್ಚು. ಸುದೀಪ್ ವಿರುದ್ಧ ಅಹೋರಾತ್ರ ಮಾತನಾಡಿದ್ದಕ್ಕೆ ಸಹಜವಾಗಿಯೇ ಅವರು ಆಕ್ರೋಶಗೊಂಡಿದ್ದಾರೆ.

'ರಮ್ಮಿ ಹೋರಾಟ ಮಾಡಲು ಹೋಗಿ ಡಮ್ಮಿಯಾದ ಅಹೋರಾತ್ರ'

'ರಮ್ಮಿ ಹೋರಾಟ ಮಾಡಲು ಹೋಗಿ ಡಮ್ಮಿಯಾದ ಅಹೋರಾತ್ರ'

ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಕಿಚ್ಚ ಸೇನೆಯ ಅಧ್ಯಕ್ಷ ರಾಕೇಶ್ ಮಾತನಾಡಿ, ''ಅಹೋರಾತ್ರ ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಆತ ಪ್ರಚಾರ ಪಡೆದುಕೊಳ್ಳಲು ಸುದೀಪ್ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಮ್ಮಿ ಹೋರಾಟ ಮಾಡಲು ಹೋಗಿ ಅಹೋರಾತ್ರ ಡಮ್ಮಿ ಪೀಸ್ ಆಗಿಬಿಟ್ಟಿದ್ದಾರೆ'' ಎಂದಿದ್ದಾರೆ.

ಸುದೀಪ್ ಅಭಿಮಾನಿಗಳು ರಾಜಧಾನಿಗೆ ನುಗ್ಗಿದರೆ ಏನಾಗುತ್ತದೆ: ರಾಕೇಶ್

ಸುದೀಪ್ ಅಭಿಮಾನಿಗಳು ರಾಜಧಾನಿಗೆ ನುಗ್ಗಿದರೆ ಏನಾಗುತ್ತದೆ: ರಾಕೇಶ್

'ಕೇವಲ ಬೆರಳೆಣಿಕೆಯಷ್ಟು ಬೆಂಬಲಿಗರನ್ನು ಇಟ್ಟುಕೊಂಡು ಇಷ್ಟೋಂದು ಆಟ ಆಡುತ್ತಿದ್ದಾರೆ ಅಹೋರಾತ್ರ. ಸುದೀಪ್ ಅವರು ಹೊಂದಿರುವ ಕೋಟ್ಯಂತರ ಅಭಿಮಾನಿಗಳು ಒಟ್ಟಿಗೆ ರಾಜಧಾನಿಗೆ ನುಗ್ಗಿದರೆ ಅಹೋರಾತ್ರ ಏನೂ ಮಾಡಲು ಸಾಧ್ಯವಿಲ್ಲ. ಸುದೀಪ್ ಬಗ್ಗೆ ಮಾತನಾಡುವಾಗ ಅಹೋರಾತ್ರ ಎಚ್ಚರಿಕೆ ವಹಿಸಬೇಕು' ಎಂದಿದ್ದಾರೆ ರಾಕೇಶ್.

Recommended Video

ಚಾಂಪಿಯನ್ ಸಿನಿಮಾದ ಹಾಡಿನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ | Filmibeat Kannada
ಸುದೀಪ್ ಮಾಡಿರುವ ಸಮಾಜಸೇವೆ ಪಟ್ಟಿ ನೀಡಿದ ರಾಕೇಶ್

ಸುದೀಪ್ ಮಾಡಿರುವ ಸಮಾಜಸೇವೆ ಪಟ್ಟಿ ನೀಡಿದ ರಾಕೇಶ್

ಸುದೀಪ್ ಮಾಡಿರುವ ಸಮಾಜಸೇವೆಗಳ ಪಟ್ಟಿ ಕೊಟ್ಟಿರುವ ರಾಕೇಶ್, ಸುದೀಪ್ ಅವರು ಹಲವು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಬಡ ರೋಗಿಗಳಿಗೆ ಧನ ಸಹಾಯ, ಹಲವಾರು ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಧನ ಸಹಾಯ ಮಾಡಿದ್ದಾರೆ. ಇನ್ನೂ ಹಲವಾರು ಸಮಾಜ ಸೇವೆಗಳನ್ನು ಸುದೀಪ್ ಮಾಡುತ್ತಲೇ ಬಂದಿದ್ದಾರೆ. 'ಸಮಾಜಕ್ಕೆ ಅಹೋರಾತ್ರನ ಕೊಡುಗೆ ಏನು?' ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಅಹೋರಾತ್ರನ ಪ್ರಚಾರದ ಗೀಳು ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದು ಎಂದ ರಾಕೇಶ್. ಸುದೀಪ್ ಅನ್ನು ನಿಂದಿಸಿರುವ ಅಹೋರಾತ್ರನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

More from Filmibeat

English summary
Actor Sudeep fans of Bagganadu village in Chitradurga protested against Ahorathra who blamed Sudeep for acting in Rummy circle add.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X