'ವಿಕ್ರಾಂತ್ ರೋಣ'ನ ಬಗ್ಗೆ 10 ಪ್ರಶ್ನೆಗಳು, ಉತ್ತರ ನಿಮಗೆ ಗೊತ್ತಾ?

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. ಚಿತ್ರತಂಡ ಈಗಾಗಲೇ ಚಿತ್ರದ ಬಗ್ಗೆ ಪ್ರಚಾರವನ್ನು ಶುರು ಮಾಡಿದೆ. 3ಡಿಯಲ್ಲಿ ಸಿನಿಮಾ ಬರುತ್ತಿರುವ ಕಾರಣ ವಿಕ್ರಾಂತ್ ರೋಣನಿಗಾಗಿ ಅಭಿಮಾನಿಗಳು, ಪ್ರೇಕ್ಷಕರು ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಇನ್ನು ಎರಡು ತಿಂಗಳು ಇದೆ. ಆದರೆ ಪ್ರೇಕ್ಷಕರ ಕುತೂಹಲಗಳಿಗೆ ಕಿಚ್ಚನ ಫ್ಯಾನ್ಸ್ ಪ್ರಶ್ನೆ ಕೇಳುವ ಮೂಲಕ ಉತ್ತರ ನೀಡುತ್ತಿದ್ದಾರೆ.

'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಸುದೀಪ್ ಫ್ಯಾನ್ ಪೇಜ್‌ನಲ್ಲಿ ಸದ್ಯ ಪ್ರಶ್ನಾವಳಿಯನ್ನು ಆರಂಭಿಸಲಾಗಿದೆ. ಚಿತ್ರದಲ್ಲಿ ಬರುವ ಒಂದಷ್ಟು ಮುಖ್ಯ ತಿರುಳುಗಳನ್ನು ಬಿಚ್ಚಿಡಲಾಗುತ್ತಿದೆ. ಪ್ರೇಕ್ಷಕರಿಗೆ ಚಿತ್ರದ ಕಥೆಯ ಬಗ್ಗೆ, ಸನ್ನಿವೇಶಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇಲ್ಲಿವರೆಗೂ ಕೇಳಲಾದ ಪ್ರಶ್ನೆಗಳು ಈ ರೀತಿ ಇವೆ.

Sudeep Fans Start Different Campaign On Vikrant Rona Movie

ಪ್ರಶ್ನೆ 1: 'ವಿಕ್ರಾಂತ್ ರೋಣ' ಚಿತ್ರದಲ್ಲಿ ಬರುವ ಪಾತ್ರಗಳಿಗೆ ಏಕೆ ಎರಡು ಹೆಸರುಗಳು ಇವೆ?

ಪ್ರಶ್ನೆ 2: 'ವಿಕ್ರಾಂತ್ ರೋಣ' ಚಿತ್ರದಲ್ಲಿ ಬರುವ ಮಕ್ಕಳ ಗುಂಪಿನ ಹೆಸರೇನು?

ಪ್ರಶ್ನೆ 3: ಸಂಜು (ನಿರೂಪ್ ಭಂಡಾರಿ) ಲಂಡನ್‌ನಿಂದ ಭಾರತಕ್ಕೆ ಬರುವ ಉದ್ದೇಶವೇನು?

ಪ್ರಶ್ನೆ 4: ಗುಮ್ಮಾ ಬಂದ ಗುಮ್ಮಾ, ರಾತ್ರಿ ಕುದುರೆ ಬೆನ್ನೇರಿ, ಡೆಡ್ ಮ್ಯಾನ್ಸ್ ಆಂಥಮ್ ಈ ಮೂರು ತುಣುಕುಗಳ ಹಿಂದೆ ಇರುವ ಧ್ವನಿ ಯಾರದ್ದು ಎಂದು ತಿಳಿಸಿ?

Sudeep Fans Start Different Campaign On Vikrant Rona Movie

ಹೀಗೆ ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದೆ. ಜೊತೆಗೆ ಇಲ್ಲಿ ಗಡಂಗ್ ರಕ್ಕಮ್ಮ ಪಾತ್ರದ ಮೇಲೆ ಕೊಲೆಯ ಆರೋಪ ಇದೆ ಎನ್ನುವುದು ಕೂಡ ರಿವೀಲ್ ಆಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಜನರು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಪ್ರಶ್ನಾವಳಿ ಅಭಿಯಾನ 'ವಿಕ್ರಾಂತ್ ರೋಣ' ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಮೂಡಿದೆ. ಇದು ಇಲ್ಲಿಗೆ ಮುಗಿದಿಲ್ಲ. ಒಟ್ಟು 10 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗಿರುವ 'ವಿಕ್ರಾಂತ್ ರೋಣ', 3ಡಿ ಆ್ಯಕ್ಷನ್ ಅಡ್ವೆಂಚರ್‌, ಮಿಸ್ಟ್ರಿ ಥ್ರಿಲ್ಲರ್ ಒಳಗೊಂಡಿದೆ. ಕನ್ನಡ, ಹಿಂದಿ, ತೆಲುಗು ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೇ ಇಂಗ್ಲೀಷ್, ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರೀನ್ ಭಾಷೆಗೂ ಡಬ್ ಆಗುತ್ತಿದೆ. ಈ ಚಿತ್ರವನ್ನು ಶಾಲಿನಿ ಪ್ರೊಡಕ್ಷನ್ಸ್ ಮೂಲಕ ಜಾಕ್ ಮಂಜುನಾಥ್ ನಿರ್ಮಿಸುತ್ತಿದ್ದು, ಅಲಂಕಾರ್ ಪಾಂಡಿಯನ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ , ನಿರೂಪ್ ಭಂಡಾರಿ, ನೀತಾ ಅಶೋಕ್ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.

More from Filmibeat

English summary
Sudeep Fans Start Different Campaign On Vikrant Rona Movie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X