ರಮ್ಮೀ ಕಾರಣಕ್ಕೆ ಸುದೀಪ್‌ರನ್ನು ಟೀಕಿಸಿದ ಅಹೋರಾತ್ರಗೆ ಅಭಿಮಾನಿಗಳ ಬೆದರಿಕೆ

ನಟ ಸುದೀಪ್ 'ರಮ್ಮಿ ಆಡಿ ಹಣ ಗೆಲ್ಲಿ' ಎಂದು ರಮ್ಮಿ ಕುರಿತು ಜಾಹೀರಾತು ನೀಡಿರುವುದು ಬಹುತೇಕರಿಗೆ ಗೊತ್ತೇ ಇದೆ. ಇಷ್ಟು ದಿನ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಈ ಜಾಹೀರಾತು, ಲಾಕ್‌ಡೌನ್ ಆಗಿ ರಾಜ್ಯವೇ ಮನೆಯಲ್ಲಿ ಕೂತಿರುವಾಗ ಪದೇ ಪದೇ ಪ್ರಸಾರವಾಗಿ ಜೂಜಾಡಲು ಪ್ರೇರೇಪಿಸುತ್ತಿದೆ.

Recommended Video

ಕೊರೊನಾದಿಂದ ಸರಳ ವಿವಾಹವಾಗಲು ಮುಂದಾದ ನಿಖಿಲ್ | Nikhil weds Revathi | Filmibeat kannada

ಇದನ್ನು ಗಮನಿಸಿದ ಆಧ್ಯಾತ್ಮಿಕ ಚಿಂತಕ ಅಹಾತ್ರ (ನಟೇಶ ಪೋನೇಪಲ್ಲಿ) ಅವರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ಷೇಪ ಎತ್ತಿದ್ದರು. ''ಮಣ್ಣಲ್ಲಿ ಅನ್ನ ಬೆಳೆದು, ಅನ್ನ ಹಂಚಿ, ಅನ್ನ ತಿನ್ನೋವ್ರಿಗೆ ಮಣ್ಣು ತಿನ್ಸೋಕೆ ಹೊರಟಿರುವ ರಮ್ಮೀ ಜೂಜಿನ ಜಾಹೀರಾತುಗಾರ, ಏನು ತಿಂತೀಯ ಹೊಟ್ಟೆಗೆ?'' ಎಂದು ಸುದೀಪ್ ಹೆಸರೆತ್ತದೆ ಖಾರವಾಗಿಯೇ ಬರೆದಿದ್ದರು.

ಇದು ಸುದೀಪ್ ಅಭಿಮಾನಿಗಳ ಕಣ್ಣು ಕೆಂಪಗೆ ಮಾಡಿತ್ತು. ಅಹೋರಾತ್ರ ಅವರ ಫೇಸ್‌ಬುಕ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ರಾಜ್ಯದ ಹಲವು ಕಿಚ್ಚ ಸುದೀಪ್ ಅಭಿಮಾನಿ ಬಳಗದ ಸದಸ್ಯರು ಅಹೋರಾತ್ರ ಮೇಲೆ ಮುಗಿಬಿದ್ದಿದ್ದಾರೆ.

ಬೆದರಿಕೆ ಹಾಕಿದ ಸುದೀಪ್ ಅಭಿಮಾನಿಗಳು

ಬೆದರಿಕೆ ಹಾಕಿದ ಸುದೀಪ್ ಅಭಿಮಾನಿಗಳು

ಅಹೋರಾತ್ರ ಅವರಿಗೆ ಕರೆ ಮಾಡಿ ಕೆಲವರು ವಾಚಾಮಾಗೋಚಾರವಾಗಿ ಬೈದಿದ್ದಾರೆ. ಅಶ್ಲೀಲ ಪದ ಬಳಕೆಯನ್ನೂ ಮಾಡಿದ್ದಾರೆ. ಅಹೋರಾತ್ರ ಅವರು ತಮಗೆ ಬಂದ ಕರೆಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಸಹ ಮಾಡಿದ್ದಾರೆ.

ನಿರ್ಮಾಪಕ ಜಾಕ್ ಮಂಜು ಸಹ ಕರೆ ಮಾಡಿದ್ದರು

ನಿರ್ಮಾಪಕ ಜಾಕ್ ಮಂಜು ಸಹ ಕರೆ ಮಾಡಿದ್ದರು

ಕಿಚ್ಚ ಸುದೀಪ್ ಅವರ ಮ್ಯಾನೇಜರ್ ಹಾಗೂ ನಿರ್ಮಾಪಕರೂ ಸಹ ಆಗಿರುವ ಜಾಕ್ ಮಂಜು ಸಹ ಅಹೋರಾತ್ರ ಅವರಿಗೆ ಕರೆ ಮಾಡಿ ಸಂಧಾನಕ್ಕೆ ಯತ್ನಿಸಿದ್ದಾರೆ. ಜಾಹೀರಾತು ಒಪ್ಪಂದ ಆಗಿಹೋಗಿದೆ, ಮಧ್ಯದಲ್ಲಿ ನಿಲ್ಲಿಸಿದರೆ ಕಾನೂನು ತೊಡಕಾಗುತ್ತದೆ ಎಂದು ಸ್ಪಷ್ಟೀಕರಣವನ್ನು ಅಹೋರಾತ್ರ ಅವರಿಗೆ ನೀಡಿದ್ದಾರೆ.

ಸರ್ಕಾರದ ಕ್ರಮವನ್ನು ಏಕೆ ಪ್ರಶ್ನಿಸಿಲ್ಲ ಎಂದು ಕೆಲವರು

ಸರ್ಕಾರದ ಕ್ರಮವನ್ನು ಏಕೆ ಪ್ರಶ್ನಿಸಿಲ್ಲ ಎಂದು ಕೆಲವರು

ಇನ್ನು ಕೆಲವರು ರಮ್ಮಿ ಕುರಿತು ಸುದೀಪ್ ಅವರನ್ನು ಟೀಕಿಸಿದ ಅಹೋರಾತ್ರ ಅವರು, ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ಕ್ಯಾಸಿನೋ ಸ್ಥಾಪಿಸುವ ನಿರ್ಣಯ ಪ್ರಕಟಿಸಿದಾಗ ಏಕೆ ಪ್ರತಿಭಟಿಸಲಿಲ್ಲ? ಎಂದೂ ಸಹ ಪ್ರಶ್ನೆ ಮಾಡಿದ್ದಾರೆ.

ತೀವ್ರ ಬೇಸರ ವ್ಯಕ್ತಪಡಿಸಿರುವ ಅಹೋರಾತ್ರ

ತೀವ್ರ ಬೇಸರ ವ್ಯಕ್ತಪಡಿಸಿರುವ ಅಹೋರಾತ್ರ

ನಿನ್ನೆ ಸಹ ಲೈವ್ ವಿಡಿಯೋ ಮಾಡಿರುವ ಅಹೋರಾತ್ರ ಅವರು, ಸುದೀಪ್ ಅಭಿಮಾನಿಗಳ ವರ್ತನೆಗಳೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರ ಹೆಸರಿಸಿ ಅವಾಚ್ಯವಾಗಿ ಬೈದುದ್ದಕ್ಕೆ ಅತೀವ ಸಂಕಟ ವ್ಯಕ್ತಪಡಿಸಿದ್ದು, ಇವೆಲ್ಲವೂ ಕಾನೂನಿನ ಅಡಿಯಲ್ಲಿ ಅಪರಾಧವೆಂದು ತಿಳಿ ಹೇಳಿದ್ದಾರೆ.

More from Filmibeat

English summary
Ahorathra criticize Sudeep for his rummy add. So Sudeep fans called Ahorathra and threaten him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X