»   » 'ಮಾಣಿಕ್ಯ' ಕಿಚ್ಚ ಸುದೀಪ್ ಹೃದಯದಲ್ಲಿಯೂ ಶ್ರೀಮಂತ: ಸಾಕ್ಷಿ ಬೇಕಾ.?

'ಮಾಣಿಕ್ಯ' ಕಿಚ್ಚ ಸುದೀಪ್ ಹೃದಯದಲ್ಲಿಯೂ ಶ್ರೀಮಂತ: ಸಾಕ್ಷಿ ಬೇಕಾ.?

Posted By:
Subscribe to Filmibeat Kannada

ನಟ ಸುದೀಪ್ ಬರೀ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ನಿಜ ಜೀವನದಲ್ಲಿಯೂ ಸುದೀಪ್ 'ಮಾಣಿಕ್ಯ'. ಸುದೀಪ್ ಒಬ್ಬ ಒಳ್ಳೆಯ ಮನಸ್ಸಿರುವ ನಟ. ದಾನ - ಧರ್ಮದಲ್ಲಿಯೂ ಸುದೀಪ್ ಎತ್ತಿದ ಕೈ.

'ಬಲಗೈಯಲ್ಲಿ ಕೊಟ್ಟಿದ್ದು.. ಎಡಗೈಗೆ ಗೊತ್ತಾಗಬಾರದು' ಅಂತ್ತಾರಲ್ಲಾ ಹಾಗೆ ಸುದೀಪ್ ಏನೇ ಸಹಾಯ ಮಾಡಿದರೂ ಇಷ್ಟು ದಿನ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಅದನ್ನು ಸುದೀಪ್ ಹೇಳಿಕೊಳ್ಳುವ ಪರಿಸ್ಥಿತಿ ಬಂದಿದೆ.

ಸುದೀಪ್ ಅವರ ಓರ್ವ ಅಭಿಮಾನಿ ''ನೀವು ಸಿನಿಮಾದಲ್ಲಿ ಮಾತ್ರ ಹೀರೋ. ನೀವು ಏನು ಮಾಡಿದ್ದೀರಿ..?'' ಅಂತ ಪ್ರಶ್ನೆ ಕೇಳಿದ್ದು, ಸುದೀಪ್ ಅದಕ್ಕೆ ಸಮಾಧಾನವಾಗಿ ಉತ್ತರಿಸಿದ್ದಾರೆ. ಮುಂದೆ ಓದಿ...

ಸುದೀಪ್ ಹೇಳಿಕೆ

''ಹುಟ್ಟುಹಬ್ಬದ ದಿನ ನಾನು ಒಂದು ವಿಡಿಯೋ ನೋಡಿದೆ. ಅದರಲ್ಲಿ ಆಟೋದಲ್ಲಿ ನನ್ನ ಫೋಟೋ ಹಾಕಿಕೊಂಡು ಅಭಿಮಾನಿ ಬಂದಿದ್ದರು. ಥ್ಯಾಂಕ್ಯು.. ಆದರೆ ನೀವು ಇನ್ನು ಮುಂದೆ ನನ್ನನ್ನು ಇಷ್ಟ ಪಡುವುದಿಲ್ಲ, ನಾನು ಸಿನಿಮಾದಲ್ಲಿ ಮಾತ್ರ ಹೀರೋ ಅಂತ ಹೇಳಿದ್ದೀರಿ'' ಎನ್ನುತ್ತಾ ಸುದೀಪ್ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಲು ಆರಂಭಿಸಿದರು.

ಸಾಧ್ಯವಾದಲ್ಲಿ ಮಾಡಿ ಅಂತ ಹೇಳಿದ್ದೆ

''ನಾನು ಯಾರಿಗೂ ಏನೋ ಮಾಡಿ ಅಂತ ಹೇಳಿಲ್ಲ. ನಾನು ಹೇಳಿದ್ದು, ನೀವು ಕೇಕ್ ಮತ್ತು ಹಾರಕ್ಕೆ ಹಾಕುವು ಹಣವನ್ನು ಸಾಧ್ಯವಾದಲ್ಲಿ ಯಾರಿಗಾದರೂ ಸಹಾಯ ಮಾಡಿ ಅಂತ. ನಾನು ಯಾರಿಗೂ ಮಾಡಲೇ ಬೇಕು ಅಂತ ಒತ್ತಾಯ ಮಾಡಿಲ್ಲ'' - ಸುದೀಪ್, ನಟ

ಹುಟ್ಟುಹಬ್ಬ ನಿರಾಕರಿಸುವುದಕ್ಕೆ ಕಾರಣ

''ಕಳೆದ ವರ್ಷ ಬರ್ತ್ ಡೇ ದಿನ ರಾತ್ರಿ ಒಂದು ಚಿಕ್ಕ ಹುಡುಗಿ ರಸ್ತೆಯಲ್ಲಿ ಬಿದ್ದಿರುವ ಕೇಕ್ ತಿನ್ನುತ್ತಿದ್ದಳು. ನನಗೂ ಒಬ್ಬ ಮಗಳಿದ್ದಾಳೆ. ನನಗೆ ಅದನ್ನು ನೋಡಿ ಮನಸ್ಸಿಗೆ ನಿಜಕ್ಕೂ ನೋವಾಯಿತು. ಅಂದೇ ನಾನು ಹುಟ್ಟುಹಬ್ಬದ ಹಣವನ್ನು ಬಡವರಿಗೆ ನೀಡಬಹುದು ಎಂಬ ನಿರ್ಧಾರ ಮಾಡಿದೆ'' - ಸುದೀಪ್, ನಟ

ಕಿಚ್ಚನ ಹೃದಯ ಶ್ರೀಮಂತಿಕೆ

''ನಾನು ಏನು ಮಾಡಿದ್ದೀನಿ ಅಂತ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಇವತ್ತು ಹೇಳುತ್ತಿದ್ದೀನಿ. ನಾನು 18 ಮಕ್ಕಳನ್ನು ದತ್ತು ಪಡೆದಿದ್ದೇನೆ. ಅನಾಥಾಶ್ರಮ ನಡೆಸುತ್ತಿದ್ದೇನೆ. ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದೇನೆ. ನಾನು ದುಡಿದ ಹಣದಲ್ಲಿ ಶೇಕಡ 40 ರಿಂದ 50 ಭಾಗವನ್ನು ದಾನ ಮಾಡುತ್ತಿದ್ದೇನೆ'' - ಸುದೀಪ್, ನಟ

'ಸಿನಿಮಾ ಮಾಡಬೇಡಿ' ಎಂದು ಸುದೀಪ್ ವಿರುದ್ಧ ಉರಿದುಬಿದ್ದ ಓರ್ವ ಅಭಿಮಾನಿ

ರಕ್ತದಾನ, ಅನ್ನ ದಾನ ಮಾಡಿದ್ದಾರೆ

''ನನ್ನ ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇದ್ದರೆ ಮತ್ತೆ ಅದೇ ರೀತಿಯಲ್ಲಿ ಬರ್ತ್ ಡೇ ನಡೆಯುತ್ತದೆ. ಅದು ನನಗೆ ಬೇಡ ಅನಿಸಿತು. ನಾನು ನಿಮ್ಮ ಹಣವನ್ನು ದಾನ ಮಾಡಿಸಿ ಹೆಸರು ಮಾಡಬೇಕು ಅಂತ ಇಲ್ಲ. ಅಂದು ರಕ್ತದಾನ ಅನ್ನದಾನ ಮಾಡಿದವರಿಗೆ ಧನ್ಯವಾದ'' - ಸುದೀಪ್, ನಟ

ಸುದೀಪ್ ಬರ್ತ್ ಡೇ ಗೆ ವಿಶ್ ಮಾಡಿದ ಇಬ್ಬರು ಬಾಲಿವುಡ್ ನಟರು ಯಾರು?

ಬೇಸರ ಆಗಿದ್ದರೆ ಕ್ಷಮಿಸಿ

''ನೀವು ಹೇಳಿದ ಹಾಗೆ ನಾನು ಕೋಟ್ಯಾಧಿಪತಿ ಅಲ್ಲ. ನನ್ನ ಹತ್ತಿರ ಇರುವ ಹಣ ಎಲ್ಲರಿಗೂ ಸಹಾಯ ಮಾಡುವುದಕ್ಕೆ ಸಾಕಾಗುವುದಿಲ್ಲ. ನನ್ನ ಕೈನಲ್ಲಿ ಆಗಿದ್ದನ್ನು ನಾನು ಮಾಡುತ್ತಾ ಇದ್ದೀನಿ. ಮನೆ ಹತ್ತಿರ ಬಂದು ನನ್ನನ್ನು ನೋಡಲು ಆಗಿಲ್ಲ ಅಂತ ಬೇಸರ ಆಗಿದ್ದರೆ ಕ್ಷಮಿಸಿ'' - ಸುದೀಪ್, ನಟ

ಸುದೀಪ್ ಬರ್ತ್ ಡೇಗೆ 'ಕಿರಿಕ್' ರಶ್ಮಿಕಾ ಹೇಗೆ ವಿಶ್ ಮಾಡಿದ್ರು ನೋಡಿ

Darshan V/S Sudeep in Kurukshetra | Filmibeat Kannada

ಏನಿದು ಘಟನೆ..?

ಸುದೀಪ್ ಈ ವರ್ಷ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಂದ ದೂರ ಇದ್ದರು. ''ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ದಾನ ಮಾಡಿ'' ಅಂತ ಸುದೀಪ್ ಹೇಳಿದ್ದರು. ಆದರೆ ಇದರ ವಿರುದ್ಧ ಕೋಪ ಕೊಂಡಿದ್ದ ಅಭಿಮಾನಿ ''ಇನ್ನು ಮುಂದೆ ನೀವು ಸಿನಿಮಾ ಮಾಡಬೇಡಿ. ನಾವು ನಿಮ್ಮ ಸಿನಿಮಾ ನೋಡುವುದಿಲ್ಲ'' ಅಂತ ಹೇಳಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

English summary
This is what Kannada Actor Sudeep replied to his fans who were angry against him for not celebrating birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada