ಹೊಸ ಗಾಸಿಪ್ ಬಗ್ಗೆ ಕ್ಲಾರಿಟಿ ಕೊಟ್ಟ ಕಿಚ್ಚ ಸುದೀಪ್
Recommended Video

ನಟ ಕಿಚ್ಚ ಸುದೀಪ್ ಈಗಾಗಲೇ ತನ್ನ ನಟನೆಯ ಮೂಲಕ ಇತರ ಚಿತ್ರರಂಗದಲ್ಲಿಯು ಗುರುತಿಸಿಕೊಂಡಿದ್ದಾರೆ. ದಿನೇ ದಿನೇ ಸುದೀಪ್ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಾಗುತ್ತಿದೆ. ಕನ್ನಡದ ನಂತರ ತೆಲುಗು, ತಮಿಳು, ಹಿಂದಿ ಸಿನಿಮಾ ಮಾಡಿದ್ದ ಇದೀಗ ಹಾಲಿವುಡ್ ಸಿನಿಮಾ ಕೂಡ ಮಾಡುತ್ತಿದ್ದಾರೆ.
ಅದರ ಜೊತೆಗೆ ಇತ್ತೀಚಿಗಷ್ಟೆ ಸುದೀಪ್ ಬಗ್ಗೆ ಒಂದು ಸುದ್ದಿ ಹರಿದಾಡಿತ್ತು. ಸುದೀಪ್ ಮಲೆಯಾಳಂ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸುದೀಪ್ ಪತ್ನಿ ಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಅವರನ್ನು ಮಾಲಿವುಡ್ ನಟ ಮಮ್ಮುಟಿ ಭೇಟಿ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ನಂತರ ಎಲ್ಲ ಕಡೆ ಮಮ್ಮುಟಿ ಮತ್ತು ಸುದೀಪ್ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ಬರುತ್ತಿದೆ ಎಂಬ ಸುದ್ದಿ ಹರಿದಾಡಿತು. ಆದರೆ ಈಗ ಸ್ವತಃ ನಟ ಸುದೀಪ್ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ..

ಗಾಸಿಪ್ ಎಂದ ಸುದೀಪ್
ಮಮ್ಮುಟಿ ಜೊತೆಗೆ ಸಿನಿಮಾ ಮಾಡುವ ಸುದ್ದಿಯ ಬಗ್ಗೆ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು ಈ ಸುದ್ದಿ ನಿಜ ಅಲ್ಲ.. ಗಾಸಿಪ್ ಅಷ್ಟೆ ಎಂದು ಹೇಳಿದ್ದಾರೆ.

ಸಹಜ ಭೇಟಿ ಅಷ್ಟೆ
''ನನ್ನನ್ನು ಮಮ್ಮುಟಿ ಅವರು ಸಹಜವಾಗಿ ಭೇಟಿಯಾಗಿದ್ದು. ಇದು ಯಾವುದೇ ಪೂರ್ವನಿಯೋಜಿತ ಭೇಟಿ ಅಲ್ಲ. ಅಲ್ಲದೆ ನಾನು ಅವರ ಜೊತೆಗೆ ಯಾವುದೇ ಸಿನಿಮಾವನ್ನು ಮಾಡುತ್ತಿಲ್ಲ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಮೋಹನ್ ಲಾಲ್ ಮತ್ತು ಸುದೀಪ್ ಚಿತ್ರ ಏನಾಯ್ತು?
ಕನ್ನಡದ 'ದಿ ವಿಲನ್' ಸಿನಿಮಾ ಮಲೆಯಾಳಂ ನಲ್ಲಿ ರಿಮೇಕ್ ಆಗಲಿದ್ದು, ಮಲೆಯಾಳಂ ನಲ್ಲಿಯೂ ನಟ ಸುದೀಪ್ ಅವರೇ ತಮ್ಮ ಪಾತ್ರವನ್ನು ಮಾಡಲಿದ್ದಾರೆ. ಶಿವಣ್ಣನ ಪಾತ್ರದಲ್ಲಿ ನಟ ಮೋಹನ್ ಲಾಲ್ ನಟಿಸುತ್ತಾರೆ ಎಂಬ ಸುದ್ದಿ ಹಿಂದೆಯೇ ಇತ್ತು. ಆದರೆ ಸದ್ಯಕ್ಕೆ ಇದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಹಾಲಿವುಡ್ ಸಿನಿಮಾ ಯಾವಾಗ?
ಸುದೀಪ್ ಸದ್ಯ 'ದಿ ವಿಲನ್', 'ಪೈಲ್ವಾನ್', 'ಕೋಟಿಗೊಬ್ಬ 3', 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಈ ಚಿತ್ರದ ಕೆಲಸಗಳಲ್ಲಿ ತೊಡಗಿರುವ ಸುದೀಪ್ ಹಾಲಿವುಡ್ ಚಿತ್ರವನ್ನು ಯಾವಾಗ ಶುರು ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿದೆ.

ಬೇರೆ ಬೇರೆ ಭಾಷೆಯ ಸಿನಿಮಾಗಳು
ಈ ಚಿತ್ರಗಳ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಸಿನಿಮಾ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಹಾಗೂ ಧನುಷ್ ನಿರ್ದೇಶನದ ಒಂದು ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಾರೆ ಎನ್ನುವ ಮಾತಿದೆ.


Click it and Unblock the Notifications











