ಪ್ಯಾನ್ ಇಂಡಿಯಾ ಮಾಡೋರು ಎರಡು ವಿಷಯದಲ್ಲಿ ರೆಡಿ ಇರಬೇಕು: ಸುದೀಪ್

Recommended Video

Pailwaan : ಪ್ಯಾನ್ ಇಂಡಿಯಾ ಮೂವಿ ಮಾಡೋರಿಗೆ ಟಾಂಗ್ ಕೊಟ್ಟ ಸುದೀಪ್..! | FILMIBEAT KANNADA

ಕೆಜಿಎಫ್ ಚಿತ್ರದ ಬಳಿಕ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ ಹೆಚ್ಚಾಗಿದೆ. ನಾವು ಪ್ಯಾನ್ ಇಂಡಿಯಾ ಹೋಗ್ಬೇಕು, ಪ್ಯಾನ್ ಇಂಡಿಯಾ ಚಿತ್ರದ ಮಾಡಿದ್ರೆ ನೇಮೂ, ಫೇಮೂ ಜೊತೆಗೆ ದುಡ್ಡು ಸಿಗುತ್ತೆ ಎಂಬ ನಂಬಿಕೆ ಹುಟ್ಟಿಕೊಂಡಿದೆ.

ಕುರುಕ್ಷೇತ್ರ ಆಯ್ತು, ಈಗ ಪೈಲ್ವಾನ್. ಮುಂದೆ ಅವನೇ ಶ್ರೀಮನ್ನಾರಯಣ, ಪೊಗರು, ಭಜರಂಗಿ-2 ಹೀಗೆ ಬಹುತೇಕ ಎಲ್ಲ ಸ್ಟಾರ್ ನಟರ ಚಿತ್ರಗಳು ಪ್ಯಾನ್ ಇಂಡಿಯಾ ಟ್ರೆಂಡ್ ಹಿಂದೆ ಬಿದ್ದಿದೆ.

ಕೆಲವು ಚಿತ್ರಗಳನ್ನ ಹೊರತುಪಡಿಸಿದರೆ, ಪ್ಯಾನ್ ಇಂಡಿಯಾ ಸಿನಿಮಾ ಮಾಡಿದವರಿಗೆಲ್ಲಾ ಸಕ್ಸಸ್ ಸಿಗುತ್ತೆ ಎಂಬುದು ಸುಳ್ಳು ಎಂಬುದು ಅರಿತುಕೊಳ್ಳಬೇಕಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಮಾತನಾಡಿದ್ದು, ಈ ಎರಡು ವಿಷಯಗಳ ಬಗ್ಗೆ ಧೈರ್ಯ ಇದ್ದರೆ ಮಾತ್ರ ಪ್ಯಾನ್ ಇಂಡಿಯಾ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಹಾಗಿದ್ರೆ, ಸುದೀಪ್ ಹೇಳಿದ ಆ ಎರಡು ವಿಷಯ ಯಾವುದು? ಮುಂದೆ ಓದಿ....

ಪ್ಯಾನ್ ಇಂಡಿಯಾ ಎನ್ನುವುದು ಸುಲಭವಲ್ಲ

ಪ್ಯಾನ್ ಇಂಡಿಯಾ ಎನ್ನುವುದು ಸುಲಭವಲ್ಲ

''ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಸುಲಭ ಎಂದು ತಿಳಿಯಬೇಡಿ. ಅಲ್ಲೂ ಅವರು ನಟರ ಸಿನಿಮಾಗಳು ಮಾಡುತ್ತಿದ್ದಾರೆ. ನಿಮ್ಮ ಚಿತ್ರಗಳನ್ನ ಯಾಕೆ ನೋಡಬೇಕು ಅವರು. ಅದಕ್ಕೆ ಒಂದು ಬಲವಾದ ಕಾರಣ ಕೊಡಬೇಕು. ಎರಡು ವಿಷಯದಲ್ಲಿ ಧೈರ್ಯವಿದ್ದರೆ ಪ್ರಯತ್ನ ಪಡುವುದು ಒಳ್ಳೆಯದು'' ಎಂದು ಸುದೀಪ್ ಅಭಿಪ್ರಾಯ ಪಟ್ಟಿದ್ದಾರೆ.

ಮೊದಲನೇ ವಿಷಯ ಯಾವುದು?

ಮೊದಲನೇ ವಿಷಯ ಯಾವುದು?

ಪ್ಯಾನ್ ಇಂಡಿಯಾ ಸಿನಿಮಾ ಅಂತ ಮಾಡೋಕೆ ಹೋದಾಗ ಆ ಇಂಡಸ್ಟ್ರಿಗಳಲ್ಲಿ ಪರಿಚಯ ಇರಬೇಕು. ಆಗ ನಮಗೆ ಪರಿಚಯ ಇದ್ದಾರೆ, ಏನೋ ಮಾಡಿರುತ್ತಾರೆ ಎಂದು ನೋಡಬಹುದು ಎಂದು ಸುದೀಪ್ ಒಂದು ವಿಷಯವನ್ನ ಪ್ರಸ್ತಾಪಿಸಿದ್ದಾರೆ.

ಗುರುತು ಇಲ್ಲ ಅಂದ್ರೆ ಬಲ ಇರಬೇಕು

ಗುರುತು ಇಲ್ಲ ಅಂದ್ರೆ ಬಲ ಇರಬೇಕು

''ಗುರುತು ಇಲ್ಲ ಅಂದ್ರೆ ಬಲ ಇರಬೇಕು. ಅವರ ಸಿನಿಮಾಗಳ ಮುಂದೆ ನಾವು ಪ್ರಚಾರ ಮಾಡ್ತೀವಿ, ಖ್ಯಾತಿ ಗಳಿಸುತ್ತೇವೆ ಎಂದು ಮಾಡುವ ಛಲ ಇರಬೇಕು. ಇದಕ್ಕೆ ಶ್ರಮ ಇದ್ದರೆ ಸಾಲದು, ಅದಕ್ಕೆ ಸಿಕ್ಕಾಪಟ್ಟೆ ದುಡ್ಡು ಇರಬೇಕು'' ಎಂದು ಇನ್ನೊಂದು ಅಂಶವನ್ನ ಸುದೀಪ್ ತಿಳಿಸಿದರು.

ಬಜೆಟ್ ಗಿಂತ ಖರ್ಚು ಹೆಚ್ಚು

ಬಜೆಟ್ ಗಿಂತ ಖರ್ಚು ಹೆಚ್ಚು

ಅಲ್ಲಿ ಪ್ರಚಾರಕ್ಕೆ ಖರ್ಚು ಮಾಡುವ ಹಣದಲ್ಲಿ ಇನ್ನೊಂದು ಸಿನಿಮಾ ಮಾಡಬಹುದು. ಹಿಂದಿಯಲ್ಲಿ ರಿಲೀಸ್ ಮಾಡ್ಬೇಕು ಅಂದ್ರೆ ಅಲ್ಲಿ 8-10 ಕೋಟಿ ಹಣ ಬೇಕಾಗುತ್ತೆ. ಬರಿ ಪ್ರಚಾರಕ್ಕೆ. ಆಂಧ್ರದಲ್ಲಿ ಹೋದರೆ 4-5 ಕೋಟಿ ಬೇಕು. ಅದು ಸಣ್ಣದಾಗಿ ಪ್ರಚಾರ ಮಾಡಿದ್ರೂ ಅಷ್ಟು ಹಣ ಬೇಕು. ತಮಿಳು, ಮಲಯಾಳಂ ಭಾಷೆಯಲ್ಲಿ ಅದಕ್ಕೆ ಅಂತಾಲೇ ಒಂದಿಷ್ಟು ಖರ್ಚು ಮಾಡಬೇಕಾಗುತ್ತೆ ಎಂದು ಸುದೀಪ್ ವಿವರಿಸಿದರು.

ಪ್ಯಾನ್ ಇಂಡಿಯಾ ಎನ್ನುವುದು ಆರ್ಥಿಕ ಶ್ರಮ

ಪ್ಯಾನ್ ಇಂಡಿಯಾ ಎನ್ನುವುದು ಆರ್ಥಿಕ ಶ್ರಮ

''ಪ್ಯಾನ್ ಇಂಡಿಯಾ ಎನ್ನುವುದು ಬರಿ ಶ್ರಮವಲ್ಲ, ಅದು ಆರ್ಥಿಕ ಶ್ರಮ. ಸಿನಿಮಾ ಮಾಡುವ ಬಜೆಟ್ ಬಿಟ್ಟು, ಪ್ರಚಾರಕ್ಕೆ, ಹೋಗುವುದಕ್ಕೆ, ಬರುವುದಕ್ಕೆ, ಊಟ, ತಿಂಡಿ, ವಿತರಕರು ಎಲ್ಲದಕ್ಕೂ ಖರ್ಚು ಮಾಡಬೇಕು. ಬಜೆಟ್ ಗೆ ಹೋಲಿಸಿಕೊಂಡರೆ ಇನ್ನೊಂದು ಬಜೆಟ್ ಅದಾಗುತ್ತೆ'' ಎಂದು ಪ್ಯಾನ್ ಇಂಡಿಯಾ ಸಿನಿಮಾದ ಹಿಂದಿನ ಶ್ರಮದ ಬಗ್ಗೆ ಕಿಚ್ಚ ಬಹಿರಂಗಪಡಿಸಿದರು.

More from Filmibeat

English summary
Kannada actor Sudeep gave suggestion to producers and directors about pan india concept.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X