»   » ತಮಿಳಿನಲ್ಲಿ ಸುದೀಪ್ ಗೆ ರು.6 ಕೋಟಿ ಸಂಭಾವನೆ

ತಮಿಳಿನಲ್ಲಿ ಸುದೀಪ್ ಗೆ ರು.6 ಕೋಟಿ ಸಂಭಾವನೆ

By: ಉದಯರವಿ
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮಿಳು ಚಿತ್ರ ಕನ್ಫರ್ಮ್ ಆಗಿದೆ. ಈ ಬಗ್ಗೆ ಆಂಗ್ಲ ದೈನಿಕ ಬೆಂಗಳೂರು ಮಿರರ್ ವಿಶೇಷ ವರದಿಯನ್ನು ಪ್ರಕಟಿಸಿದ್ದು, ಅದರ ಪ್ರಕಾರ ಸುದೀಪ್ ಅವರು ತಮಿಳು ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಇನ್ನೂ ಹೆಸರಿಡದ ಈ ಭಾರಿ ಬಜೆಟ್ ಚಿತ್ರಕ್ಕಾಗಿ ಸುದೀಪ್ ಅವರು ರು.6 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು. ಈ ಮೂಲಕ ಸುದೀಪ್ ಅವರು ಅತಿಹೆಚ್ಚು ಸಂಭಾವನೆ ಪಡೆಯುವ ಕನ್ನಡ ನಟನಾಗಿ ಹೊರಹೊಮ್ಮಿದ್ದಾರೆ. [ಬಿಗ್ ಬಾಸ್ ಸೀಸನ್ 2 ಸ್ಪರ್ಧಿಗಳು ಇವರೇನಾ ಸ್ವಾಮಿ?]

ಇದಿಷ್ಟೇ ಅಲ್ಲದೆ ದಕ್ಷಿಣದಲ್ಲಿ ತನ್ನ ಭಾಷೆ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟನಾಗಿಯೂ ಸುದೀಪ್ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಒಂದೇ ಏಟಿಗೆ ಎರಡು ದಾಖಲೆ ನಿರ್ಮಿಸುವ ಮೂಲಕ ಸುದೀಪ್ ತಮ್ಮ ವೃತ್ತಿ ಬದುಕಿನಲ್ಲಿ ಇನ್ನೊಂದು ಮಜಲು ತಲುಪಿದ್ದಾಗಿದೆ.

ಈ ಹಿಂದೆಯೇ ಸುದೀಪ್ ಅವರು ತಮಿಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತು. ಇದನ್ನು ಸ್ವತಃ ಸುದೀಪ್ ಅವರು ಖಚಿತಪಡಿಸಿದ್ದರು. ಈಗ ಹೊಸ ಸುದ್ದಿ ಏನೆಂದರೆ ಅವರು ಪಡೆಯುತ್ತಿರುವ ಸಂಭಾವನೆ ರು.6 ಕೋಟಿ ಎಂಬುದು.

ಈ ಚಿತ್ರಕ್ಕೆ ನಾಯಕಿ ದೀಪಿಕಾ ಪಡುಕೋಣೆ

ಸದ್ಯಕ್ಕೆ ರಜನಿಕಾಂತ್ ಅವರ ಬಹುನಿರೀಕ್ಷಿತ 'ಕೊಚ್ಚಡಿಯಾನ್' ಚಿತ್ರದಲ್ಲಿ ಡಿಂಪಲ್ ಸುಂದರಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದು ಆ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇನ್ನೇನಿದ್ದರೂ ಅವರು ಸುದೀಪ್ ಹಾಗೂ ವಿಜಯ್ ಜೊತೆಗಿನ ಚಿತ್ರಕ್ಕೆ ಡೇಟ್ಸ್ ಕೊಡುವುದೊಂದು ಬಾಕಿ ಇದೆ.

ಚಿತ್ರದ ಮತ್ತೊಬ್ಬ ನಾಯಕಿಯಾಗಿ ಶ್ರುತಿ ಹಾಸನ್

ಚಿತ್ರದಲ್ಲಿ ಇಬ್ಬರು ನಾಯಕಿಯರು ಎಂದ ಮೇಲೆ ಇಬ್ಬರು ಹೀರೋಯಿನ್ ಗಳು ಇರಬೇಕಲ್ಲವೇ. ದೀಪಿಕಾ ಜೊತೆಗೆ ಶ್ರುತಿ ಹಾಸನ್ ಅವರನ್ನೂ ಸಂಪರ್ಕಿಸಲಾಗಿದೆ ಎನ್ನುತ್ತವೆ ಮೂಲಗಳು.

ಇದೊಂದು ಅಡ್ವೆಂಚರ್ ಫ್ಯಾಂಟಸಿ ಚಿತ್ರ

ತಮ್ಮ ತಮಿಳು ಚಿತ್ರದ ಬಗ್ಗೆ ಮಾತನಾಡಿರುವ ಸುದೀಪ್, "ಇದೊಂದು ಅಡ್ವೆಂಚರ್ ಫ್ಯಾಂಟಸಿ ಚಿತ್ರ. ಈ ರೀತಿಯ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರಕಥೆಯನ್ನು ಬಹಳ ನೀಟಾಗಿ ಹೆಣೆದಿದ್ದಾರೆ" ಎಂದಿದ್ದಾರೆ.

'ನಾನ್ ಈ' ಮೂಲಕ ತಮಿಳು ಪ್ರೇಕ್ಷಕರಿಗೆ ಹತ್ತಿರ

ಎರಡು ವರ್ಷಗಳ ಹಿಂದೆ ಬಿಡುಗಡೆಯಾದ 'ನಾನ್ ಈ' ಚಿತ್ರ ನನಗೆ ಗೌರವಯುತವಾದ ಸ್ಥಾನ ತಂದುಕೊಡ್ತು. ಈಗ ಅಂತಹದ್ದೇ ಒಂದು ಪಾತ್ರ ಹಾಗೂ ಚಿತ್ರಕಥೆ ಸಿಕ್ಕಿದ್ದು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ ಸದ್ಯಕ್ಕೆ ಕನ್ನಡದ 'ಮಾಣಿಕ್ಯ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿರುವ ಸುದೀಪ್.

ಚಿಂಬುದೇವನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

'ನಾನಿ ಈ' (ತೆಲುಗಿನ 'ಈಗ' ಚಿತ್ರದ ಡಬ್ಬಿಂಗ್) ಚಿತ್ರದ ಮೂಲಕ ಸುದೀಪ್ ತಮಿಳು ಪ್ರೇಕ್ಷರಿಗೆ ತುಂಬ ಹತ್ತಿರವಾಗಿದ್ದರು. ಇದೀಗ ಇನ್ನೊಂದು ಚಿತ್ರದ ಮೂಲಕ ಅದರಲ್ಲೂ ವಿಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಐತಿಹಾಸಿಕ-ಕಾಲ್ಪನಿಕ ಚಿತ್ರಗಳಿಗೆ ಹೆಸರಾಗಿರುವ ಚಿಂಬುದೇವನ್. ಮೂಲಗಳ ಪ್ರಕಾರ ಚಿತ್ರಕ್ಕೆ 'ವಿಜಯ್ 58' ಎಂದು ಹೆಸರಿಡಲು ಚಿಂತಿಸಲಾಗಿದೆ.

English summary
'Bangalore Mirror' reported that Sudeep's remuneration for the untitled Tamil movie with Ilayathalapathy Vijay, is Rs 6 crore, which has not only made him the highest paid Kannada actor, but also the highest paid South Indian actor in a language other than his own.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada