ಮಗಳಿಗೆ ಹಾಡಿನ ಉಡುಗೊರೆ ನೀಡಿ 'ಈ' ಮೂವರಿಗೆ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದಂಪತಿಗೆ ಮೇ 20 ವಿಶೇಷವಾದ ದಿನ. ಕಿಚ್ಚ ಮತ್ತು ಪತ್ನಿ ಪ್ರಿಯಾ ಸಂಭ್ರಮಕ್ಕೆ ಕಾರಣ ಅವರ ಪ್ರೀತಿಯ ಮಗಳು ಸಾನ್ವಿ. ಮೇ 20 ಸಾನ್ವಿ ಹುಟ್ಟಿದ ದಿನ. 16 ವರ್ಷ ತುಂಬಿದ ಮಗಳಿಗೆ ಸುದೀಪ್ ದಂಪತಿ ವಿಶೇಷವಾಗು ಜನ್ಮ ದಿನ ಆಚರಣೆ ಮಾಡಿದ್ದಾರೆ.
Recommended Video
ಹೌದು, ಮುದ್ದು ಮಗಳ ಹುಟ್ಟುಹಬ್ಬವನ್ನು ಸುದೀಪ್ ದಂಪತಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಲಾಕ್ ಡೌನ್ ಕಾರಣ ಅದ್ದೂರಿ ಸೆಲೆಬ್ರೇಷನ್ ಇಲ್ಲದಿದ್ದರೂ ಸಂಭ್ರಮಕ್ಕೇನು ಕೊರತೆ ಬರದಂತೆ ನೋಡಿಕೊಂಡಿದ್ದಾರೆ. ಮಗಳಿಗೆ ವಿಶೇಷ ಹಾಡಿನ ಉಡುಗೊರೆ ನೀಡಿರುವ ಮೂಲಕ ಕಿಚ್ಚ, ಈ ಬಾರಿಯ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿದ್ದಾರೆ. ಮುಂದೆ ಓದಿ...

ಮುದ್ದು ಮಗಳಿಗೆ ವಿಶೇಷ ಹಾಡಿನ ಉಡುಗೊರೆ
ಸುದೀಪ್ ಮಗಳಿಗಾಗಿ ವಿಶೇಷ ಹಾಡೊಂದನ್ನು ತಯಾರಿಸಿದ್ದಾರೆ. ಈ ಹಾಡನ್ನು ಸುದೀಪ್ ಅವರೇ ಹಾಡಿ ಮಗಳಿಗೆ ಗಿಫ್ಟ್ ಆಗಿ ನೀಡಿದ್ದಾರೆ. "ನಿನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು, ನನ್ನ ಮಗಳೀಗ, ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ, ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ, ಕನಸು ನೀನು ನಿನ್ನಿಂದಲೇ ಕಲಿಯುವ, ಕೂಸು ನಾನು, ಆಸೆ ಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು" ಎನ್ನುವ ಸಾಲುಗಳಿರುವ ಈ ಹಾಡು ಅಭಿಮಾನಿಗಳ ಮನಗೆದ್ದಿದೆ.
ಪುಟ್ಟ ಸಾನ್ವಿಯ ಫೋಟೋ ಮತ್ತು ವಿಡಿಯೋ
ಈ ಹಾಡಿನಲ್ಲಿ ಸುದೀಪ್ ಪುತ್ರಿ ಸಾನ್ವಿಯ ಮುದ್ದಾದ ಫೋಟೋಗಳು ಮತ್ತು ವಿಡಿಯೋಗಳಿವೆ. ಪುಟ್ಟ ಸಾನ್ವಿಯ ಹುಟ್ಟುಹಬ್ಬದ ವಿಡಿಯೋ, ಮೊದಲ ಮಾತು, ಮೊದಲ ನಡಿಗೆ ಹೀಗೆ ಸಾಕಷ್ಟು ಮೊದಲುಗಳಿರುವ ಈ ಹಾಡು ಅಭಿಮಾನಿಗಳ ಹೃದಯ ಗೆದ್ದಿದೆ.

ಮೂವರಿಗೆ ಕಿಚ್ಚನ ಧನ್ಯವಾದ
ಈ ಹಾಡನ್ನು ತಯಾರಿಸಲು ಸಹಾಯ ಮಾಡಿದ ಮೂವರಿಗೆ ಕಿಚ್ಚ ಸುದೀಪ್ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಆಲೋಚನೆಗಳನ್ನು ಪದಳಿಗೆ ಇರಿಸಿ, ಸಂಗೀತ ಸ್ಪರ್ಶ ನೀಡಿದ ವಾಸುಕಿ ವೈಭವ್, ವಿಡಿಯೋ ಎಡಿಟ್ ಮಾಡಿದ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಹಾಡನ್ನು ರೆಕಾರ್ಡ್ ಮಾಡಲು ಸಹಕರಿಸಿದ ವಿಜಯ್ ಈ ಮೂವರಿಗೆ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ.

ಅಭಿಮಾನಿಗಳು, ಗಣ್ಯರ ವಿಶ್
ಸುದೀಪ್ ಪುತ್ರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಹ ವಿಶೇಷವಾಗಿ ಶುಭಕೋರುತ್ತಿದ್ದಾರೆ. ಜೊತೆಗೆ ಸುದೀಪ್ ಮಗಳಿಗಾಗಿ ಹಾಡಿರುವ ಹಾಡನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈಗಾಗಲೆ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದೆ.


Click it and Unblock the Notifications











