For Quick Alerts
  ALLOW NOTIFICATIONS  
  For Daily Alerts

  ತಮ್ಮ ಬಾಡಿಗಾರ್ಡ್‌ಗೆ ಸರ್ಪ್ರೈಸ್ ಉಡುಗೊರೆ ಕೊಟ್ಟ ಸುದೀಪ್

  |

  ನಟ ಕಿಚ್ಚ ಸುದೀಪ್ ತಮ್ಮ ಸುತ್ತಲಿರುವವರನ್ನು ಬಹಳ ಕೇರ್ ಮಾಡುತ್ತಾರೆ. ಕುಟುಂಬಕ್ಕೆ ಅತಿ ಹೆಚ್ಚು ಮೌಲ್ಯ ನೀಡುವ ಸುದೀಪ್, ತಮ್ಮ ಆಪ್ತ ಸಿಬ್ಬಂದಿಗಳನ್ನೂ ಸಹ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ.

  ತನ್ನವರನ್ನು ಕಿಚ್ಚ ಸುದೀಪ್ ನೋಡಿಕೊಳ್ಳೊ ರೀತಿ ಇದು | Filmibeat Kannada

  ಹಲವು ವರ್ಷಗಳಿಂದ ತಮ್ಮ ಜೊತೆಗೇ ಇರುವ ಅಂಗರಕ್ಷಕ (ಬಾಡಿಗಾರ್ಡ್) ಸಾಯಿ ಕಿರಣ್ ಗೆ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ ಕಿಚ್ಚ ಸುದೀಪ್.

  ಸಾಯಿಕಿರಣ್ ಅಲಿಯಾಸ್ ಕಿಚ್ಚ ಕಿರಣ್‌ ಗೆ ಬುಲೆಟ್ ಬೈಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ನಟ ಕಿಚ್ಚ ಸುದೀಪ್. ಸಾಯಿಕಿರಣ್‌ ಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಎನ್‌ಫೀಲ್ಡ್‌ ಬುಲೆಟ್ ಅನ್ನು ನೀಡಿದ್ದಾರೆ ಕಿಚ್ಚ.

  ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಸಾಯಿ ಕಿರಣ್, ಇದು ನಿಜವಾಗಲೂ ನನಗೆ ಆಶ್ಚರ್ಯ, ಖುಷಿ ಏಕಕಾಲಕ್ಕೆ ತಂದಿದೆ. ನಾನು ಈ ಬೈಕ್‌ನಲ್ಲಿ ಮೊದಲಿಗೆ ಸುದೀಪ್ ಅವರನ್ನೇ ಕರೆದುಕೊಂಡು ಸುತ್ತಾಡುತ್ತೇನೆ ಎಂದಿದ್ದಾರೆ ಸಾಯಿ ಕಿರಣ್.

  ಸುದೀಪ್ ಅವರ ಸ್ಪರ್ಷ ಸಿನಿಮಾದ ಕಾಲದಿಂದಲೂ ನಾನು ಅವರ ಅಭಿಮಾನಿ, ಆರು ವರ್ಷಗಳಿಂದಲೂ ಸುದೀಪ್ ಅವರೊಟ್ಟಿಗೆ ಕೆಲಸ ಮಾಡುತ್ತಿದ್ದೀನಿ. ಸುದೀಪ್ ಅವರಿಗೆ ಹಾಗೂ ಅವರ ಕುಟುಂಬಕ್ಕೆ ನಾನು ಚಿರರುಣಿ' ಎಂದಿದ್ದಾರೆ ಸಾಯಿ ಕಿರಣ್.

  ಕೆಲವು ದಿನಗಳ ಹಿಂದಷ್ಟೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸುದೀಪ್, ಅಲ್ಲಿ ಎದುರಾದ ಅಂಗಲಿಕಲ ಅಭಿಮಾನಿ ಒಬ್ಬನಿಗೆ ಆರ್ಥಿಕ ಸಹಾಯ ಒದಗಿಸಿದ್ದರು. ಕಿಚ್ಚ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಲವು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಸುದೀಪ್.

  English summary
  Actor Sudeep gifted a Royal Enfield bike to his personal body guard Sai Kiran on Sanktranthi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X