ತಮ್ಮ ಅಂಗರಕ್ಷಕನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸುದೀಪ್

ನಟ ಸುದೀಪ್ ತನ್ನ ಸುತ್ತ-ಮುತ್ತಲಿರುವವರನ್ನು ಕಾಳಜಿ ಮಾಡುವ ಗುಣವುಳ್ಳವರು. ತನ್ನ ಕುಟುಂಬದೆಡೆಗೆ ತೋರುವ ಕಾಳಜಿಯನ್ನೇ ತಮ್ಮ ಆಪ್ತೇಷ್ಟರಿಗೂ ತೋರುತ್ತಾರೆ ಸುದೀಪ್.

ನಟ ಸುದೀಪ್‌ಗೆ ಹಲವು ವರ್ಷಗಳಿಂದ ಅಗಂರಕ್ಷಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ಸುದೀಪ್ ನೀಡಿರುವುದೇ ಅವರ ಕಾಳಜಿಗೆ, ಪ್ರೀತಿಗೆ ಸಾಕ್ಷಿ.

ಕಿಚ್ಚ ಸಾಯಿ ಕಿರಣ್ ಎಂದೇ ಖ್ಯಾತವಾಗಿರುವ ಸುದೀಪ್ ಅಂಗರಕ್ಷಕ ಸಾಯಿ ಕಿರಣ್‌ರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ಸುದೀಪ್ ನೀಡಿದ್ದಾರೆ.

Sudeep Gives Special Gift To His Body Guard Sai Kiran

ಸಾಯಿ ಕಿರಣ್ ಹುಟ್ಟುಹಬ್ಬಕ್ಕೆ ಸುದೀಪ್ ವಿಶೇಷವಾಗಿ ಬಿರಿಯಾನಿ ಮಾಡಿ ಸಾಯಿ ಕಿರಣ್‌ಗೆ ಉಣಪಡಿಸಿದ್ದಾರೆ. ಸಾಯಿ ಕಿರಣ್ ಮನೆಯವರಿಗೂ ಬಿರಿಯಾನಿ ಕಳಿಸಿದ್ದಾರೆ ಸುದೀಪ್.

ಸುದೀಪ್ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂಬುದು ಗೊತ್ತಿರುವ ವಿಷಯ. ಪ್ರೀತಿ ಪಾತ್ರರಿಗೆ ಪಾತ್ರವೇ ಅವರು ಅಡುಗೆ ಮಾಡಿ ಕೊಡುತ್ತಾರೆ. ಅವರ ಕೈಯಡುಗೆ ತಿನ್ನಲು ಸೆಲೆಬ್ರಿಟಿಗಳೇ ಕಾಯುತ್ತಿರುತ್ತಾರೆ.

Sudeep Gives Special Gift To His Body Guard Sai Kiran

ಸದೀಪ್ ತಮ್ಮ ಚಾಲಕ ವಿಶ್ವ ಹುಟ್ಟುಹಬ್ಬಕ್ಕೂ ವಿಶೇಷ ಉಡುಗೊರೆ ಕೊಟ್ಟಿದ್ದರು, ಮಾತ್ರವಲ್ಲ ಚಾಲಕ ವಿಶ್ವ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‌ನಲ್ಲಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಿದ್ದರು.

ಸುದೀಪ್ ಪತ್ನಿ ಪ್ರಿಯಾರ ಹುಟ್ಟುಹಬ್ಬಕ್ಕೆ ತಾವೇ ಸ್ವತಃ ಹಾಡೊಂದನ್ನು ಬರೆದು ಅದಕ್ಕೆ ರಾಗ ಸಂಯೋಜಿಸಿ ಅದನ್ನು ಹಾಡಿದ್ದರು. ಈ ವಿಷಯವನ್ನು ರಮೇಶ್ ಅರವಿಂದ್ ಅವರು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದರು.

ಸುದೀಪ್ ಅವರು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಕ್ಕಿಂತಲೂ ಸುಂದರ ನೆನಪನ್ನು ಉಡುಗೊರೆಯಾಗಿ ನೀಡುವುದು ಅವರ ವಿಶೇಷತೆ.

Recommended Video

ನಾನು ತಪ್ಪು ಮಾಡಿದ್ದೀನಿ ಅಂತ ಒಪ್ಪಿಕೊಳ್ತೀನಿ

ಸುದೀಪ್ ಈಗಷ್ಟೆ 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ 'ಕೋಟಿಗೊಬ್ಬ 3' ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. ಎರಡೂ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆದ ಬಳಿಕ 'ವಿಕ್ರಾಂತ್ ರೋಣ' ಬಿಡುಗಡೆ ಆಗಲಿದೆ. ಈ ನಡುವೆ ಮಲಯಾಳಂ ಸಿನಿಮಾ ಒಂದನ್ನು ಸುದೀಪ್ ಒಪ್ಪಿಕೊಂಡಿದ್ದಾರೆ.

More from Filmibeat

English summary
Actor Sudeep gives special gift to his body guard Sai Kiran. He cooks biriyani for Kiran and his family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X