Kiccha46 ಟೀಸರ್ ಕುರಿತು ಬ್ರೇಕಿಂಗ್ ನ್ಯೂಸ್ ಕೊಟ್ಟ ಸುದೀಪ್.. ಆದರೆ..
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 46ನೇ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ. ಇತ್ತೀಚೆಗೆ ಸಿನಿಮಾ ಅನೌನ್ಸ್ ಆಗಿತ್ತು. ತಮಿಳಿನ ವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದರು. ಆದರೆ ಇನ್ನುಳಿದ ಮಾಹಿತಿ ಸಿಕ್ಕಿರಲಿಲ್ಲ. ಶೀಘ್ರದಲ್ಲೇ ಟೀಸರ್ ರಿಲೀಸ್ ಸುಳಿವು ಸಿಕ್ಕಿತ್ತು. ಆದರೆ ಅಭಿಮಾನಿಗಳು ಕಾದು ಕಾದು ಸುಸ್ತಾದರೂ ಟೀಸರ್ ಬರಲೇಯಿಲ್ಲ.
ಇದೀಗ ಸ್ವತಃ ಸುದೀಪ್ ಮುಂದಿನ ಸಿನಿಮಾ ಟೀಸರ್ ಅಪ್‌ಡೇಟ್ ಕೊಟ್ಟಿದ್ದಾರೆ. 'ವಿಕ್ರಾಂತ್ ರೋಣ' ನಂತರ ಕಿಚ್ಚ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಹೆಚ್ಚು ಕಮ್ಮಿ ವರ್ಷವಾದರೂ ಕ್ಯಾಮರಾ ಮುಂದೆ ನಿಲ್ಲಲಿಲ್ಲ. ದೊಡ್ಡ ಗ್ಯಾಪ್ ತಗೊಂಡಿದ್ದ ಬಾದ್‌ಶಾ 3 ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ. ಅದರಲ್ಲಿ ಒಂದು ಚಿತ್ರ ಈಗ ಘೋಷಣೆಯಾಗಿದೆ. ಕಾಲಿವುಡ್‌ನಲ್ಲಿ 'ಕಬಾಲಿ' ರೀತಿಯ ಸೆನ್ಸೇಷನ್ ಸಿನಿಮಾ ನಿರ್ಮಿಸಿದ ಕಲೈಪುಲಿ ಎಸ್. ತನು ಸುದೀಪ್ 46ನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. Kiccha46 ಎನ್ನುವ ಟೆಂಟಿಟೀವ್ ಟೈಟಲ್‌ನಲ್ಲಿ ಸಿನಿಮಾ ಕೆಲಸ ಆರಂಭವಾಗಿದೆ. ಈಗಾಗಲೇ ಜಬರ್ದಸ್ತ್ ಟೀಸರ್ ಶೂಟ್ ಕೂಡ ಮಾಡಲಾಗಿದೆ. ಟೀಸರ್ ಶೂಟ್‌ಗಾಗಿ ಕಿಚ್ಚ ಸೆಟ್‌ಗೆ ಎಂಟ್ರಿ ಕೊಟ್ಟಿದ್ದ ಸಣ್ಣ ಝಲಕ್ ಈಗಾಗಲೇ ರಿವೀಲ್ ಆಗಿದೆ. 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ನಂತರ Kiccha46 ಸಹ ಭಾರೀ ಹೈಪ್ ಕ್ರಿಯೇಟ್ ಮಾಡಿದೆ.
Kiccha46 ಟೀಸರ್ ಅಪ್‌ಡೇಟ್
ಇದೀಗ ಸ್ವತಃ ಸುದೀಪ್ ಟ್ವೀಟ್ ಮಾಡಿ Kiccha46 ಟೀಸರ್ ಬಗ್ಗೆ ಮಾಹಿತಿ ನೀಡಿದ್ದಾರೆ. "K46ರ ಟೀಸರ್ ಸಿದ್ಧವಾಗಿದೆ. ಆದರೆ ಜೂನ್ 25ರಂದು ರಿಲೀಸ್ ಆಗುವ ಸಂಚಿತ್ ಸಂಜೀವ್ ಚೊಚ್ಚಲ ಸಿನಿಮಾ ಅನೌನ್ಸ್‌ಮೆಂಟ್ ಟೀಸರ್‌ಗಾಗಿ ಕಾಯುತ್ತಿದ್ದೇನೆ. K46ರ ತಂಡವು ತುಂಬಾ ಶ್ರಮಿಸಿದೆ ಮತ್ತು ಟೀಸರ್ ನಿಮ್ಮ ಮುಂದೆ ತರಲು ಎಲ್ಲರೂ ಉತ್ಸುಕರಾಗಿದ್ದಾರೆ. ಜೂನ್ 27ರಂದು ಟೀಸರ್ ರಿಲೀಸ್ ಡೇಟ್ ಘೋಷಣೆ ಅಗುತ್ತದೆ" ಎಂದು ಬರೆದುಕೊಂಡಿದ್ದಾರೆ.
ಕಿಚ್ಚ ಟ್ವೀಟ್‌ಗೆ ಫ್ಯಾನ್ಸ್ ಖುಷ್
ಅಭಿಮಾನಿಗಳು Kiccha46 ಝಲಕ್‌ಗಾಗಿ ಕಾಯುತ್ತಿದ್ದಾರೆ. ಜೂನ್ 1ಕ್ಕೆ ಟೀಸರ್ ಬರುತ್ತೆ. ಸಿನಿಮಾ ಸೆಟ್ಟೇರುತ್ತೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಕೊಂಚ ತಡವಾಗುತ್ತಿದೆ. ಅಂತೂ ಇಂತೂ ಸ್ವತಃ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸಿ ಜೂನ್ 27ರಂದು ಟೀಸರ್ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ ಎಂದಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಲೈಕ್, ಕಾಮೆಂಟ್ಸ್ ಮೂಲಕ ಟ್ವೀಟ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

'ಜಿಮ್ಮಿ'ಯಾಗಿ ಸಂಚಿತ್ ಸಂಜೀವ್
ಇನ್ನು ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ನೆರವೇರಿತ್ತು. ನಟನಾಗಿ ಮಾತ್ರವಲ್ಲದೇ ಸಂಚಿತ್ ನಿರ್ದೇಶಕರಾಗಿಯೂ ಪರಿಚಿತರಾಗುತ್ತಿರುವುದು ವಿಶೇಷ. ಕೆ. ಪಿ ಶ್ರೀಕಾಂತ್ ಹಾಗೂ ಮನೋಹರ್ ನಾಯ್ಡು ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ 'ಜಿಮ್ಮಿ' ಎನ್ನುವ ಟೈಟಲ್ ಫೈನಲ್ ಆಗಿದೆ. ಕ್ಯಾರೆಕ್ಟರ್ ಗ್ಲಿಂಪ್ಸ್ ಇದೇ ಭಾನುವಾರ ರಿವೀಲ್ ಆಗಲಿದೆ.
ಅನೂಪ್, ನಂದ ಕಿಶೋರ್ ಕತೆ
ತಮಿಳು ಯುವ ನಿರ್ದೇಶಕ ವಿಜಯ್ ಕಾರ್ತಿಕೇಯನ್ Kiccha46 ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು ಬಹುತೇಕ ಕೆಲಸ ಕಾಲಿವುಡ್‌ನಲ್ಲೇ ನಡೆಯಲಿದೆ. ಇನ್ನು ಈ ಚಿತ್ರದ ಜೊತೆಗೆ ಅನೂಪ್ ಭಂಡಾರಿ ಹಾಗೂ ನಂದ ಕಿಶೋರ್ ಸಹ ಸುದೀಪ್‌ಗಾಗಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ನಿರ್ಮಾಣವಾಗಲಿದೆ.


Click it and Unblock the Notifications











