For Quick Alerts
  ALLOW NOTIFICATIONS  
  For Daily Alerts

  ವಿಶೇಷ ಅಭಿಮಾನಿಯ ಮಾತು ಕೇಳಿ ಭಾವುಕರಾದ ಕಿಚ್ಚ ಸುದೀಪ್

  |
  ಸುದೀಪ್ ಇಲ್ಲ ಅಂದ್ರೆ ಈ ಮಗು ಊಟ ಮಾಡೋದೆ ಇಲ್ಲ.

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿಗೆ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಚಿತ್ರೀಕರಣ ನಡುವೆಯೂ ಕಿಚ್ಚ ಅಭಿಮಾನಿಯ ಜೊತೆ ಸಮಯ ಕಳೆದು ಅಭಿಮಾನಿಯನ್ನು ಸಂತಸಪಡಿಸಿದ್ದಾರೆ. ಮಂಗಳೂರು ಮೂಲಕ ದೀಪಿಕಾ ಎನ್ನುವ ಬಾಲಕಿ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿಯಂತೆ.

  ದೀಪಿಕಾ ಎಲ್ಲಾ ಮಕ್ಕಳಂತೆ ಅಲ್ಲ. ಆಕೆ ವಿಶೇಷ ಚೇತನ ಮಗು. ಸುದೀಪ್ ಅಂದರೆ ಪಂಚ ಪ್ರಾಣವಂತೆ. ಹಾಗಾಗಿ ಕಿಚ್ಚನನ್ನು ಒಮ್ಮೆಯಾದರು ಭೇಟಿಮಾಡಿಸಬೇಕೆಂದು ದೂರದ ಮಂಗಳೂರಿನಿಂದ ಕರೆದುಕೊಂಡು ಬಂದಿದ್ದಾರೆ. ದೂರದಿಂದ ಬಂದ ವಿಶೇಷ ಅಭಿಮಾನಿಯನ್ನು ಸುದೀಪ್ ಆದರದಿಂದ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿದ್ದಾರೆ. ಬಿಗ್ ಬಾಸ್ ಸೀಸನ್-7ನಲ್ಲಿ ಬ್ಯುಸಿಯಾಗಿರುವ ಸುದೀಪ್ ಶೂಟಿಂಗ್ ಸ್ಥಳಕ್ಕೆ ಕೆರೆಸಿಕೊಂಡು ಮಾತನಾಡಿಸಿದ್ದಾರೆ. ಈ ಸಮಯದಲ್ಲಿ ಅಭಿಮಾನಿಯ ಮಾತು ಕೇಳಿ ಭಾವುಕರಾಗಿದ್ದಾರೆ.

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿ ಸ್ಟಾರ್ ನಟರು ಹೇಳಿದ್ದೇನು?

  ಮನೆಗೆ ಯಾಕೆ ಬಂದಿಲ್ಲ ಎಂದ ಅಭಿಮಾನಿ

  ಮನೆಗೆ ಯಾಕೆ ಬಂದಿಲ್ಲ ಎಂದ ಅಭಿಮಾನಿ

  ಸುದೀಪ್ ಅವರನ್ನು ನೋಡುತ್ತಿದ್ದಂತೆ ಪುಟ್ಟ ಅಭಿಮಾನಿ ದೀಪಿಕಾ ತಬ್ಬಿಕೊಂಡು ಸಂತಸಪಟ್ಟಿದ್ದಾರೆ. ನಂತರ ಸುದೀಪ್ ಪಕ್ಕದಲ್ಲಿಯೆ ಕೂರಿಸಿಕೊಂಡು ಪ್ರೀತಿಯಿಂದ ಮಾತನಾಡಿದ್ದಾರೆ. ದೀಪಿಕಾ ಸುದೀಪ್ ಅವರ ಬಳಿ ನಮ್ಮ ಮನೆಗೆ ಯಾಕೆ ಬಂದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸುದೀಪ್ ಮಂಗಳೂರಗೆ ಬಂದಾಗ ಖಂಡಿತ ಬರ್ತಿನಿ ಎಂದು ಹೇಳಿ ಸಮಾಧಾನ ಮಾಡಿದ್ದಾರೆ.

  ಸೈಕಲ್ ಏರಿ ಚಿತ್ರೀಕರಣ ಸ್ಥಳಕ್ಕೆ ಬಂದ ಕಿಚ್ಚ ಸುದೀಪ್ಸೈಕಲ್ ಏರಿ ಚಿತ್ರೀಕರಣ ಸ್ಥಳಕ್ಕೆ ಬಂದ ಕಿಚ್ಚ ಸುದೀಪ್

  ಸುದೀಪ್ ಭೇಟಿ ಮಾಡಿಸುವುದಾಗಿ ಹೇಳಿ ಊಟ ಮಾಡಿಸಬೇಕು

  ಸುದೀಪ್ ಭೇಟಿ ಮಾಡಿಸುವುದಾಗಿ ಹೇಳಿ ಊಟ ಮಾಡಿಸಬೇಕು

  ಸುದೀಪ್ ಅವರನ್ನು ಭೇಟಿ ಮಾಡುವವರೆಗೂ ಊಟ ಮಾಡುವುದಿಲ್ಲ ಎಂದು ಹಠ ಮಾಡಿ ದೀಪಿಕಾ, ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ಪ್ರತಿದಿನ ಮನೆಯಲ್ಲಿ ಊಟ ಮಾಡುವುದಿಲ್ಲ ಮತ್ತು ಔಷದಿ ತೆಗೆದುಕೊಳ್ಳುವುದಿಲ್ಲ ಎಂದು ಅಳುತ್ತಿರುತ್ತಾರಂತೆ. ಪ್ರತಿ ದಿನ 10ಕ್ಕು ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳಬೇಕಂತೆ. ಆಗ ಸುದೀಪ್ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿ ಸಮಾಧಾನ ಪಡಿಸಿ ಊಟ ಮಾಡಿಸಬೇಕಂತೆ.

  ನಿಮ್ಮ ಮನೆಗೆ ಬರಬೇಕು ಅಂದರೆ ಊಟ ಮಾಡಬೇಕು

  ನಿಮ್ಮ ಮನೆಗೆ ಬರಬೇಕು ಅಂದರೆ ಊಟ ಮಾಡಬೇಕು

  'ನಿಮ್ಮ ಮನೆಗೆ ಬರಬೇಕು ಅಂದರೆ ದಿನ ಊಟ ಮಾಡಬೇಕು ಜೊತೆಗೆ ಔಷದಿ ತೆಗೆದುಕೊಳ್ಳಬೇಕು ಇಲ್ಲವಾದರೆ ನಿಮ್ಮ ಮನೆಗೆ ಬರುವುದಿಲ್ಲ' ಎಂದು ದೀಪಿಕಾ ಅವರನ್ನು ಸಂತೈಸುತ್ತಾರೆ. ಪ್ರತೀ ದಿನ ಊಟ ಮಾಡುವಂತೆ ಪ್ರೋಮಿಸ್ ಮಾಡಿಸಿಕೊಂಡಿದ್ದಾರೆ. ನಂತರ ಸುದೀಪ್ ಅವರಿಗೆ ಧನ್ಯವಾದ ಹೇಳುತ್ತಾರೆ ದೀಪಿಕಾ.

  'ಕಿಚ್ಚ ಸುದೀಪ್ ಗೆ ನಾಚಿಕೆ ಜಾಸ್ತಿ': ಹಿರಿಯ ಪತ್ರಕರ್ತ ರವಿ ಬೆಳಗೆರೆ'ಕಿಚ್ಚ ಸುದೀಪ್ ಗೆ ನಾಚಿಕೆ ಜಾಸ್ತಿ': ಹಿರಿಯ ಪತ್ರಕರ್ತ ರವಿ ಬೆಳಗೆರೆ

  ಅಭಿಮಾನಿಯ ಹಾಡು ಕೇಳಿ ಸುದೀಪ್ ಭಾವುಕ

  ಅಭಿಮಾನಿಯ ಹಾಡು ಕೇಳಿ ಸುದೀಪ್ ಭಾವುಕ

  ಸುದೀಪ್ ಅವರಿಗೆ 'ನಗುತಾ ನಗುತಾ ಬಾಳು ನೀನು ನೂರು ವರುಷ.....' ಎಂದು ಹಾಡು ಹೇಳುತ್ತಿದ್ದಂತೆ ಸುದೀಪ್ ಕಣ್ಣಾಲಿ ಒದ್ದೆಯಾಗಿದ್ದು. ಆಗ 'ಬೇಜಾರು ಆಯಿತಾ ಮಾಮ' ಎಂದು ಪುಟ್ಟ ಬಾಲಕಿ ಸುದೀಪ್ ಅವರನ್ನು ಕೇಳುತ್ತಾರೆ. ಸುದೀಪ್ 'ನನಗೆ ಬೇಜಾರು ಆಗಿಲ್ಲ. ನಿಮ್ಮನ್ನ ಭೇಟಿ ಮಾಡಿ ಸಂತೋಷವಾಯಿತು' ಎಂದು ಹೇಳುತ್ತಾರೆ. ಒಂದಿಷ್ಟು ಸಮಯ ಅಭಿಮಾನಿಯ ಜೊತೆ ಕಳೆದು ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  Read more about: sudeep ಸುದೀಪ್
  English summary
  Kannada actor Sudeep got emotional after meets his special fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X