'ಪೈಲ್ವಾನ್' ಬಗ್ಗೆ ಅಪಪ್ರಚಾರ : ಸುದೀಪ್ ಪ್ರತಿಕ್ರಿಯೆ ಹೀಗಿದೆ

ಅಖಾಡದಲ್ಲಿ ಇಳಿದು ಎದುರಾಳಿಗಳ ವಿರುದ್ಧ ಕುಸ್ತಿ ಮಾಡುವುದು 'ಪೈಲ್ವಾನ್' ಸಿನಿಮಾದಲ್ಲಿ ಆಗಾಗ ಬರುವ ದೃಶ್ಯ. ಇದೇ ರೀತಿ ರಿಯಲ್ ಆಗಿಯೂ ಸುದೀಪ್ ವೈರಿಗಳು ವಿರುದ್ಧ ಹೋರಾಟ ನಡೆಸಬೇಕಾಗಿದೆ. ಯಾಕೆಂದರೆ, ಆ ಮಟ್ಟಿಗೆ 'ಪೈಲ್ವಾನ್' ಸಿನಿಮಾಗೆ ಕಿಡಿಗೇಡಿಗಳು ಕಾಟ ನೀಡುತ್ತಿದ್ದಾರೆ.

'ಪೈಲ್ವಾನ್' ಸಿನಿಮಾ ಸರಿ ಇಲ್ಲ ಎಂದು ಅಪಪ್ರಚಾರ ಮಾಡುವುದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದೆ. ಉದ್ಧೇಶ ಪೂರ್ವಕವಾಗಿ ಈ ರೀತಿ ಮಾಡುತ್ತಿರುವ ಘಟನೆ ನಟ ಸುದೀಪ್ ಕಣ್ಣಿಗೂ ಬಿದ್ದಿದೆ.

ಯಾವುದೋ ಊರಿನ ಖಾಲಿ ಚಿತ್ರಮಂದಿರದ ವಿಡಿಯೋ ಹಾಕುವುದು, ಸಿನಿಮಾ ನೋಡದೆ ಕಾಮೆಂಟ್ ಮಾಡುವುದು, ಚಿತ್ರದ ಬಗ್ಗೆ ಸುಮ್ಮನೆ ನೆಗೆಟಿವ್ ಪ್ರಚಾರ ಮಾಡುವುದು ಹೀಗೆ 'ಪೈಲ್ವಾನ್' ವಿರುದ್ಧ ನಡೆಯುತ್ತಿರುವ ಕುತಂತ್ರಗಳು ಒಂದ..ಎರಡ.. ಈ ರೀತಿ 'ಪೈಲ್ವಾನ್' ಚಿತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಷಯಗಳ ಸುದೀಪ್ ಗಮನಕ್ಕೂ ಬಂದಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ಸುದೀಪ್ ಪ್ರತಿಕ್ರಿಯೆ

ಟ್ವಿಟ್ಟರ್ ನಲ್ಲಿ ಸುದೀಪ್ ಪ್ರತಿಕ್ರಿಯೆ

ಗಾಳಿ ಸುದ್ದಿ ಹಬ್ಬಿಸುವವರ ಬಗ್ಗೆ ಟ್ವಿಟ್ಟರ್ ನಲ್ಲಿ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಸಿನಿಮಾ ಹೌಸ್ ಫುಲ್ ಆಗಿರುವ ವಿಡಿಯೋ ಮೂಲಕ ವೈರಿಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ''ಯಾರು ಸಿನಿಮಾದ ಬಗ್ಗೆ ಕೆಟ್ಟ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ, ಅವರಿಂದ ನಾನು ಖುಷಿಯಾಗಿ ಇದ್ದೇವೆ'' ಎಂದು ತಿರುಗೇಟು ನೀಡಿದ್ದಾರೆ.

ಒಳ್ಳೆಯ ಕೆಲಸ ಮಾಡುವಾಗಲೇ ಕೆಟ್ಟದನ್ನು ಹಬ್ಬಿಸುವುದು

ಒಳ್ಳೆಯ ಕೆಲಸ ಮಾಡುವಾಗಲೇ ಕೆಟ್ಟದನ್ನು ಹಬ್ಬಿಸುವುದು

''ಯಾರು ಕೆಟ್ಟ ಸುದ್ದಿಗಳನ್ನು ಹರಡಿಸುತ್ತಿದ್ದಾರೋ ಅವರಿಂದ ನಾನು ಖುಷಿಯಾಗಿ ಇದ್ದೇನೆ. ಅವರು ಇನ್ನೊಂದು ಕಡೆ, ಈಗಲೂ ಪೈಲ್ವಾನ್ ಬಗ್ಗೆ ಮಾತಾನಾಡಲು ಸಮಯ ಮತ್ತು ಶ್ರಮವನ್ನು ಹಾಕುತ್ತಿದ್ದಾರೆ. ನಾನು ಅದನ್ನು ಗಮನಿಸುತ್ತಿದ್ದೇನೆ. ಯಾವಾಗ ಎಲ್ಲರೂ ನಮ್ಮ ಬಗ್ಗೆ ಕೆಟ್ಟದನ್ನು ಹಬ್ಬಿಸಲು ಸಾಧ್ಯ?. ನಾವು ಒಳ್ಳೆಯದನ್ನು ಮಾಡುತ್ತಿರುವಾಗ ಅಲ್ಲವೇ. ಅದಕ್ಕೆ ಈ ಕ್ಷಣವನ್ನು ಖುಷಿಪಡಿ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಅಪಪ್ರಚಾರದ ಜೊತೆಗೆ 'ಪೈಲ್ವಾನ್' ಇದೆ ಪೈರಸಿ ಕಾಟ

ಅಪಪ್ರಚಾರದ ಜೊತೆಗೆ 'ಪೈಲ್ವಾನ್' ಇದೆ ಪೈರಸಿ ಕಾಟ

ಗಾಳಿ ಸುದ್ದಿ ಹಬ್ಬಿಸುವವರ ಜೊತೆಗೆ ಪೈರಸಿ ಕೂಡ 'ಪೈಲ್ವಾನ್' ಸಿನಿಮಾಗೆ ಕಾಟ ನೀಡಿದೆ. tamilrockers ವೆಬ್ ಸೈಟ್ ನಲ್ಲಿ 'ಪೈಲ್ವಾನ್' ಕನ್ನಡ, ತಮಿಳು ಹಾಗೂ ತೆಲುಗು ವರ್ಷನ್ ಗಳು ಲೀಕ್ ಆಗಿದೆ. ಇಡೀ ಸಿನಿಮಾ ಪೈರಸಿ ಆಗಿದ್ದು, ಜನ ಚಿತ್ರಮಂದಿರಕ್ಕೆ ಬರುವುದು ಕಡಿಮೆ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ 'ಪೈಲ್ವಾನ್' ಮೂರು ಭಾಷೆಗಳಲ್ಲಿಯೂ ಪೈರಸಿ ಆಗಿದೆ.

ಎರಡನೇ ದಿನ ಕಲೆಕ್ಷನ್ ಕಡಿಮೆ ಆಗಿದೆ

ಎರಡನೇ ದಿನ ಕಲೆಕ್ಷನ್ ಕಡಿಮೆ ಆಗಿದೆ

ಐದು ಭಾಷೆಗಳಲ್ಲಿ ಬಿಡುಗಡೆಯಾದ ಪೈಲ್ವಾನ್' ಸಿನಿಮಾ ಮೊದಲ ದಿನ ಕನ್ನಡದಲ್ಲಿ 10 ಕೋಟಿ ಗಳಿಕೆ ಮಾಡಿತ್ತು. ಆದರೆ, ಅದು ಎರಡನೇ ದಿನ 9 ಕೋಟಿಗೆ ಇಳಿದಿದೆ. ಎಲ್ಲ ಭಾಷೆಗಳು ಸೇರಿದರೆ ಒಟ್ಟು 18 ಕೋಟಿ ಮೊದಲ ದಿನ ಕಲೆಕ್ಷನ್ ಆಗಿತ್ತು. ಆದರೆ, ಎರಡನೇ ದಿನದ ಕಲೆಕ್ಷನ್ 15ಕ್ಕೆ ಕುಸಿದಿದೆ. ಹಿಂದಿ ಮತ್ತು ತೆಲುಗಿನಲ್ಲಿ ಬೇರೆ ಚಿತ್ರಗಳು ಬಿಡುಗಡೆ ಆಗಿದ್ದು, ಪೈಪೋಟಿ ಶುರುವಾಗಿದೆ.

More from Filmibeat

English summary
Actor Sudeep's happy about who spreading bad about Pailwaan movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X