ಕಿಚ್ಚನ ಮನೆಗೆ ಬಂತು ಹೊಸ ಬೈಕ್
Recommended Video

ಸಿನಿಮಾ ಸ್ಟಾರ್ ಗಳು ಸದಾ ಬ್ಯುಸಿ ಆಗಿರುತ್ತಾರೆ. ಸಿನಿಮಾ ಇಲ್ಲ ಅಂದರೆ ರಿಯಾಲಿಟಿ ಶೋಗಳು. ಇಲ್ಲವಾದಲ್ಲಿ ಜಾಹೀರಾತು ಶೂಟಿಂಗ್ , ಕ್ರಿಕೆಟ್, ಖಾಸಗಿ ಕಾರ್ಯಕ್ರಮಗಳು ಈ ಮಧ್ಯೆ ಬಿಡುವು ಮಾಡಿಕೊಂಡು ಮನೆ ಮಂದಿಯ ಜೊತೆ ಸಮಯ ಕಳೆಯುತ್ತಿರುತ್ತಾರೆ. ಈ ಎಲ್ಲಾ ಕೆಲಸಗಳನ್ನು ಮುಗಿಸಿ ತಮ್ಮ ಆಸೆ ಆಕಾಂಕ್ಷೆಗಳಿಗೂ ಕೊಂಚ ಸಮಯ ಕೊಡಬೇಕಾಗುತ್ತೆ.
ಪ್ರತಿಯೊಬ್ಬರಿಗೂ ಒಂದೊಂದು ಆಸೆ ಇರುತ್ತೆ. ಅದೇ ರೀತಿ ಕಿಚ್ಚ ಸುದೀಪ್‌ಗೂ ಕಾರ್ ಮತ್ತು ಬೈಕ್ ಗಳ ಮೇಲೆ ಸಾಕಷ್ಟು ಇಂಟ್ರೆಸ್ಟ್ ಇದೆ. ಈಗಾಗಲೇ ಕಿಚ್ಚನ ಬಳಿ ಸಾಕಷ್ಟು ಕಾರ್ ಗಳಿದ್ದು ಸದ್ಯ ಅವರ ಕಾರ್ ಮತ್ತು ಬೈಕ್ ಲೀಸ್ಟ್ ನಲ್ಲಿ ಹೊಸದೊಂದು ಗಾಡಿ ಸೇರಿಕೊಂಡಿದೆ. ಹೊಸ ಬೈಕ್ ಕೊಂಡುಕೊಂಡ ತಕ್ಷಣವೇ ಕಿಚ್ಚ ಲಾಂಗ್ ರೈಡ್ ಹೋಗಿದ್ದಾರೆ.
ಅಭಿನಯ ಚಕ್ರವರ್ತಿಗೆ ನಟ ಚಂದನ್ ಕೂಡ ಸಾಥ್ ನೀಡಿದ್ದಾರೆ. ಹಾಗಾದರೆ ಕಿಚ್ಚ ಕೊಂಡುಕೊಂಡಿರುವ ಆ ಬೈಕ್ ಯಾವುದು? ಬೈಕ್ ಹತ್ತು ಸುದೀಪ್ ರಾತ್ರೋರಾತ್ರಿ ಹೊರಟಿದ್ದು ಎಲ್ಲಿಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಹೊಸ ಬೈಕ್ ಕೊಂಡುಕೊಂಡ ಸುದೀಪ್
ನಟ ಕಿಚ್ಚ ಸುದೀಪ್ ಹೊಸ ಬೈಕ್ ಕೊಂಡುಕೊಂಡಿದ್ದಾರೆ . ಬಿಎಂಡಬ್ಲ್ಯೂ ಆರ್ 1200 ಬೈಕ್ ನಿನ್ನೆಯಷ್ಟೇ ಖರೀದಿ ಮಾಡಿದ್ದಾರೆ. ಈಗಾಗಲೇ ತಿಳಿದಿರುವಂತೆ ಸುದೀಪ್ ಬಳಿ ಸಾಕಷ್ಟು ಬೈಕ್ಸ್ ಕಲೆಕ್ಷನ್ಸ್ ಇದೆ.

ಸುದೀಪ್ ಜೊತೆ ಚಂದನ್
ಅಭಿನಯದ ಚಕ್ರವರ್ತಿ ಬೈಕ್ ಕೊಂಡುಕೊಳ್ಳುವಾಗ ನಟ ಚಂದನ್ ಕೂಡ ಜೊತೆಯಲ್ಲಿ ಹೋಗಿದ್ದಾರೆ. ಈ ಹಿಂದೆ ಸುದೀಪ್ ಹಾಗೂ ಸಿನಿಮಾ ಸ್ನೇಹಿತರು ಬೈಕ್ ನಲ್ಲೇ ಶಿವಮೊಗ್ಗಕ್ಕೆ ರೈಡ್ ಹೋಗಿದ್ದರು.

ಹೊಸ ಬೈಕ್ ನಲ್ಲಿ ಸುತ್ತಾಟ
ಕಿಚ್ಚ ತಾವೇ ಶೋ ರೂಮ್ ಗೆ ಭೇಟಿ ನೀಡಿ ಹೊಸ ಬೈಕ್ ಅನ್ನು ತೆಗೆದುಕೊಂಡು ಬಂದಿದ್ದಾರೆ. ಹೊಸ ಬೈಕ್ ಖರೀದಿ ಮಾಡಿರುವ ಖುಷಿಯಲ್ಲಿ ಸಿಲಿಕಾನ್ ಸಿಟಿ ಪೂರ್ತಿ ಸುತ್ತಾಡಿದ್ದಾರೆ.

ಕಿಚ್ಚನ ಫೋಟೋ-ವಿಡಿಯೋ ವೈರಲ್
ಕಿಚ್ಚ ಹೊಸ ಬೈಕ್ ಖರೀದಿ ಮಾಡಿದ್ದಾರೆ ಎನ್ನುವ ವಿಚಾರ ಸಾಕಷ್ಟು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಬೈಕ್ ಓಡಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗಿವೆ.


Click it and Unblock the Notifications











