For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಗೆ ಪ್ರೇಮ್ ನಿರ್ದೇಶನ, ಸುದೀಪ್ ನಿರ್ಮಾಣ.!

  |
  ಬಾಲಿವುಡ್ ಬ್ಯಾಡ್ ಬಾಯ್‍ಗೆ ಪ್ರೇಮ್ ನಿದೇರ್ಶನ ಮಾಡ್ತಾರಂತೆ | FILMIBEAT KANNADA

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸದ್ಯ 'ದಬಾಂಗ್-3' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಬಾಂಗ್-3' ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಸಲ್ಮಾನ್ ವಿರುದ್ಧ ಸ್ಯಾಂಡಲ್ ವುಡ್ ಗೂಳಿ ಅಖಾಡಕ್ಕೆ ಇಳಿದಿರುವುದು ಕಿಚ್ಚನ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ.

  'ದಬಾಂಗ್-3' ಚಿತ್ರೀತಂಡ ಸೇರಿಕೊಂಡಿರುವ ಕಿಚ್ಚ ತನ್ನ ಸ್ನೇಹಿತ ನಿರ್ದೇಶಕ ಜೋಗಿ ಪ್ರೇಮ್ ಅವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಮೊದಲ ಬಾರಿಗೆ ಸಲ್ಮಾನ್ ಭೇಟಿಯಾದ ಸಂತಸದಲ್ಲಿ ಪ್ರೇಮ್, ಸಲ್ಮಾನ್ ಜೊತೆ ಒಂದಿಷ್ಟು ಫೋಟೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  ಸಲ್ಮಾನ್ ಖಾನ್ ಜೊತೆ ಸುದೀಪ್, ಪ್ರೇಮ್: ರಕ್ಷಿತಾ ಹೇಳಿದ್ದೇನು?

  ಇದನ್ನ ನೋಡುತ್ತಿದಂತೆ ಪ್ರೇಮ್ ಬಗ್ಗೆ ಒಂದು ದೊಡ್ಡ ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. 'ದಿ ವಿಲನ್' ನಿರ್ದೇಶಕ ಬಾಲಿವುಡ್ ಬ್ಯಾಡ್ ಬಾಯ್ ಗೆ ಅಕ್ಷನ್ ಕಟ್ ಹೇಳುತ್ತಿದ್ದಾರಂತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಭಿನಯ ಚಕ್ರವರ್ತಿ ಹೇಳಿದ್ದೇನು? ಈ ಸುದ್ದಿ ಕೇಳಿ ಚಿತ್ರಪ್ರಿಯರ ಪ್ರತಿಕ್ರಿಯೆ ಹೇಗಿದೆ? ಮುಂದೆ ಓದಿ..

  ಸಲ್ಮಾನ್ ಗೆ ಪ್ರೇಮ್ ನಿರ್ದೇಶನ

  ಸಲ್ಮಾನ್ ಗೆ ಪ್ರೇಮ್ ನಿರ್ದೇಶನ

  ಬಾಲಿವುಡ್ ನ ಟಾಪ್ ನಟ ಸಲ್ಮಾನ್ ಖಾನ್ ಕಾಲ್ ಶೀಟ್ ಸಿಗಬೇಕು ಅಂದ್ರೆ ತಿಂಗಳುಗಳೆ ಕಾಯಬೇಕು. ಸಲ್ಲು ಜೊತೆ ಸಿನಿಮಾ ಮಾಡಲು ಸ್ಟಾರ್ ನಿರ್ದೇಶಕರು, ನಿರ್ಮಾಪಕರು ಕ್ಯೂ ನಿಂತಿರುತ್ತಾರೆ. ಅಂತಹದ್ರಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ಜೋಗಿ ಪ್ರೇಮ್ ಅವರು ಸಲ್ಮಾನ್ ಖಾನ್ ಗೆ ಅಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಿಚ್ಚ ಸುದೀಪ್ ಜೊತೆ 'ದಬಾಂಗ್-3' ಸೆಟ್ ಗೆ ಎಂಟ್ರಿ ಕೊಟ್ಟಿದ್ದ ಪ್ರೇಮ್ ಸಲ್ಲು ಭಾಯ್ ಭೇಟಿಯಾಗಿ ಮಾತನಾಡಿಸಿದ್ದಾರೆ. ಈ ಮಾತುಕತೆ ಈಗ ಇಬ್ಬರು ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಮಟ್ಟಕ್ಕೆ ಸುದ್ದಿಯಾಗುತ್ತಿದೆಯಂತೆ.

  ರಕ್ಷಿತಾ ಅವರನ್ನ ಮತ್ತೆ ಮತ್ತೆ ಕಾಲೆಳೆದ ಅಭಿನಯ ಚಕ್ರವರ್ತಿ

  ಬ್ಯಾಡ್ ಬಾಯ್ ಗೆ ಸುದೀಪ್, ಜಾಕ್ ಮಂಜು ನಿರ್ಮಾಣ

  ಬ್ಯಾಡ್ ಬಾಯ್ ಗೆ ಸುದೀಪ್, ಜಾಕ್ ಮಂಜು ನಿರ್ಮಾಣ

  ಸುದೀಪ್ ಸದ್ಯ ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಿಚ್ಚನ ಬಗ್ಗೆ ಒಂದು ಸುದ್ದಿ ಹರಿದಾಡುವುದಕ್ಕೆ ಶುರುವಾಗಿದೆ. ಪ್ರೇಮ್ ಏನೋ ಸಲ್ಮಾನ್ ಖಾನ್ ಗೆ ನಿರ್ದೇಶನ ಮಾಡುತ್ತಾರೆ ಅಂತ ಸುದ್ದಿಯಾದ್ರೆ, ಈ ಸಿನಿಮಾಗೆ ಸುದೀಪ್ ಮತ್ತು ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಂತೆ. ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸುತ್ತಿರುವ ಕಿಚ್ಚ ಸಲ್ಲು ಭಾಯ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರಾ ಎಂದು ಅಚ್ಚರಿಪಡುವಂತಾಗಿದೆ.

  ಪ್ರೇಮ್ ನಿರ್ದೇಶನದ ಬಗ್ಗೆ ಸುದೀಪ್ ಹೇಳಿದ್ದೇನು?

  ಸಲ್ಮಾನ್ ಖಾನ್ ಗೆ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ, ಸುದೀಪ್ ಬಂಡವಾಳ ಹೂತಿದ್ದಾರೆ ಎನ್ನುವ ಸುದ್ದಿ ಕೇಳಿ ಕಿಚ್ಚ ಅಚ್ಚರಿಗೊಂಡ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. 'ಸಲ್ಮಾನ್ ಖಾನ್ ಸಿನಿಮಾಗೆ ಮಂಜು ಮತ್ತು ನಾನು ನಿರ್ಮಾಣ ಮಾಡುತ್ತಿದ್ದೀವಿ, ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ, ಇದು ಸುಳ್ಳು ಸುದ್ದಿ. ಪ್ರೇಮ್ ಕೇವಲ ನನ್ನ ಜೊತೆ ಬಂದು ಸಲ್ಮಾನ್ ಖಾನ್ ಭೇಟಿಯಾಗಿದ್ದಾರೆ. ಅದು ಅಲ್ಲಿಗೆ ಕೊನೆ ಆಗಿದೆ" ಎಂದು ಹೇಳುವ ಮೂಲಕ ಸುಳ್ಳುಸುದ್ದಿಗೆ ಬ್ರೇಕ್ ಹಾಕಿದ್ದಾರೆ ಕಿಚ್ಚ.

  ಸುದೀಪ್ ಮಾಡಿದ ಈ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿದ ರಕ್ಷಿತಾ

  ಸುದೀಪ್ ಸ್ಪಷ್ಟನೆಗೆ ಅಭಿಮಾನಿಗಳ ಪ್ರತಿಕ್ರಿಯೆ

  ಸುದೀಪ್ ಸ್ಪಷ್ಟನೆಗೆ ಅಭಿಮಾನಿಗಳ ಪ್ರತಿಕ್ರಿಯೆ

  ಸುದೀಪ್ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡುತ್ತಿದಂತೆ ಅಭಿಮಾನಿಗಳು ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. "ಮತ್ತೊಮ್ಮೆ ಪ್ರೇಮ್ ಜೊತೆ ಸಿನಿಮಾ ಮಾಡುತ್ತಿದ್ದೀರಾ ಎನ್ನುವ ಭಯ ಆಯ್ತು ಸರ್" ಅಂತ ಒಬ್ಬ ಅಭಿಮಾನಿ ಹೇಳಿದ್ರೆ, ಮತ್ತೋರ್ವ "ಇದು ಸುಳ್ಳು ಸುದ್ದಿ ಅಂತ ಗೊತ್ತಿರೋದೆ ಈ ಬಗ್ಗೆ ಸ್ಪಷ್ಟನೆ ನೀಡುವ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ. ಈ "ಸುದ್ದಿ ಕೇಳಿಯೇ ಭಯ ಆಗುತ್ತಿದೆ, ಮತ್ತೊಮ್ಮೆ ಪ್ರೇಮ್ ಜೊತೆ ಸಿನಿಮಾ ಮಾಡಬೇಡಿ" ಎಂದು ಅನೇಕರು ಮನವಿ ಮಾಡಿಕೊಂಡಿದ್ದಾರೆ.

  ಏಕ್ ಲವ್ ಯಾ ಸಿನಿಮಾದಲ್ಲಿ ಪ್ರೇಮ್ ಬ್ಯುಸಿ

  ಏಕ್ ಲವ್ ಯಾ ಸಿನಿಮಾದಲ್ಲಿ ಪ್ರೇಮ್ ಬ್ಯುಸಿ

  ನಿರ್ದೇಶಕ ಪ್ರೇಮ್ 'ದಿ ವಿಲನ್' ಸಿನಿಮಾದ ನಂತರ 'ಏಕ್ ಲವ್ ಯಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅಭಿನಯಿಸುತ್ತಿರುವ 'ಏಕ್ ಲವ್ ಯಾ' ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೆ ಟೈಟಲ್ ಟೀಸರ್ ರಿವೀಲ್ ಮಾಡಿರುವ ಪ್ರೇಮ್ ಕಲಾವಿದರ ಆಯ್ಕೆಯಲ್ಲಿ ನಿರತರಾಗಿದ್ದಾರೆ. ಪ್ರೇಮ್ ಸಿನಿಮಾ ಅಂದ್ಮೇಲೆ ಕಲಾವಿದರ ಆಯ್ಕೆ ವಿಚಾರದಲ್ಲಿ ಭಾರಿ ಕುತೂಹಲ ಮೂಡಿಸುತ್ತಾರೆ. ಬೇರೆ ಬೇರೆ ಭಾಷೆಯ ನಟಿಮಣಿಯರನ್ನು ಕರೆತರುವ ಪ್ರೇಮ್ ಈ ಬಾರಿ ಯಾರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿದೆ.

  English summary
  Kannada actor Sudeep clarify to prem on directing to Bollywood actor Salman Khan and Sudeep and Jack Manju producing movie. Sudeep said that there is no truth to it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X