ಪುನೀತ್, ಯಶ್, ದರ್ಶನ್, ಶಿವಣ್ಣನಿಗೆ ಸುದೀಪ್ ನೀಡಿದ ಸಲಹೆ ಏನು ಗೊತ್ತಾ?
Recommended Video
ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ನಟನಿಗೆ ಇನ್ನೊಬ್ಬ ನಟ ಸಾಥ್ ಕೊಡೋದು, ಒಬ್ಬರ ಚಿತ್ರದಲ್ಲಿ ಇನ್ನೊಬ್ಬ ನಟ ಅಭಿನಯಿಸುವುದು, ಒಬ್ಬರ ಸಿನಿಮಾ ಆಡಿಯೋ, ಟ್ರೈಲರ್ ಇನ್ನೊಬ್ಬ ನಟ ಲಾಂಚ್ ಮಾಡುವುದು ಸಾಮಾನ್ಯ. ಇದು ಕನ್ನಡ ಇಂಡಸ್ಟ್ರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ನಡೆಯುತ್ತಿದೆ.
ಒಂದು ಸಮಯದಲ್ಲಿ ಸ್ಟಾರ್ ವಾರ್ ಎನ್ನುವುದು ಸಣ್ಣಪುಟ್ಟ ನಟರಿಂದ, ದೊಡ್ಡ ಸ್ಟಾರ್ ಗಳ ವರೆಗೂ ಇತ್ತು. ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ಕೊಡ್ತಿದ್ದು ಬಹಳ ಕಮ್ಮಿ. ಈಗ ಕಾಲ ಬದಲಾಗಿದೆ. ಪರಸ್ಪರ ಸಲಹೆ, ಪ್ರೋತ್ಸಾಹ ನೀಡುವುದು ಗಮನ ಸೆಳೆಯುತ್ತೆ.
ಇದೀಗ, ಕಿಚ್ಚ ಸುದೀಪ್ ಅವರು ಕನ್ನಡದ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ದರ್ಶನ್, ಯಶ್ ಅವರಿಗೆ ಸಂದರ್ಶನವೊಂದರಲ್ಲಿ ಸಲಹೆ ನೀಡಿದ್ದಾರೆ. ಯಾರು ಏನು ಮಾಡಿದ್ರೆ ಚೆಂದ ಎಂದು ಹೇಳಿಕೊಂಡಿದ್ದಾರೆ. ಹಾಗಿದ್ರೆ, ಯಾವ ನಟನಿಗೆ ಸುದೀಪ್ ಏನು ಸಲಹೆ ಕೊಟ್ಟರು ಮುಂದೆ ಓದಿ...

ಶಿವಣ್ಣನಿಗೆ ಕಥೆಗಳು ಕಾಯುತ್ತಿದೆ
''ಶಿವರಾಜ್ ಕುಮಾರ್ ಅವರಿಗಾಗಿ ಒಳ್ಳೊಳ್ಳೆ ಕಥೆಗಳನ್ನ ಸಿದ್ಧ ಮಾಡಿಕೊಂಡು ಕೆಲವು ಪ್ರತಿಭಾನ್ವಿತ ನಿರ್ದೇಶಕರು ಕಾಯ್ತಿದ್ದಾರೆ. ಬಹುಶಃ ಶಿವಣ್ಣ ಅವರ ಬಳಿ ಅವರ ತಲುಪಲು ಸಾಧ್ಯವಾಗುತ್ತಿಲ್ಲ. ಇಂತವರನ್ನ ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಯಸ್ ಎನ್ನುವ ಸ್ವಭಾವ. ಅದು ಕೆಟ್ಟದು ಮತ್ತು ಒಳ್ಳೆಯದು ಇದು. ನೋ ಎನ್ನುವುದನ್ನ ಶಿವಣ್ಣ ಅಭ್ಯಾಸ ಮಾಡಿಕೊಳ್ಳಬೇಕು'' ಎಂದು ಸುದೀಪ್ ಸಲಹೆ ನೀಡಿದರು.

ಪೆನ್ ಹಿಡಿದ್ರೆ ಮ್ಯಾಜಿಕ್ ಮಾಡಬಲ್ಲರು
''ಉಪೇಂದ್ರ ಅವರು ಮನಸ್ಸು ಮಾಡಿದ್ರೆ ಕನ್ನಡ ಚಿತ್ರರಂಗವನ್ನ ಇನ್ನು ಎತ್ತರಕ್ಕೆ ಕರೆದುಕೊಂಡು ಹೋಗಬಹುದು. ಅವರು ಪೆನ್ ಹಿಡಿದ್ರೆ ಅದ್ಭುತ. ಮ್ಯಾಜಿಕ್ ಮಾಡ್ತಾರೆ. ಹಾಗಂತ ನಿರ್ದೇಶನ ಮಾಡಬೇಕೆಂದಲ್ಲ. ಅವರಲ್ಲಿರುವ ಅದ್ಭುತಕ್ಕೆ ವಾಪಸ್ ಬರಬೇಕು'' ಎಂದು ಸಲಹೆ ನೀಡಿದರು.

ಪುನೀತ್ ಸ್ವಲ್ಪ ತಪ್ಪು ಮಾಡಿ
''ಪುನೀತ್ ಅವರನ್ನ ನೋಡಿದಾಗ ನನಗೆ ಹೊಟ್ಟೆ ಉರಿಯುತ್ತೆ. ಯಾವ ವಿಷ್ಯದಲ್ಲೂ, ಎಲ್ಲೂ ಕೆಟ್ಟವರು ಆಗದೇ, ಯಾವ ವಿವಾದಕ್ಕೂ ಸಿಲುಕಿಕೊಳ್ಳದ ಏಕೈಕ ವ್ಯಕ್ತಿತ್ವ. ಯಾವುದರಲ್ಲೂ ತಲೆ ಹಾಕದ ಸ್ವೀಟ್ ವ್ಯಕ್ತಿ. ಅವರು ಸ್ವಲ್ಪ ತಪ್ಪು ಮಾಡಬೇಕು'' ಎಂದು ಪುನೀತ್ ಅವರ ಕಾಲೆಳೆದರು.

ಯಶ್ ಬ್ರಲಿಯೆಂಟ್
''ಗುರಿಯನ್ನ ತಲುಪುವುದು ಹೇಗೆ ಎಂಬುದು ಯಶ್ ಅವರಿಗೆ ಗೊತ್ತಿದೆ. ಸದ್ಯಕ್ಕೆ ಅವರು ಒಳ್ಳೆಯ ಪತಿ ಮತ್ತು ತಂದೆ. ಅದ್ಭುತ ಕೆಲಸ ಮಾಡ್ತಿದ್ದಾರೆ. ಅವರಿಗೆ ನಾನು ಸಲಹೆ ಕೊಡುವುದಕ್ಕಿಂತ ಶುಭಾಶಯ ತಿಳಿಸುತ್ತೇನೆ'' ಎಂದರು.

ಮನಸ್ಸು ಮಾತು ಕೇಳಬೇಕು ದರ್ಶನ್
ದರ್ಶನ್ ಅವರಲ್ಲಿ ತುಂಬಾ ಒಳ್ಳೆಯ ಮನಸ್ಸಿದೆ. ನಾನು ಕನೆಕ್ಟ್ ಆಗಿದ್ದು ಅದೇ ಕಾರಣಕ್ಕೆ. ಈಗಲೂ ಆ ಮನಸ್ಸು ಮಾತು ಕೇಳಿ ಹೆಜ್ಜೆ ಇಟ್ಟರೇ ಎಲ್ಲ ವಿಚಾರದಲ್ಲೂ ಹತ್ತು ಪಟ್ಟು ಎತ್ತರಕ್ಕೆ ಹೋಗ್ತಾರೆ. ಈ ಮನಸ್ಸು ಮಾತು ಕೇಳಿ ಮುಂದೆ ಸಾಗಿದರೇ, ಇನ್ನು ಹೆಚ್ಚು ಸಾಧನೆ ಮಾಡ್ತಾರೆ'' ಎಂದು ಸುದೀಪ್ ಸಲಹೆ ನೀಡಿದ್ರು.


Click it and Unblock the Notifications











