ರಿಯಲ್ ಸ್ಟಾರ್ ಉಪೇಂದ್ರಗೆ ಸುದೀಪ್ ಹಾಕಿದರು ಚಾಲೆಂಜ್
Recommended Video

ಕೇಂದ್ರ ಸಚಿವ ರಾಜ್ಯಸಿಂಗ್ ರಾಥೋಡ್ ಹಾಕಿದ ಚಾಲೆಂಜ್ ಈಗ ನರೇಂದ್ರ ಮೋದಿ ಅವರ ವರೆಗೆ ಬಂದಿದೆ. ಆದರೆ ಈಗ ನಟ ಸುದೀಪ್ ಕೂಡ ಹೊಸ ಚಾಲೆಂಜ್ ಶುರು ಮಾಡಿದ್ದಾರೆ. ಸದ್ಯ ಸುದೀಪ್ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಅನ್ನು ಪ್ರಾರಂಭ ಮಾಡಿದ್ದು, ನಟ ಉಪೇಂದ್ರಗೆ ಚಾಲೆಂಜ್ ಮಾಡಿದ್ದಾರೆ.
'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಎಂದರೆ, ಈ ಚಾಲೆಂಜ್ ಸ್ವೀಕರಿಸಿದವರು ಸದ್ಯ ಈಗಿನ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ಅನಂತರ ಪ್ರತಿ ನಿತ್ಯ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರದ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎಂದು ತೋರಿಸಬೇಕು. ಇಂತಹ ಚಾಲೆಂಜ್ ಈಗ ಉಪ್ಪಿ ಬಳಿ ಬಂದಿದೆ.
ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ನಾನು 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಅನ್ನು ನಿಮಗೆ (ಉಪೇಂದ್ರ) ನೀಡುತ್ತಿದ್ದೇನೆ. ನೀವು ಯಾವಾಗಲೂ ತುಂಬ ಫಿಟ್ ಆಗಿದ್ದೀರಾ. ಈ ಮೂಲಕ ನೀವು ಇನ್ನೂ ಅನೇಕರಿಗೆ ಸ್ಫೂರ್ತಿ ನೀಡಬಹುದು ಎಂದಿದ್ದಾರೆ.

ಅಂದಹಾಗೆ, ಈಗಾಗಲೇ ಸುದೀಪ್ ಅವರ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಅನ್ನು ಈಗಾಗಲೇ ನಿರ್ದೇಶನರಾದ ಕೃಷ್ಣ, ಪವನ್ ಒಡೆಯರ್ ಹಾಗೂ ನಿರ್ಮಾಪಕ ಕಾರ್ತಿಕ್ ಸ್ವೀಕರಿಸಿದ್ದಾರೆ.


Click it and Unblock the Notifications











