ಗೆಳೆಯ ಗುರುಕಿರಣ್ ಗೆ ಚಾಲೆಂಜ್ ಹಾಕಿದ ಸುದೀಪ್

By Naveen

ಸಂಗೀತ ನಿರ್ದೇಶಕ ಗುರುಕಿರಣ್ ಎರಡು ದಿನಗಳ ಹಿಂದೆಯಷ್ಟೆ ಟ್ವಿಟ್ಟರ್ ಗೆ ಕಾಲಿಟ್ಟರು. ಆದರೆ ಟ್ವಿಟ್ಟರ್ ಬಂದ ತಕ್ಷಣ ಗುರುಕಿರಣ್ ಗೆ ನಟ ಸುದೀಪ್ ಚಾಲೆಂಜ್ ಹಾಕಿದ್ದಾರೆ. ತಮ್ಮ BringOutThePailwaanInYou ಚಾಲೆಂಜ್ ಅನ್ನು ಕಿಚ್ಚ ಈಗ ಗುರುಕಿರಣ್ ಮುಂದೆ ಇಟ್ಟಿದ್ದಾರೆ.

ಈಗಾಗಲೇ ಸುದೀಪ್ ಅವರ ಸವಾಲನ್ನು ನಟ ಉಪೇಂದ್ರ, ನಿರ್ದೇಶಕ ಕೃಷ್ಣ, ನಟ ನವೀನ್ ಕೃಷ್ಣ ಸೇರಿದಂತೆ ಅನೇಕರು ಸ್ವೀಕರಿಸಿದ್ದು, ಈಗ ಗುರುಕಿರಣ್ ಕೂಡ ಚಾಲೆಂಜ್ ಸ್ವೀಕರಿಸಲು ಸಿದ್ಧರಾಗಿದ್ದಾರೆ.

sudeep has made a bring out the pailwaan in you challenge to gurukiran

ಅಂದಹಾಗೆ, ಸುದೀಪ್ ಹಾಗೂ ಗುರುಕಿರಣ್ ನಿನ್ನೆ ಮೊನ್ನೆಯ ಸ್ನೇಹಿತರಲ್ಲ. ಚಿತ್ರರಂಗಕ್ಕೆ ಬರುವ ಮುಂಚೆಯೇ ಅವಕಾಶಕ್ಕಾಗಿ ಇಬ್ಬರು ಅದೆಷ್ಟೋ ನಿರ್ದೇಶಕರ ಮನೆ ಮನೆಗೆ ಒಟ್ಟಿಗೆ ಅಲೆದಿದ್ದಾರೆ. ಅದರ ಬಳಿಕ ಸುದೀಪ್ ಸ್ಟಾರ್ ಆದರೆ ಗುರು ಸ್ಟಾರ್ ಕಂಪೋಸರ್ ಆದರು. ಎಷ್ಟು ಎತ್ತರಕ್ಕೆ ಬಳೆದರು ಇಬ್ಬರ ಸ್ನೇಹ ಅದೇ ರೀತಿ ಇದೆ.

ಇನ್ನು ಸದ್ಯ ಹೊಸದಾಗಿ ಟ್ವಿಟ್ಟರ್ ಖಾತೆ ತೆರೆದಿರುವ ಗುರುಕಿರಣ್ ಏಳು ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ನಟ ಉಪೇಂದ್ರ, ಸುದೀಪ್, ಚಿರಂಜೀವಿ ಸರ್ಜಾ, ಪ್ರಿಯಾಂಕ ಉಪೇಂದ್ರ, ಚೈತನ್ಯ, ರಾಜೇಶ್ ಕೃಷ್ಣನ್ ಹಾಗೂ ಪತ್ನಿ ಪಲ್ಲವಿ ಶೆಟ್ಟಿ ರನ್ನು ಗುರುಕಿರಣ್ ಟ್ವಿಟ್ಟರ್ ನಲ್ಲಿ ಹಿಂಬಾಲಿಸುತ್ತಿದ್ದಾರೆ.

More from Filmibeat

English summary
Kannada actor Sudeep has made a Bring Out The Pailwaan In You challenge to music director Gurukiran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X