ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ ಕಿಚ್ಚ ಸುದೀಪ್

By Pavithra

Recommended Video

ಸುದೀಪ್‌ರಿಂದ ಬಂತು ಹೊಸದೊಂದು ಚಾಲೆಂಜ್ ..! | FIlmibeat Kannada

ನಟ ಕಿಚ್ಚ ಸುದೀಪ್ ಕೇವಲ ಸಿನಿಮಾಗಳಲ್ಲಿ ನಟನೆ ಮಾಡುವುದು ಮಾತ್ರವಲ್ಲದೆ ಸಿನಿಮಾರಂಗದ ಸ್ನೇಹಿತರ ಜೊತೆಯಲ್ಲಿ ಸೇರಿ ಹೊಸ ಕೆಲಸಗಳನ್ನು ಮಾಡುತ್ತಿರುತ್ತಾರೆ. ತಾವಷ್ಟೇ ಅಲ್ಲದೆ ತಮ್ಮ ಆಪ್ತರನ್ನು ಒಟ್ಟಾಗಿ ಸೇರಿಸಿಕೊಂಡು ಎಲ್ಲರೂ ಸದಾ ಚುರುಕಾಗಿರುವಂತೆ ನೋಡಿಕೊಳ್ಳುತ್ತಾರೆ.

ಸಿನಿಮಾರಂಗದಲ್ಲಿ ಹಾಗೂ ನಿಜ ಜೀವನದಲ್ಲಿ ಸದಾ ಆಕ್ಟಿವ್ ಆಗಿರುವ ಸುದೀಪ್ ಹಿರಿಯರಿಂದ ಹಿಡಿದು ಕಿರಿಯರವರೆಗೂ ಪ್ರತಿಯೊಬ್ಬರಿಗೂ ಮೆಚ್ಚುಗೆ ಆಗುತ್ತಾರೆ. ಸದ್ಯ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದವರಿಗೆ ಹೊಸದೊಂದು ಚಾಲೆಂಜ್ ಹಾಕಿದ್ದಾರೆ.

ಇತ್ತೀಚಿಗಷ್ಟೆ ಕೇಂದ್ರ ಸಚಿವ ರಾಜ್ಯಸಿಂಗ್ ರಾಥೋಡ್ ಹಾಕಿದ ಚಾಲೆಂಜ್ ಸ್ವೀಕರಿಸಿ ತಮ್ಮ ಸ್ನೇಹಿತರಿಗೂ ಚಾಲೆಂಜ್ ಹಾಕಿದ್ದರು ಸುದೀಪ್. ಆದರೆ, ಸದ್ಯ ಸುದೀಪ್ ಅವರೇ ಹೊಸ ಸವಾಲು ಹಾಕಿದ್ದಾರೆ. ಅದಕ್ಕೆ ಸ್ಯಾಂಡಲ್ ವುಡ್ ನ ನಿರ್ದೇಶಕರು, ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಚಿತ್ರರಂಗದವರಿಗೆ ಕಿಚ್ಚನ ಸವಾಲು

ಚಿತ್ರರಂಗದವರಿಗೆ ಕಿಚ್ಚನ ಸವಾಲು

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಸಿನಿಮಾರಂಗದವರಿಗೆ ಹೊಸ ಸವಾಲು ಹಾಕಿದ್ದಾರೆ. ತಮ್ಮ ಸುತ್ತಮುತ್ತಲಿನವರನ್ನು ಫಿಟ್ ಆಗಿಡುವುದು ಸುದೀಪ್ ಅವರ ಉದ್ದೇಶವಾಗಿದೆ. ಅದಕ್ಕಾಗಿಯೇ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಚಾಲೆಂಜ್ ಎಲ್ಲರಿಗೂ ಹಾಕಿದ್ದಾರೆ.

ಏನಿದು 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು'

ಏನಿದು 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು'

'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಎಂದರೆ ಸದ್ಯ ಈಗಿನ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ಅನಂತರ ಪ್ರತಿ ನಿತ್ಯ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರದ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆ ಫೋಟೋ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತೆ ಆಗದೆ ಎಂದು ತೋರಿಸಬೇಕು.

ಸವಾಲು ಸ್ವೀಕರಿಸಿದ ಪವನ್ ಒಡೆಯರ್

ಸವಾಲು ಸ್ವೀಕರಿಸಿದ ಪವನ್ ಒಡೆಯರ್

ಸುದೀಪ್ ಮೊದಲಿಗೆ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್, ಅನೂಪ್ ಭಂಡಾರಿ ಹಾಗೂ ನಟ ರಾಜೀವ್ ಅವರಿಗೆ ಸವಾಲು ಹಾಕಿದ್ದಾರೆ. ಮೊದಲ ದಿನವೇ ಪವನ್ ಒಡೆಯರ್ ಹಾಗೂ ಕಾರ್ತಿಕ್ ಚಾಲೆಂಜ್ ಅನ್ನು ಸ್ವೀಕಾರ ಮಾಡಿದ್ದಾರೆ.

ವರ್ಕ್ ಔಟ್ ಶುರು ಮಾಡಿದ ಕೃಷ್ಣ

ವರ್ಕ್ ಔಟ್ ಶುರು ಮಾಡಿದ ಕೃಷ್ಣ

'ಪೈಲ್ವಾನ್' ಸಿನಿಮಾ ನಿರ್ದೇಶಕ 'ಹೆಬ್ಬುಲಿ' ಕೃಷ್ಣ ಕೂಡ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಸ್ವೀಕರಿಸಿದ್ದು, ಇಂದಿನಿಂದಲೇ ಫಿಟ್ ಆಗಿರಲು ವರ್ಕ್ ಔಟ್ ಶುರು ಮಾಡಿದ್ದಾರೆ. ಇದನ್ನ ತಿಳಿದ ಕಿಚ್ಚ ಅವರಿಗೆ ಐದು ಕೆಜಿ ತೂಕ ಇಳಿಸಿಲು ಸೂಚನೆ ಕೊಟ್ಟಿದ್ದಾರೆ.

More from Filmibeat

English summary
Kannada actor Kiccha Sudeep has made a new challenge for the Kannada film industry. Director Pawan Wadeyar and producer Karthik Gowda have accepted Sudeep's 'Bring Out The Pailwan In You' challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X