ಕಿಚ್ಚ ಸುದೀಪ್ ಇದುವರೆಗೂ ಯಾವುದೇ ಪುಸ್ತಕ ಓದಿಲ್ಲವಂತೆ!

By Naveen

ನಟ ಕಿಚ್ಚ ಸುದೀಪ್ ಇದುವರೆಗೆ ಯಾವುದೇ ಪುಸ್ತಕಗಳನ್ನು ಓದಿಲ್ಲವಂತೆ ಈ ವಿಷಯವನ್ನು ಸ್ವತಃ ಅವರೇ ನಗುತ್ತಾ ಹೇಳಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಇರುವ 'ನಾನು ಪಾರ್ವತಿ' ಪುಸ್ತಕ ಬಿಡುಗಡೆಗೆ ಬಂದಿದ್ದ ಸುದೀಪ್ ಒಂದು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.

''ನಾನು ಇದುವರೆಗೆ ಯಾವ ಬುಕ್ ಓದಿಲ್ಲ. ಆದರೆ ಈ ಬುಕ್ ಖಂಡಿತ ಓದುತ್ತೇನೆ.'' ಎಂದು ಹೇಳಿದ ಸುದೀಪ್ ಒಂದು ಘಟನೆಯನ್ನು ನೆನಪು ಮಾಡಿಕೊಂಡರು. ''ನನಗೆ ಮತ್ತು ಪುಸ್ತಕಕ್ಕೆ ಆಗಿ ಬರುವುದಿಲ್ಲ. ಕಾಲೇಜ್ ಪುಸ್ತಕ ಬಿಟ್ಟು ನಾನು ಬೇರೆ ಯಾವ ಪುಸ್ತಕವನ್ನು ಓದಿಲ್ಲ. ಒಮ್ಮೆ ಹಾಗೆ ಪುಸ್ತಕ ಅಂಗಡಿಗೆ ಹೋದಾಗ ಯಾವ ಲೇಖಕರ ಹೆಸರು ತಿಳಿಯದೆ ದೊಡ್ಡ ಪುಸ್ತಕ ಕೊಡಿ ಅಂತ ಕೇಳಿದ್ದೆ. ಅವರು ಒಂದು ಇಂಗ್ಲೀಷ್ ಕಾದಂಬರಿ ಕೊಟ್ಟರು. ಅದನ್ನು ಓದುವುದಕ್ಕೆ ಶುರು ಮಾಡಿ ಹತ್ತು ಪುಟ ಓದಿದೆ. ಆದರೆ ಏನು ಅರ್ಧ ಆಗಲಿಲ್ಲ. ಅಲ್ಲಿಂದ ನಾನು ಪುಸ್ತಕವನ್ನು ಓದುವುದಕ್ಕೆ ಹೋಗಿಲ್ಲ.'' ಎಂದು ಕಾಮಿಡಿಯಾಗಿ ತಮ್ಮ ಸ್ಟೈಲ್ ನಲ್ಲಿ ಸುದೀಪ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ.

Sudeep has not read any books yet

ಅಂದಹಾಗೆ, ಈ ವೇಳೆ ಪುಸ್ತಕದ ಬಗ್ಗೆ ಮಾತು ಶುರು ಮಾಡಿದ ಸುದೀಪ್ ''ನಾನು ಓಪನ್ ಆಗಿ ಮಾತಾಡ್ಲಾ'' ಎಂದು ಶಿವರಾಜ್ ಕುಮಾರ್ ಜೊತೆ ಈ ಹಿಂದೆ ಇದ್ದ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ''ಪಾರ್ವತಮ್ಮ ರಾಜ್ ಕುಮಾರ್ ಅವರ ಸಾಧನೆ ಮುಂದೆ ನಾನು ತುಂಬ ಚಿಕ್ಕವನು. ಈ ಬುಕ್ ಕೈ ನಲ್ಲಿ ಹಿಡಿಯುವ ತನಕ ಅದರ ತೂಕ ನನಗೆ ಗೊತ್ತಾಗಿರಲಿಲ್ಲ. ಈ ಬುಕ್ ನಲ್ಲಿರುವ ವಿಷಯವನ್ನು ಜೀವನದಲ್ಲಿ ಅಳವಡಿಸಿ ಕೊಂಡ ಮೇಲೆ ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಅರ್ಹನಾಗುತ್ತೇನೆ.'' ಎಂದು ಸುದೀಪ್ ಹೇಳಿದ್ದಾರೆ.

More from Filmibeat

English summary
Actor Sudeep released Writer Jogi's 'Nanu Parvati' book. the book 'Nanu Parvati' is about Parvathamma Rajkumar. and Sudeep says he has not read any books yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X