ಲಕ್ಷಾಂತರ ಅಭಿಮಾನಿಗಳಿರುವ ಕಿಚ್ಚ ಫಾಲೋ ಮಾಡೋದು ಈ ಇಬ್ಬರನ್ನ !
Recommended Video

ಕಿಚ್ಚ ಸುದೀಪ್ ಪ್ರತಿನಿತ್ಯ ಹೊಸ ಹೊಸ ಅಭಿಮಾನಿಗಳನ್ನು ಸಂಪಾದನೆ ಮಾಡುತ್ತಿರುವ ಕನ್ನಡದ ನಟ. ಇವರ ನೇರ ನುಡಿಯ ಸ್ವಭಾವವೇ ಅದೆಷ್ಟೋ ಜನರಿಗೆ ಇವರನ್ನು ಫಾಲೋ ಮಾಡಬೇಕು ಎನ್ನುವ ಮನಸ್ಸಾಗಲು ಕಾರಣವಾಗುತ್ತೆ. ಯಾವುದೇ ಗಾಡ್ ಫಾದರ್ ಇಲ್ಲದೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉತ್ಸಾಹವನ್ನು ತುಂಬುತ್ತದೆ. ಇದೇ ನೇರ ನುಡಿಯ ನಾಯಕ ಈಗ ಮತ್ತೊಂದು ಮೈಲಿಗಲ್ಲನ್ನು ಸೃಷ್ಠಿ ಮಾಡಿದ್ದಾರೆ.
ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್ ಈಗ ಇನ್‌ಸ್ಟಾಗ್ರಾಂ ನಲ್ಲಿ ತಮ್ಮದೇ ದಾಖಲೆ ಬರೆದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಕಿಚ್ಚನನ್ನು ಫಾಲೋ ಮಾಡಿದರೆ ಸುದೀಪ್ ಮಾತ್ರ ಈ ಇಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಕಿಚ್ಚ ಫಾಲೋ ಮಾಡುತ್ತಿರುವುದು ಯಾರನ್ನ? ಸುದೀಪ್ ಇವರನ್ನೇ ಫಾಲೋ ಮಾಡಲು ಕಾರಣವೇನು ಎಲ್ಲದಕ್ಕೂ ಉತ್ತರ ಮುಂದಿದೆ ಓದಿ...

ಕಿಚ್ಚನಿಗೆ ಇನ್‌ಸ್ಟಾಗ್ರಾಂ ನಲ್ಲಿ ಹೆಚ್ಚಾದರು ಫ್ಯಾನ್ಸ್
ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಏಕೈಕ ನಟ ಕಿಚ್ಚ ಸುದೀಪ್. ಸುದೀಪ್ ಅಭಿಮಾನಿಗಳು ಕಿಚ್ಚನ ಪ್ರತಿ ನಡೆಯನ್ನು ಫಾಲೋ ಮಾಡುವುದರ ಜೊತೆಗೆ ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಟ್ವಿಟ್ಟರ್, ಫೇಸ್ ಬುಕ್, ಗೂಗಲ್ ಫ್ಲಸ್ ನ ನಂತರ ಸುದೀಪ್ ಅವರಿಗೆ ಇನ್‌ಸ್ಟಾಗ್ರಾಂ ನಲ್ಲಿಯೂ ಅಭಿಮಾನಿಗಳು ಹೆಚ್ಚಾಗಿದ್ದಾರೆ.

ಇನ್‌ಸ್ಟಾಗ್ರಾಂ ನಲ್ಲಿ 1 ಲಕ್ಷ ಅಭಿಮಾನಿಗಳು
ಸುದೀಪ್ ಅವರ ಇನ್‌ಸ್ಟಾಗ್ರಾಂ ನಲ್ಲಿ 1 ಲಕ್ಷ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಆಗಾಗ ಮಾತ್ರ ಇನ್‌ಸ್ಟಾಗ್ರಾಂ ನಲ್ಲಿ ವಿಚಾರಗಳನ್ನು ಶೇರ್ ಮಾಡುತ್ತಿದ್ದ ಸುದೀಪ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ಸುದ್ದಿಗಳನ್ನು ಹಾಗೂ ತಾವು ಕ್ಲಿಕ್ ಮಾಡಿರುವ ಫೋಟೋಗಳನ್ನು ಹಾಕುತ್ತಿದ್ದಾರೆ.

ಏನೆಲ್ಲಾ ಇದೆ ಕಿಚ್ಚನ ಇನ್‌ಸ್ಟಾಗ್ರಾಂ ನಲ್ಲಿ
ಸುದೀಪ್ ಇನ್‌ಸ್ಟಾಗ್ರಾಂ ನಲ್ಲಿ ಹೆಚ್ಚಿನ ಮಾಹಿತಿ ಇಲ್ಲವಾದರೂ, ವಿಶೇಷವಾಗಿರುವ ಫೋಟೋಗಳಿವೆ. ಇದರಿಂದಲೇ ಕಿಚ್ಚ ಸುದೀಪ್ ಫೋಟೋಗ್ರಫಿ ಬಗ್ಗೆ ಎಷ್ಟು ಒಲವಿದೆ ಎನ್ನುವುದು ತಿಳಿದು ಬರುತ್ತೆ. ಸುದೀಪ್ ಅವರೇ ಖುದ್ದಾಗಿ ತೆಗೆದಿರುವ ಅನೇಕ ಫೋಟೋಗಳ ಕಲೆಕ್ಷನ್ಸ್ ಈ ಅಕೌಂಟ್ ನಲ್ಲಿದೆ.

ಸುದೀಪ್ ಫಾಲೋ ಮಾಡುತ್ತಿರುವುದು ಇವರನ್ನ ಮಾತ್ರ.
ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇವರಿಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ತಮ್ಮ ಮಗಳಾದ ಸಾನ್ವಿ ಹಾಗೂ ಫ್ಯಾಶನ್ ಫೋಟೋಗ್ರಾಫರ್
ಡ್ಯಾರೆನ್ ಸೆಂಟೊಫಾಂಟಿ ಇಬ್ಬರನ್ನು ಮಾತ್ರ ಸುದೀಪ್ ಫಾಲೋ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.


Click it and Unblock the Notifications











