ಕಿಚ್ಚ ಬಿಡುಗಡೆ ಮಾಡಿದ ಹೊಸ ನಾಗರಹಾವು ಟೀಸರ್

By Pavithra

ಸಾಹಸಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯದ ಚೊಚ್ಚಲ 'ನಾಗರಹಾವು' ಸಿನಿಮಾ ಹೊಸ ಅವತರಣಿಕೆಯಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹಳೆ ಸಿನಿಮಾವನ್ನು ಹೊಸ ತಂತ್ರಜ್ಙಾನದಲ್ಲಿ ಬೆಳ್ಳೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದು ಇಂದು ಟ್ವಿಟ್ಟರ್ ಮೂಲಕ ಕಿಚ್ಚ ಸುದೀಪ್ ಹೊಸ ತಂತ್ರಜ್ಙಾನದಲ್ಲಿ ಸಿದ್ದವಾರುವ 'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಹೊಸ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ 'ನಾಗರಹಾವು' ಚಿತ್ರದ ಟೀಸರ್ ಝಲಕ್ ಅಭಿಮಾನಿಗಳ ಮುಂದೆ ಬಂದಿದೆ. ಹೊಸ ಅವತಾರದಲ್ಲಿ ವಿಷ್ಣುದಾದರನ್ನ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Sudeep has released Nagarahavu teaser by Twitter.

'ನಾಗರಹಾವು' ಸಿನಿಮಾವನ್ನು ನಿರ್ಮಾಪಕ ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಈಗ ಅವರ ಎರಡನೇ ಪುತ್ರ, ರವಿಚಂದ್ರನ್ ಸಹೋದರ ಬಾಲಾಜಿ ಈ ಚಿತ್ರವನ್ನು ಮತ್ತೆ ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ.

ಟ್ವಿಟ್ಟರ್ ಮೂಲಕ ಟೀಸರ್ ಬಿಡುಗಡೆ ಮಾಡಿರುವ ಸುದೀಪ್ "ವಿಷ್ಣುವರ್ಧನ್ ಅವರು ಅಪರೂಪದ ನಟರಲ್ಲಿ ಒಬ್ಬರು. ಇಂದಿಗೂ ಕೂಡ ಕೋಟ್ಯಾನುಕೋಟಿ ಅಭಿಮಾನಿ ಹೃದಯದಲ್ಲಿ ನೆಲೆಸಿರುವ ಕಲಾವಿದ. ನನ್ನ ಸ್ಫೂರ್ತಿಯಂತಿರುವ ವಿಷ್ಣುವರ್ಧನ್ ಅಭಿನಯದ ಟೀಸರ್ ಬಿಡುಗಡೆ ಮಾಡಲು ಸಂತೋಷವಾಗಿದೆ. ಹೊಸ ಅವತಾರದಲ್ಲಿ 'ನಾಗರಹಾವು' ಸಿನಿಮಾ. ರಾಮಚಾರಿ ಮರಳಿ ಬಂದಿದ್ದಾನೆ ದಾರಿ ಮಾಡಿ ಕೊಡಿ" ಎಂದಿದ್ದಾರೆ.

Sudeep has released Nagarahavu teaser by Twitter.

ಸದ್ಯ ಟೀಸರ್ ಬಿಡುಗಡೆ ಮಾಡಿರುವ ನಿರ್ಮಾಪಕ ಬಾಲಾಜಿ ಚಿತ್ರ ಬಿಡುಗಡೆಯ ಬಗ್ಗೆ ಯಾವುದೇ ಸುಳಿವು ಕೊಟ್ಟಿಲ್ಲ ಆದರೆ ಚಿತ್ರದ ಬಗ್ಗೆ ಕ್ರೇಜ್ ಮಾತ್ರ ಹೆಚ್ಚಾಗಿದೆ. ಅಭಿಮಾನಿಗಳು ಸಿನಿಮಾರಂಗದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರ ನೋಡಲು ಕಾತುರರಾಗಿದ್ದಾರೆ.

More from Filmibeat

English summary
Kannada actor Vishnuvardhan's Nagarahavu movie new version teaser release. Kichcha Sudeep has released a teaser by Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X