'ಸೈರಾ' ಸೆಟ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

By Pavithra

Recommended Video

ಸೈರಾ ಮೊದಲ ದಿನದ ಶೂಟಿಂಗ್ ಬಗ್ಗೆ ಕಿಚ್ಚನ ಮಾತು..!! | Filmibeat Kannada

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ 'ಸೈರಾ ನರಸಿಂಹ ರೆಡ್ಡಿ'ಯಲ್ಲಿ ಸುದೀಪ್ ಅಭಿನಯ ಮಾಡುತ್ತಿರುವುದಾಗಿ ಖುದ್ದು ಕಿಚ್ಚ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. 'ಕೋಟಿಗೊಬ್ಬ3' ಚಿತ್ರದ ಶೂಟಿಂಗ್ ಮುಗಿಸಿಕೊಂಡು ನೇರವಾಗಿ ಸುದೀಪ್ 'ಸೈರಾ ನರಸಿಂಹ ರೆಡ್ಡಿ' ಚಿತ್ರೀಕರಣದ ಸೆಟ್ ಗೆ ಭೇಟಿ ಕೊಟ್ಟಿದ್ದಾರೆ.

ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿ ಆಗಿರುವ ಕಿಚ್ಚ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ 'ಈಗ', 'ಬಾಹುಬಲಿ' ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ನಲ್ಲಿಯೂ ಸುದೀಪ್ ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಜೊತೆ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಚಿತ್ರೀಕರಣದಲ್ಲಿ ಭಾಗಿ ಆದ ಮೊದಲ ದಿನದ ಅನುಭವದ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. "ಸೈರಾ ಸಿನಿಮಾದ ಮೊದಲ ದಿನ ತುಂಬಾ ಚೆನ್ನಾಗಿತ್ತು. ಮೊದಲ ಚಿತ್ರೀಕರಣ ಲೆಜೆಂಡ್ ಅವರ ಚಿತ್ರೀಕರಣ ಮಾತ್ರ ನೆಡೆಯಿತು. ನಾನು ಪ್ರತಿ ಸಲ ಲೆಜೆಂಡ್ ಅವರನ್ನು ಭೇಟಿ ಮಾಡುತ್ತೇನೆ.

ಪ್ರತಿ ಭಾರಿಯೂ ಅದೇ ನಮ್ರತೆ, ವಿನಯತೆ ಇರುತ್ತೆ. ಆದ್ದರಿಂದಲೇ ಅವರು ಇಷ್ಟು ವರ್ಷಗಳ ಕಾಲ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿರುವುದು. ಪ್ರತಿ ವಿಚಾರಕ್ಕೂ ಮಗುವಿನಂತೆ ಕುತೂಹಲ ತೋರುತ್ತಾರೆ. ಮತ್ತಷ್ಟು ವಿಚಾರಗಳು ಅವರ ಬಗ್ಗೆ ತಿಳಿದುಕೊಳ್ಳುವುದು, ನೋಡುವುದು ಇದೆ. ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

Sudeep has visited the Telugu film Sye Raa Narasimha Reddy shooting set.

ಸದ್ಯ ಟ್ವಿಟ್ಟರ್ ನಲ್ಲಿ ಕಿಚ್ಚನ ಅಭಿಪ್ರಾಯ ನೋಡಿರುವ ಅಭಿಮಾನಿಗಳಿಗೆ ಕಿಚ್ಚನ ಲುಕ್ ಸಿನಿಮಾದಲ್ಲಿ ಹೇಗಿರಲಿದೆ ಎನ್ನುವ ಕುತೂಹಲಗಳು ಹೆಚ್ಚಾಗಿದೆ.

More from Filmibeat

English summary
Kannada actor Sudeep has visited the Telugu film 'Sye Raa Narasimha Reddy' shooting set. Sudeep wrote on his Twitter account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X