ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!
ಕಿಚ್ಚ ಸುದೀಪ್ ದಿನೇ ದಿನೇ ಎತ್ತರಕ್ಕೆ ಬೆಳೆಯುತ್ತಿರುವ ನಟ. ಸುದೀಪ್ ಸ್ಟಾರ್ ಗಿರಿ ಹೆಚ್ಚಾಗುತ್ತಿರುವ ಹಾಗೆ ಅವರು ಟ್ವಿಟ್ಟರ್ ನಲ್ಲಿಯೂ ನಾಗಲೋಟ ಮುಂದುವರೆಸಿದ್ದಾರೆ. ಸದ್ಯ ಸುದೀಪ್ ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 9 ಲಕ್ಷ ದಾಟಿದೆ.
ಕಳೆದ ತಿಂಗಳು ಅಂದರೆ ಜುಲೈ 16ಕ್ಕೆ ಸರಿಯಾಗಿ ಸುದೀಪ್ ಟ್ವಿಟ್ಟರ್ ನಲ್ಲಿ 8 ಲಕ್ಷ ಫಾಲೋವರ್ಸ್ ಹೊಂದಿದ್ದರು. ಆದರೆ ಈಗ ಕೇವಲ 16 ದಿನಗಳಲ್ಲಿ ಸುದೀಪ್ ಒಂದು ಲಕ್ಷ ಹೆಚ್ಚು ಫಾಲೋವರ್ಸ್ ಗಳನ್ನು ಸಂಪಾದಿಸಿದ್ದಾರೆ. ಈ ಮೂಲಕ ಕನ್ನಡ ನಟರ ಪೈಕಿ ಸುದೀಪ್ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಖ್ಯಾತಿ ಪಡೆದಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸುದೀಪ್ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ಅಲ್ಲಿ ಅಭಿಮಾನಿಗಳ ಸಂದೇಶ, ಹಾಡು, ಫೋಟೋಗಳನ್ನ ನೋಡಿ ಮೆಚ್ಚುಗೆ ಸೂಚಿಸುತ್ತಿರುತ್ತಾರೆ.
More from Filmibeat
English summary
Kannada Actor Sudeep Have 9 Lakhs Followers In His Twitter Account.


Click it and Unblock the Notifications











