For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಸಹಾಯ ನೆನೆದು ಕಣ್ಣೀರಿಟ್ಟ ಮಹಿಳೆ

  |

  ನಟ ಸುದೀಪ್ ಅವರು ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಹಲವಾರು ಮಂದಿಗೆ ಸ್ವಂತ ಹಣದಲ್ಲಿ ಸಹಾಯ ಮಾಡುತ್ತಿದ್ದಾರೆ.

  ಕಿಚ್ಚ ಸರ್ ನನ್ನ ಆಯಸ್ಸೆಲ್ಲಾ‌ ನಿಮಗಿರಲಿ ಎಂದು ಕಣ್ಣೀರಿಟ್ಟ ಮಹಿಳೆ | Filmibeat Kannada

  ಇದೀಗ ಸೌಮ್ಯ ಎಂಬುವರು ಸುದೀಪ್ ಅವರು ತಮಗೆ ಮಾಡಿರುವ ಸಹಾಯದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. 'ನನ್ನ ಪತಿ ಉಳಿಯಲು ಸುದೀಪ್ ಮಾಡಿದ ಸಹಾಯ ಕಾರಣ' ಎಂದಿದ್ದಾರೆ.

  ಮಹಿಳೆ ಸೌಮ್ಯ ಮೊದಲಿನಿಂದಲೂ ಸುದೀಪ್ ಅಭಿಯಾನಿಯಂತೆ. ಇತ್ತೀಚೆಗೆ ಅವರ ಪತಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆಗೆ ದಾಖಲಾಗಿ ಇತ್ತೀಚೆಗಷ್ಟೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಬಂದಿದ್ದರು. ಅವರು ಬಂದ ಕೆಲವೇ ದಿನಗಳಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತು. ಸೌಮ್ಯ ಕುಟುಂಬ ಇತರರಿಗೂ ಸೋಂಕು ತಗುಲಿದೆ.

  ಮೊದಲೇ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸೌಮ್ಯ ಪತಿಗೆ ಕೊರೊನಾದಿಂದ ಸಮಸ್ಯೆ ಹೆಚ್ಚಾಗಿದೆ. ಬ್ಲಾಕ್‌ ಮಾರ್ಕೆಟ್‌ನಲ್ಲಿ ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಲಕ್ಷಾಂತರ ಹಣ ಕೊಟ್ಟು ಬ್ಲಾಕ್‌ನಲ್ಲಿ ಖರೀದಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸುವಾಗ 50,000 ಹಣ ಕೊಟ್ಟಿದ್ದಾರೆ. ಆದರೆ ಕೊನೆಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಬೇಕಾದರೆ ಮತ್ತೆ ಲಕ್ಷಕ್ಕೂ ಹೆಚ್ಚು ಹಣ ಕಟ್ಟುವಂತೆ ಆಸ್ಪತ್ರೆಯವರು ಒತ್ತಾಯಿಸಿದ್ದಾರೆ.

  ಇದರಿಂದ ಕಂಗಾಲಾದ ಸೌಮ್ಯ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ಗೆ ಕರೆ ಮಾಡಿ ಮನವಿ ಮಾಡಿದಾಗ ಸುದೀಪ್ ಕಡೆಯಿಂದ ನೆರವು ದೊರಕಿದೆ. ಈ ವಿಷಯವನ್ನು ಕಣ್ಣೀರು ಹಾಕುತ್ತಾ ಹೇಳಿರುವ ಸೌಮ್ಯ. 'ಸುದೀಪ್ ಅವರು ನನ್ನ ತಾಳಿಭಾಗ್ಯ ಉಳಿಸಿದ್ದಾರೆ' ಎಂದಿದ್ದಾರೆ.

  'ಸುದೀಪ್ ಅವರ ಅಭಿಮಾನಿಯಾಗಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮುಂದಿನ ಜನ್ಮದಲ್ಲಿ ಸಹ ನಾನು ಸುದೀಪ್ ಅವರ ಅಭಿಮಾನಿಯಾಗಿಯೇ ಹುಟ್ಟಬೇಕೆಂದು ಕೋರಿಕೊಳ್ಳುತ್ತೇನೆ' ಎಂದಿದ್ದಾರೆ.

  English summary
  woman Sowmya said Sudeep helped to save her husband who seriously affected by coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X