ನನ್ನ ಮಾಂಗಲ್ಯ ಉಳಿಸಿದ್ದೀರಿ, ಸಾಯೋವರೆಗೂ ನಿಮ್ಮ ಹೆಸರಲ್ಲಿ ದೀಪ ಹಚ್ಚುವೆ; ಕಿಚ್ಚನ ಅಭಿಮಾನಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತನ್ನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಯಲ್ಲಿ ಕಿಚ್ಚನ ಟ್ರಸ್ಟ್ ಸಾಕಷ್ಟು ಮಾನವೀಯ ಕೆಲಸ ಮಾಡಿದೆ. ಇತ್ತೀಚಿಗಷ್ಟೆ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸೋನು ಪಾಟೀಲ್ ತಾಯಿಗೆ ಸಹಾಯ ಮಾಡಿದ ಬೆನ್ನಲ್ಲೇ ಕಿಚ್ಚನ ಟ್ರಸ್ಟ್ ಈಗ ಮತ್ತೋರ್ವ ಅಭಿಮಾನಿಗೆ ಸಹಾಯ ಹಸ್ತ ಚಾಚಿದೆ.

Recommended Video

ಕಿಚ್ಚ ಸರ್ ನನ್ನ ಆಯಸ್ಸೆಲ್ಲಾ‌ ನಿಮಗಿರಲಿ ಎಂದು ಕಣ್ಣೀರಿಟ್ಟ ಮಹಿಳೆ | Filmibeat Kannada

ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ ಸೌಮ್ಯಾ ಅವರಿಗೆ ಸಹಾಯ ಮಾಡುವ ಮೂಲಕ ಸೌಮ್ಯಾ ಪತಿಯ ಜೀವ ಉಳಿಸಿದ್ದಾರೆ. ಈ ಬಗ್ಗೆ ಸೌಮ್ಯಾ ವಿಡಿಯೋ ಮೂಲಕ ಕಿಚ್ಚನಿಗೆ ಧನ್ಯವಾದ ತಿಳಿಸಿ ಕಣ್ಣೀರಾಕಿದ್ದಾರೆ. ಗಂಡನನ್ನು ಉಳಿಸಿಕೊಟ್ಟಿದ್ದೀರಿ, ಸಾಯುವವರೆಗೂ ನಿಮ್ಮ ಹೆಸರಿನಲ್ಲಿ ದೀಪಾ ಹಚ್ಚುವೆ ಎಂದು ಸೌಮ್ಯಾ ಕಣ್ಣೀರಾಕಿದ್ದಾರೆ. ಮುಂದೆ ಓದಿ...

ನನ್ನ ಮಾಂಗಲ್ಯ ಉಳಿಸಿದ್ದೀರಿ ಸುದೀಪ್ ಸರ್..

ನನ್ನ ಮಾಂಗಲ್ಯ ಉಳಿಸಿದ್ದೀರಿ ಸುದೀಪ್ ಸರ್..

'ನನ್ನ ಮಾಂಗಲ್ಯ ಉಳಿಸಿದ್ದೀರಾ ಸುದೀಪ್ ಸರ್. ನಿಮಗೆ ಕೋಟಿ ಕೋಟಿ ಧನ್ಯವಾದ ಹೇಳಿದ್ರು ಸಾಕಾಗಲ್ಲ. ತುಂಬಾ ವರ್ಷಗಳಿಂದ ನಾನು ನಿಮ್ಮ ಅಭಿಮಾನಿ. ನೀವು ಮಾಡುತ್ತಿದ್ದ ಕೆಲಸಗಳನ್ನು ನಾನು ನೋಡುತ್ತಿದೆ. ನನ್ನ ಗಂಡನಿಗೆ ತುಂಬಾ ಹುಷಾರಿರಲಿಲ್ಲ. ಆಸ್ಪತ್ರೆಗೆ ಸೇರಿಸಿದ್ವಿ. ಆಗ 1.5 ಯಿಂದ 2 ಲಕ್ಷ ರೂ ಖರ್ಚಾಗಿತ್ತು. ಮನೆಗೆ ಕರೆದುಕೊಂಡು ಬಂದ್ವಿ. ಆದರೆ ಮತ್ತೆ ಕೊರೊನಾ ಪಾಸಿಟಿವ್ ಬಂತು.' ಎಂದಿದ್ದಾರೆ.

ಬ್ಲಾಕ್ ನಲ್ಲಿ ರೆಮ್‌ಡೆಸಿವಿರ್‌ ಪಡೆದ ಸೌಮ್ಯಾ

ಬ್ಲಾಕ್ ನಲ್ಲಿ ರೆಮ್‌ಡೆಸಿವಿರ್‌ ಪಡೆದ ಸೌಮ್ಯಾ

'ಆಸ್ಪತ್ರೆ ದಾಖಲಿಸಲು ಹೋದ್ರೆ ರೆಮ್‌ಡೆಸಿವಿರ್‌ ಇಂಜೆಕ್ಷನ್ ತಂದರೆ ಮಾತ್ರ ದಾಖಲಿಸಿಕೊಳ್ಳುತ್ತೇವೆ ಅಂತ ಹೇಳಿದ್ರು. ಎಷ್ಟು ಹುಡುಕಿದ್ರು ರೆಮ್‌ಡೆಸಿವಿರ್‌ ಸಿಗಲಿಲ್ಲ. ಬಳಿಕ ಬ್ಲಾಕ್ ನಲ್ಲಿ 20 ಸಾವಿರ ಕೊಟ್ಟು ರೆಮ್‌ಡೆಸಿವಿರ್‌ ತೆಗೆದುಕೊಂಡೆ. 1.5 ಲಕ್ಷ ರೂ ಕೊಟ್ಟು 5 ಇಂಜೆಕ್ಷನ್ ತೆಗೆದುಕೊಂಡೆ' ಎಂದು ಹೇಳಿದ್ದಾರೆ.

1.30 ಲಕ್ಷ ರೂ. ಆಸ್ಪತ್ರೆ ಬಿಲ್ ಕಟ್ಟಿದ ಸುದೀಪ್

1.30 ಲಕ್ಷ ರೂ. ಆಸ್ಪತ್ರೆ ಬಿಲ್ ಕಟ್ಟಿದ ಸುದೀಪ್

'50 ಸಾವಿರ ರೂ. ಕೊಟ್ಟು ನೀಡಬೇಕು ಎಂದು ಆಸ್ಪತ್ರೆಯವರು ಹೇಳಿದ್ರು. ಹೇಗೋ ಹೊಂದಿಸಿ ಕಷ್ಟಪಟ್ಟು ಕಟ್ಟಿದ್ದೀವಿ. ಚಿಕಿತ್ಸೆ ಮುಗಿದ ಮೇಲೆ 1.30 ಲಕ್ಷ ರೂ. ಬಿಲ್ ಆಗಿತ್ತು. ಅಷ್ಟೊಂದು ದುಡ್ಡು ನಮ್ಮ ಬಳಿ ಇರಲಿಲ್ಲ. ಎಷ್ಟೆ ಪ್ರಯತ್ನ ಮಾಡಿದ್ರು ದುಡ್ಡು ಹೊಂದಿಸಲು ಆಗಲಿಲ್ಲ. ಆಗ ಸಹಾಯಕ್ಕೆ ಬಂದವರು ಸುದೀಪ್.'

ಸುದೀಪ್ ಹೆಸರು ಹೇಳಿ ದೀಪ ಹಚ್ಚುತ್ತೇನೆ

'ಸುದೀಪ್ ಅವರ ಟ್ರಸ್ಟ್ ಮೊದಲ ಮಾನವನಾಗು ಬಗ್ಗೆ ಮಾಹಿತಿ ಪಡೆದುಕೊಂಡು, ಸಂಪರ್ಕಿಸಿದೆ. ನಂತರ ಸುದೀಪ್ ಅವರಿಗೆ ಮಾಹಿತಿ ತಲುಪಿಸಿದೆ. ಕೂಡಲೇ ಸೌಮ್ಯಾಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಸುದೀಪ್ ಅವರಿಗೆ 10 ವರ್ಷಗಳಿಂದ ಅಭಿಮಾನಿ. ನಾನು ಗುಣ, ವ್ಯಕ್ತಿತ್ವ ನೋಡಿ ಅಭಿಮಾನಿಯಾದವಳು. ಈಗ ನಮಗೆ ಸಹಾಯ ಮಾಡಿದ್ದಾರೆ. ಮುಂದಿನ ಜನ್ಮದಲ್ಲೂ ನಾನು ಅವರ ಅಭಿಮಾನಿಯಾಗಿಯೇ ಹುಟ್ಟುತ್ತೇನೆ. ಸಾಯುವವರೆಗೂ ಸುದೀಪ್ ಅವರ ಹೆಸರು ಹೇಳಿ ದೀಪ ಹಚ್ಚುತ್ತೇನೆ' ಎಂದು ಹೇಳಿದ್ದಾರೆ.

More from Filmibeat

English summary
Actor Sudeep helps for his fan Sowmya's husband treatment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X