ಸ. ಹಿ. ಪ್ರಾ. ಪಾಠ ಶಾಲೆ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ?

By Pavithra

ರಿಷಬ್ ಶೆಟ್ಟಿ ನಿರ್ದೇಶಿಸಿ ನಿರ್ಮಾಣ ಮಾಡಿರುವ ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು ಚಿತ್ರದ ಹಾಡು ಬಿಡುಗಡೆ ಆಗಿ ಸಖತ್ ವೈರಲ್ ಆಗಿದೆ. ಸಾಂಗ್ ರಿಲೀಸ್ ಆದ 12 ದಿನಗಳಲ್ಲಿ 5 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದ್ದು ಸಿನಿ ಪ್ರೇಕ್ಷಕರು ಕೂಡ ಹಾಡನ್ನು ಮೆಚ್ಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಹಾಡು ಹಿಟ್ ಆಗಿರುವುದಕ್ಕೆ ಸಂತಸ ವ್ಯಕ್ತ ಪಡಿಸುವುದರ ಜೊತೆಯಲ್ಲಿ 'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಸಿನಿಮಾದಲ್ಲಿ ತಾವು ಕೂಡ ಭಾಗಿ ಆಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಹೌದು ಕಿಚ್ಚ ಸುದೀಪ್ ರಿಷಬ್ ಶೆಟ್ಟಿ ಅವರಿಗೆ ಶುಭ ಕೋರುವುದರ ಜೊತೆ ಜೊತೆಗೆ "ನಾನು ಯಾವುದೇ ರೀತಿಯಲ್ಲಿ ಚಿತ್ರಕ್ಕೆ ಕೊಡುಗೆ ನೀಡದೇ ಇದ್ದರೂ ಕೂಡ ಚಿತ್ರದಲ್ಲಿ ನನ್ನನ್ನೂ ಭಾಗಿಯಾಗಿ ಮಾಡಿರುವುದಕ್ಕೆ ಧನ್ಯವಾದಗಳು" ಎಂದಿದ್ದಾರೆ.

ಹಾಗಂತ 'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಚಿತ್ರದಲ್ಲಿ ಸುದೀಪ್ ಅಭಿನಯ ಮಾಡಿಲ್ಲ. ಆದರೆ ರಿಷಬ್ ಶೆಟ್ಟಿ ಅವರಿಗೆ ಕಿಚ್ಚನ ಮೇಲಿರುವ ಪ್ರೀತಿ ಮತ್ತು ಗೌರವಾರ್ಥವಾಗಿ ಕಿಚ್ಚ ಸುದೀಪ್ ಪ್ರಸೆಂಟ್ಸ್ ಎಂದು ತಮ್ಮ ಸಿನಿಮಾ ಪೋಸ್ಟರ್ ನಲ್ಲಿ ಹಾಕಿದ್ದಾರೆ.

Sudeep involved in Sa.Hi. Pra. Shaale, Kasaragodu kannada movie

'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಸಿನಿಮಾದಲ್ಲಿ ಅನಂತ್ ನಾಗ್, ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ಸಂಪತ್ ಪವೂರ್, ಮಹೇಂದ್ರ ಇನ್ನೂ ಅನೇಕರು ಅಭಿನಯ ಮಾಡಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು ಆಗಷ್ಟ್ 16 ರಂದು ಸಿನಿಮಾವನ್ನ ರಾಜ್ಯದ ಜನತೆ ಮುಂದೆ ತರಲಿದ್ದಾರೆ ನಿರ್ದೇಶಕರು.

More from Filmibeat

English summary
Kannada actor Sudeep involved in the Sa.Hi. Pra. Shaale, Kasaragodu kannada movie. Sudeep has said on Twitter about this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X