'ವಿಕ್ರಾಂತ್ ರೋಣ' ಬಳಿಕ ಮತ್ತೆ ಸುದೀಪ್ ಜೊತೆ ಅನುಪ್ ಭಂಡಾರಿ ಸಿನಿಮಾ: ಇಲ್ಲಿದೆ ಮಾಹಿತಿ

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್ ವುಡ್ ನ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಸಿನಿಮಾ ಚಿತ್ರೀಕರಣ ಮುಗಿಸಿರುವ ಸುದೀಪ್ ಬಿಡುಗಡೆಗೆ ಕಾಯುತ್ತಿದ್ದಾರೆ. ಕೋಟಿಗೊಬ್ಬ-3 ಚಿತ್ರೀಕರಣ ಮುಗಿದು ಅನೇಕ ತಿಂಗಳಾಗಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗಿದೆ.

ಇನ್ನು ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ವಿಕ್ರಾಂತ್ ರೋಣ ಬಳಿಕ ಸುದೀಪ್ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಕಿಚ್ಚ ಜನ್ಮದಿನದ ದಿನ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನುವ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಯಾವುದೇ ಹೊಸ ಸಿನಿಮಾ ಅನೌನ್ಸ್ ಮಾಡದೆ ಅಭಿಮಾನಿಗಳ ಕುತೂಹಲವನ್ನು ಹಾಗೆ ಕಾಯ್ದಿರಿಸಿದ್ದರು. ಮುಂದೆ ಓದಿ...

ತಮಿಳು ನಿರ್ದೇಶಕರ ಜೊತೆ ಸಿನಿಮಾ?

ತಮಿಳು ನಿರ್ದೇಶಕರ ಜೊತೆ ಸಿನಿಮಾ?

ಸದ್ಯ ಕಿಚ್ಚನ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಇತ್ತೀಚಿಗಷ್ಟೆ ತಮಿಳಿನ ಖ್ಯಾತ ನಿರ್ದೇಶಕರ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ ಕಿಚ್ಚ, ತಮಿಳು ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಆ ಬಗ್ಗೆ ಇನ್ನು ಅಧಿಕೃತವಾಗಿ ಯಾವದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇದೀಗ ಅಭಿನಯ ಚಕ್ರವರ್ತಿಯ ಮುಂದಿನ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಿದೆ.

ಅನೂಪ್ ಜೊತೆ 'ಅಶ್ವತ್ಥಾಮ' ಸಿನಿಮಾ

ಅನೂಪ್ ಜೊತೆ 'ಅಶ್ವತ್ಥಾಮ' ಸಿನಿಮಾ

ಮತ್ತೆ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅನೂಪ್ ಭಂಡಾರಿ ಮತ್ತು ಸುದೀಪ್ ಇಬ್ಬರು ಅಶ್ವತ್ಥಾಮ ಸಿನಿಮಾಗಾಗಿ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಕಿಚ್ಚ ಇತ್ತೀಚಿಗಷ್ಟೆ ಅಶ್ವತ್ಥಾಮ ಸಿನಿಮಾದ ಬಗ್ಗೆ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು.

ಅನೂಪ್ ಬಂಡಾರಿ ಹೇಳಿದ್ದೇನು?

ಅನೂಪ್ ಬಂಡಾರಿ ಹೇಳಿದ್ದೇನು?

ಅಶ್ವತ್ಥಾಮ ಒಂದು ಆಸಕ್ತದಾಯಕ ವಿಷಯ. ಅನೂಪ್ ಭಂಡಾರಿ ಈಗಾಗಲೇ ಕಥೆ ಬರೆಯುತ್ತಿದ್ದಾರೆ ಎಂದು ಹೇಳಿದ್ದರು. ಈ ಬಗ್ಗೆ ಸದ್ಯ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಿರ್ದೇಶಕ ಅನೂಪ್ ಭಂಡಾರಿ, "ಸುದೀಪ್ ಹೇಳಿದಂತೆ ನಾನು ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಎಲ್ಲಾ ಫೈನಲ್ ಆದ ಮೇಲೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ" ಎಂದು ಹೇಳಿದ್ದಾರೆ.

ಅನೂಪ್ ಭಂಡಾರಿ ಕನಸಿನ ಸಿನಿಮಾ

ಅನೂಪ್ ಭಂಡಾರಿ ಕನಸಿನ ಸಿನಿಮಾ

ಅಂದಹಾಗೆ ಅಶ್ವತ್ಥಾಮ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿಯವರ ಮಹತ್ವಾಕಾಂಕ್ಷೆಯ ಕನಸಿನ ಸಿನಿಮಾಗಳಲ್ಲಿ ಒಂದಾಗಿದೆ. ತನ್ನ ಕನಸಿನ ಸಿನಿಮಾವನ್ನು ಬೆಳ್ಳಿತೆರೆಮೇಲೆ ತರಲು ನಿರ್ದೇಶಕ ಅನೂಪ್ ಭಂಡಾರಿ ಉತ್ಸುಕರಾಗಿದ್ದಾರೆ. ಅಶ್ವತ್ಥಾಮ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತಯಾರಿಸಲು ಪ್ಲಾನ್ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಅಶ್ವತ್ಥಾಮ ಸಿನಿಮಾದ ಪೋಸ್ಟರ್ ವೈರಲ್ ಆಗಿದೆ. ಒಬ್ಬ ವ್ಯಕ್ತಿ ಗನ್ ಹಿಡಿದು ಶೂಟ್ ಮಾಡಲು ನಿಂತಿದ್ದಾರೆ. ವ್ಯಕ್ತಿಯ ಒಳಗೆ ಬಿಲ್ಲು ಬಾಣ ಹಿಡಿದಿರುವ ವ್ಯಕ್ತಿ ಇದ್ದಾರೆ. ಈ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಪೋಸ್ಟರ್ ನಲ್ಲಿ ಬಿಲ್ಲು ಬಾಣದ ಜೊತೆಗೆ ಗನ್ ಕೂಡ ಇರುವುದರಿಂದ ಇದು ಪ್ರಸ್ತುತ ಜಗತ್ತಿನ ಕಥೆ ಹೇಳ ಹೊರಟಿದ್ದಾರಾ ಎನ್ನುವ ಕುತೂಹಲ ಮೂಡಿಸಿದೆ.

'ಅಶ್ವತ್ಥಾಮ' ಹೆಸರಿನ ಸಿನಿಮಾ ಅನೌನ್ಸ್ ಆಗಿ ನಿಂತು ಹೋದ ಕಥೆ

'ಅಶ್ವತ್ಥಾಮ' ಹೆಸರಿನ ಸಿನಿಮಾ ಅನೌನ್ಸ್ ಆಗಿ ನಿಂತು ಹೋದ ಕಥೆ

ಅಂದಹಾಗೆ ಬಾಲಿವುಡ್ ನಲ್ಲೂ ಸಹ ಅಶ್ವತ್ಥಾಮ ಸಿನಿಮಾ ಸೆಟ್ಟೇರಿತ್ತು. ಖ್ಯಾತ ನಟ ವಿಕ್ಕಿ ಕೌಶಲ್ ಮತ್ತು ನಟಿ ಸಾರಾ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಸಿನಿಮಾ ಅನೌನ್ಸ್ ಆಗಿ ಕೆಲವೇ ದಿನಗಳಲ್ಲಿ ನಿಂತುಹೋಗಿದೆ. ಬಜೆಟ್ ಕಾರಣದಿಂದ ಸಿನಿಮಾ ನಿಂತುಹೋಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅಲ್ಲದೇ ಕನ್ನಡದಲ್ಲೂ ಈ ಮೊದಲು ಅಶ್ವತ್ಥಾಮ ಹೆಸರಿನ ಸಿನಿಮಾ ಘೋಷಣೆಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಚಿತ್ರಕ್ಕೆ ಸಚಿನ್ ರವಿ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಆ ಸಿನಿಮಾ ಕೂಡ ಅಲ್ಲಿಗೆ ನಿಂತು ಹೋಗಿದೆ. ಇನ್ನು ಸದ್ಯ ಸುದೀಪ್ ಅವರ ಅಶ್ವತ್ಥಾಮ ಜೀವಂತವಾಗಿದ್ದು, ಸದ್ಯ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಸುದೀಪ್ ಮತ್ತು ಅನೂಪ್ ಕಾಂಬಿನೇಷನ್ ನ ಅಶ್ವತ್ಥಾಮ ಸೆಟ್ಟೇರುವ ಸಾಧ್ಯತೆ ಇದೆ.

More from Filmibeat

English summary
Actor Sudeep is again teaming up with the Anup Bhandari for a new project titled Ashwatthama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X