ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ

ಪ್ರತಿಷ್ಟಿತ ಸಿನಿಮಾ ಉತ್ಸವಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಗೋವಾ ಅಂತರರಾಷ್ಟ್ರೀಯ ಸಿನಿಮಾ ಉತ್ಸವವನ್ನು ಉದ್ಘಾಟಿಸುವ ಅದೃಷ್ಟ ಕನ್ನಡದ ಸ್ಟಾರ್ ನಟನಿಗೆ ಒದಗಿ ಬಂದಿದೆ.

51ನೇ ಗೋವಾ ಅಂತರರಾಷ್ಟ್ರೀಯ ಸಿನಿಮಾ ಉತ್ಸವವು ಗೋವಾದಲ್ಲಿ ಇಂದು ಪ್ರಾರಂಭವಾಗುತ್ತಿದ್ದು. ಕನ್ನಡದ ಖ್ಯಾತ ನಟ ಸುದೀಪ್ ಅವರು ಉತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಮಂತ್ರಿಗಳು ಸಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಜೊತೆಗೆ ನಟ ಸುದೀಪ್ ಸಹ ಇರಲಿದ್ದಾರೆ. ಉದ್ಘಾಟನಾ ಕಾರ್ಯದಲ್ಲಿ ಸುದೀಪ್ ಸಹ ಕೈಜೋಡಿಲಿದ್ದಾರೆ. ಪಣಜಿಯ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

Sudeep Is Chief Guest In 51 Goa International Film Fest

Recommended Video

ಮತ್ತೊಂದು ದೊಡ್ಡ ಪ್ರಾಜೆಕ್ಟ್ ಅನೌನ್ಸ್ ಮಾಡಿದ Santosh Anandram | Filmibeat Kannada

ಈ ಹಿಂದೆ ನಟಿ ತಾರಾ ಅವರು ಗೋವಾ ಫಿಲಂ ಫೆಸ್ಟ್ ನಲ್ಲಿ 'ಆರತಿ ಗರ್ಲ್' ಆಗಿ ಭಾಗವಹಿಸಿದ್ದರು. ತಾರಾ ಜೊತೆಗೆ ಬಿಪಾಷಾ ಬಸು ಸಹ 'ಆರತಿ ಗರ್ಲ್' ಆಗಿದ್ದರು.

51ನೇ ಗೋವಾ ಅಂತರರಾಷ್ಟ್ರೀಯ ಸಿನಿಮಾ ಉತ್ಸವವು ಜನವರಿ 16 ರಿಂದ ಜನವರಿ 24 ರ ವರೆಗೆ ನಡೆಯಲಿದೆ. ವಿಶ್ವದ ಹಲವು ದೇಶಗಳ ಹಲವಾರು ಸಿನಿಮಾಗಳು ಸಿನಿಮಾ ಉತ್ಸವದಲ್ಲಿ ಪ್ರದರ್ಶನ ಕಾಣಲಿವೆ.

ಗೋವಾ ಚಲನಚಿತ್ರ ಉತ್ಸವದಲ್ಲಿ ವಿವಿಧ ದೇಶಗಳ 224 ಸಿನಿಮಾಗಳು ಭಾಗವಹಿಸಿವೆ. ಈ ಬಾರಿ ಆನ್‌ಲೈನ್ ಹಾಗೂ ನೇರವಾಗಿ ಎರಡು ರೀತಿಯಲ್ಲಿ ಸಿನಿಮಾ ಉತ್ಸವವನ್ನು ವೀಕ್ಷಿಸಬಹುದಾಗಿದೆ.

More from Filmibeat

English summary
Sudeep attending 51st Goa international film fest inauguration function as chief guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X